ಧ್ವನಿ ಪ್ರತಿಧ್ವನಿ

Author : ರವಿ. ಹೆಚ್ (ನೇಸರ)

Pages 123

₹ 100.00




Year of Publication: 2021
Published by: ನೇಸರ ಪ್ರಕಾಶನ
Address: ಹೊಟ್ಟಿಗನ ಹೊಸಹಳ್ಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ- 562160

Synopsys

‘ಧ್ವನಿ ಪ್ರತಿಧ್ವನಿ’ ರವಿ. ಹೆಚ್. (ನೇಸರ) ಕವನ ಸಂಕಲನ. ಈ ಕೃತಿಗೆ ಚುಟುಕು ಸಾಹಿತಿ ಪೂರ್ಣಚಂದ್ರ ಎಂ.ಎ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಈ ನಮ್ಮ ಕರುನಾಡು ಸಂಸ್ಕೃತಿ, ಸಾಹಿತ್ಯ, ಅಸ್ಮಿತೆ, ವೈಭವ, ವೈಶಿಷ್ಟತೆಯಿಂದ ಕೂಡಿದ್ದು, ಯಾವೊಬ್ಬ ಕವಿರತ್ನನ ಕೈಗೆ ಲೇಖನಿ ಬಂದ ಕೂಡಲೇ ತನ್ನ ಮನದಾಳದ ಮುತ್ತುಗಳನ್ನು ಪೋಣಿಸುತ್ತಾ ಅನಾವರಣಗೊಳಿಸುತ್ತಾನೆ. ಇಲ್ಲಿನ ಕವಿತೆಗಳು ಕೂಡ ಕವಿಯ ಅಂತರಾಳದ ಭಾವನೆಗಳನ್ನು ತೆರೆದಿಡುತ್ತಾ ಹೋಗುತ್ತವೆ. ಯುವ ಕವಿ ಹೆಚ್.ರವಿಯವರು ಅಪ್ಪಟ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ಸುಸಂಸ್ಕೃತ ಮನೆಯಿಂದ ತಾಯಿ-ತಂದೆಯಿಂದ ಕವಿತ ಕಲಿಕೆ, ನಿಷ್ಠೆ, ಪ್ರಾಮಾಣಿಕತೆ, ಪರೋಪಕಾರ, ಸರಳತೆ, ಇವು ಅವರ ಮೂಲ ದ್ರವ್ಯ ಈಗಾಗಲೇ ಅವರ ಕವಿತೆಗಳು ವಾಟ್ಸಪ್ನಲ್ಲಿ ಹರಿದಾಡಿವೆ. ಜೊತೆಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಧ್ವನಿ-ಪ್ರತಿಧ್ವನಿ ಎಂಬ ಕವನ ಸಂಕಲನ ಲೋಕಾರ್ಪಣೆಗೊಳ್ಳುತ್ತಿದೆ. ಧ್ವನಿ-ಪ್ರತಿಧ್ವನಿ ಎಂಬ ಕವನ ಸಂಕಲನ ಹೆಚ್.ರವಿ ರವರ ಮನಸ್ಸಿನ ಅಂತರಾಳದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಕವನಗಳು ಶೃಂಗಾರಕ್ಕೆ ಒಳಪಟ್ಟಿರುತ್ತವೆ ಎಂದಿದ್ದಾರೆ ಪೂರ್ಣಚಂದ್ರ ಎಂ.ಎ. ಜೊತೆಗೆ ಹೆಚ್.ರವಿಯವರು ಹೊರ ತರುತ್ತಿರುವ ಕವನ ಸಂಕಲನ ಒಂದು ಅಪರೂಪವೇ ಸರಿ. ಇವರು ಬರೆಯುವ ಲೇಖನಿಯಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ತುಂಬಲಿ ಎಂದು ಹಾರೈಸಿದ್ದಾರೆ.

About the Author

ರವಿ. ಹೆಚ್ (ನೇಸರ)
(19 June 1981)

ರವಿ ಹೆಚ್.(ನೇಸರ) ಅವರು ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊಟ್ಟಿಗನ ಹೊಸಹಳ್ಳಿ ಗ್ರಾಮದವರು. ವೃತ್ತಿಯಿಂದ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆಗಿರುವ ಅವರು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯೊಂದಿಗೆ ಸಾಹಿತ್ಯಿಕ ಆಸಕ್ತಿಯೊಂದಿರುವ ರವಿ ಅವರು ಧ್ವನಿ-ಪ್ರತಿಧ್ವನಿ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಓದು ಬರಹ ಅವರ ಹವ್ಯಾಸಗಳಾಗಿವೆ. ...

READ MORE

Related Books