ದಮನಿತೆ

Author : ತಿರುಪತಿ ನಾಯಕ್

Pages 112

₹ 90.00
Year of Publication: 2012
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ತಿರುಪತಿ ನಾಯಕ್ ಅವರ ದಮನಿತೆ ಕವನ ಸಂಕಲನವು ಮನುಷ್ಯನ ಅತ್ಯಂತ ಕ್ರೂರ, ಅತಿರೇಕಗಳನ್ನು ಪ್ರತಿಭಟಿಸುವಲ್ಲಿ ಚಾಟಿ ಹಿಡಿದು ನಿಂತಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾಗುವ ಮುಗ್ಧ ಹೆಣ್ಣು ಮಕ್ಕಳು ತಮ್ಮ ಮೇಲೆ ಉಂಟಾದ ಅನ್ಯಾಯಗಳನ್ನು ಮೆಟ್ಟಿ ನಿಲ್ಲಲಾಗದೆ, ದಮನಕ್ಕೊಳಗಾಗುವ ಸ್ಥಿತಿ ಭಾರತದಂತಹ ಸಾಂಸ್ಕೃತಿಕ ಪರಂಪರೆ ಹೊಂದಿದ ದೇಶದಲ್ಲಿ ಸಹಿಸಲಸಾಧ್ಯವಾದುದು.

ಅನ್ಯಾಯ, ಭ್ರಷ್ಟಾಚಾರ, ಅನೀತಿಗಳು, ಕೆಲವು ಬಾರಿ ಶಾಸನ ನಿರೂಪಕರಿಂದಲೇ ಉಲ್ಲಂಘನೆ ಆಗುತ್ತಿರುವುದರ ಕಾರಣ ದಮನಿತರು ದಮನಿತರಾಗಿಯೇ ಉಳಿದಿದ್ದಾರೆ. ಇಂತಹ ಹಲವಾರು ಪ್ರಖರ ಚಿಂತನೆಗಳ ಸಾರ ಸಂಗ್ರಹ ಈ ಕವನ ಸಂಕಲನದಲ್ಲಿದೆ.

About the Author

ತಿರುಪತಿ ನಾಯಕ್

ತಿರುಪತಿ ನಾಯಕ್- 1968ರಲ್ಲಿ ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕು, ಆಶಿಹಾಳ ತಾಂಡದಲ್ಲಿ ಜನಿಸಿದರು. ಆಶಿಹಾಳ್, ಮುದಗಲ್, ಮುದ್ದೇಬಿಹಾಳ್, ಧಾರವಾಡ, ಚಿದಂಬರಂ ಊರುಗಳಲ್ಲಿ ವ್ಯಾಸಂಗ, ಕನ್ನಡ, ಅರ್ಥಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ. ಮಲೆನಾಡಿನ ವಿವಿಧ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ವೃತ್ತಿ. ಕನ್ನಡ ಸಾಹಿತ್ಯ ಪರಿಷತ್ತು, ಭಾರತೀಯ ರೆಡ್‌ಕ್ರಾಸ್‌ನಲ್ಲಿ ಸಕ್ರಿಯ ಸೇವೆ. ಕನ್ನಡದ ಪ್ರಸಿದ್ದ ಪತ್ರಿಕೆಗಳಲ್ಲಿ ಬರೆದ ಅನುಭವ. ಆಕಾಶವಾಣಿಗಳಲ್ಲಿ ಹಲವಾರು ಚಿಂತನಗಳು, 'ಹಳ್ಳಿಗಳು ಸಾಯುತ್ತಿವೆ' ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, 'ಗಂಧ ಕುಸುಮ', 'ಭಾವ ಬಯಲು', 'ದೀಪವಿಲ್ಲದ ದಾರಿ', 'ದಮನಿತೆ' ಕವನ ಸಂಕಲನಗಳು. 'ಮುಳುಗಿದವರು', 'ನದಿ ...

READ MORE

Related Books