ಇಂತಿ ನದಿ

Author : ವಿಜಯಕಾಂತ ಪಾಟೀಲ

Pages 92

₹ 50.00
Year of Publication: 2015
Published by: ಲೋಹಿಯಾ ಪ್ರಕಾಶನ
Address: ’ಕ್ಷಿತಿಜ’, ಕಪ್ಪುಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ-583 103
Phone: 0839225741

Synopsys

’ಇಂತಿ ನದಿ’ ಸ್ವಗತ ರೂಪದ ಕವಿತೆ. ಓಡುವ ನದಿ ಸಾಗರವ ಸೇರಲೇಬೇಕು ಎಂಬ ಪ್ರಾಕೃತಿಕ ನಿಯಮಕ್ಕೆ ಬದ್ದವಾಗಿ ಈ ನದಿ ಎಷ್ಟೋ ಕಾಲದಿಂದಲೂ ನಿರುದ್ದೇಶಿಕವಾಗಿ ಕಡಲ ಕಡೆಗೆ ಹರಿಯುತ್ತಲೇ ಇದೆ. ಏರುಜಾಗದಿಂದ ಇಳಿಜಾರಿಗೆ ಹರಿಯುವ ಈ ಕ್ರಿಯೆಯಲ್ಲಿ ನದಿಗೆ ಹಲವು ಪ್ರಶ್ನೆಗಳಿವೆ. ತಾನು ಹರಿದು ಬಂದರೇನೆ ಕಡಲ ವಿಸ್ತಾರ, ಆಳ ವಿಸ್ತರಿಸುವುದು ಎಂಬ ಅರಿವಿರುವ ನದಿ ಅದರ ಮುಂದೆ ತನ್ನ ಅಸ್ತಿತ್ವವನ್ನು ಸಾಬೀತುಮಾಡುತ್ತದೆ. ಈ ಕೃತಿಯಲ್ಲಿ ತಮಾನದಿಂದಲೂ ಕಡಲಕಡೆಗೆ ಹರಿಯುತ್ತಿರುವ ತನ್ನ ಓಟವನ್ನು ’ಅಸಾಹಯಕತೆ’ಯೆಂದೇ ಭಾವಿಸುವ ನದಿ, ತನ್ನ ಹರಿಯುವ ಗುಣವನ್ನೇ ದುರುಪಯೋಗ ಪಡಿಸಿಕೊಂಡ ಕಡಲನ್ನ ಇನ್ನಿಲ್ಲದಂತೆ ವಾಗ್ದಾಲಿಗೆ ಒಳಪಡಿಸುತ್ತದೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books