ಅಲೆ ತಾಕಿದರೆ ದಡ

Author : ವಾಸುದೇವ ನಾಡಿಗ್

Pages 104

₹ 80.00
Year of Publication: 2016
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯ ರಸ್ತೆ, 5ನೇ ಅಡ್ಡ ರಸ್ತೆ, ವಿಶ್ವಣ್ಣ ಲೇಔಟ್‌ , ಶಾಂತಿನಗರ ತುಮಕೂರು,572105

Synopsys

ಲೇಖಕ ವಾಸುದೇವ ನಾಡಿಗ್‌ ಅವರ ಕವನ ಸಂಕಲನ-ಅಲೆ ತಾಕಿದರೆ ದಡ. ಭಾವನೆಗಳ ಜೊತೆ ಸಂಘರ್ಷಕ್ಕಿಳಿದು ಸ್ಥಾನಗಿಟ್ಟಿಸಿಕೊಳ್ಳುವ ಕವನಸಂಕಲನವಾಗಿದೆ. ಓದುಗರ ಮನಸ್ಸಿಗೆ ಇಳಿದು ಸಂವೇದನಾಶೀಲತೆಯನ್ನು ಮೂಡಿಸಬಲ್ಲ ಅಂಶಗಳು ಇಲ್ಲಿದೆ. ಕವಿಯ ತಂದೆ ತೀರಿ ಹೋದ ಸಂದರ್ಭದಲ್ಲಿ ಬರೆದ ಕವಿತೆ ಓದುಗರ ಕಣ್ಣಲ್ಲಿ ನೀರು ತರಿಸುವಂತ್ತಿದೆ. ಭಾವನೆಗಳ ಮಾತಿಗೆ ತಲೆಬಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ತಂದೆಯ ಮೇಲಿನ ಕವಿಯ ಪ್ರೀತಿ, ಕಾಳಜಿ ಒಡಲಿಗೆ ಬೆಂಕಿ ತಾಕಿಸುತ್ತದೆ. ಕವನ ಸಂಕಲನದಲ್ಲಿ ಇರುವ ಪ್ರತಿಯೊಂದು ಪದ್ಯವು ಅರ್ಥಗರ್ಭಿತವಾಗಿದೆ. ಬೆಳಕನ್ನು ನೀಡುವ ದೀಪ ಬರೀ ಒಳಕೋಣೆಯನ್ನು ಬೆಳಗುವುದು ಸುಲಭ. ಆದರೆ ಗಾಳಿ ಮಳೆ ಊಬುವ ತುಟಿಗಳ ಮಧ್ಯೆ ಆರದೆ ಬೆಳಕ ಕೊಡಬೇಕು ಎಂಬ ಕವಿಯ ಹಂಬಲ ಅವರಲ್ಲಿರುವ ಸೂಕ್ಷ್ಮ ಮತ್ತು ಸಂವೇದನಶೀಲತೆಯನ್ನು ತೋರಿಸುತ್ತದೆ. ರಾತ್ರಿ ಹಗಲ್ಲೆನ್ನದೆ ಮಳೆಯನ್ನು ನೆಚ್ಚಿ ದುಡಿಯುವ ರೈತರ ಬದುಕೇ ಘೋರವಾಗಿದ್ದು, ಅವರು ತಮ್ಮ ಮಕ್ಕಳನ್ನು ಸಾಕವುದಕ್ಕಿಂತ ಹೆಚ್ಚಾಗಿಯೇ ಬೆಳೆಗಳ ಆರೈಕೆ ಮಾಡುವಲ್ಲಿ ಜೀವ ತೇದುತ್ತಾರೆ. ಅಂತಹ ರೈತನ ಕಡೆಗಣನೆಯನ್ನು ಇಷ್ಟಪಡದ ಕವಿ ನಾಡಿಗ್‌, ಅನ್ನದಾತನನ್ನು ಆರಾಧಿಸುವುದು ಮಾನವೀಯ ಮೌಲ್ಯವುಳ್ಳದ್ದು ಅನ್ನುವ ವಿಚಾರವೂ ಒಳಗೊಂಡಂತೆ ವೈವಿಧ್ಯತೆ ಒಳಗೊಂಡಿದೆ. 

About the Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...

READ MORE

Related Books