ಹೌದು ನಾನು ಕೌದಿ

Author : ವಿಜಯಕಾಂತ ಪಾಟೀಲ

Pages 82

₹ 60.00
Year of Publication: 2013
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಯಾ- ಎಮ್ಮಿಗನೂರು, ಬಳ್ಳಾರಿ-583113
Phone: 9840354507

Synopsys

‘ಹೌದು ನಾನು ಕೌದಿ’ ಕವಿ, ಲೇಖಕ ವಿಜಯಕಾಂತ ಪಾಟೀಲ ಅವರ ಕವನ ಸಂಕಲನ. ಇಲ್ಲಿ ಕವಿಯು 'ಸ್ವಕಾವ್ಯ ಹಾದಿ'ಯ ತಿರುವಿನಲ್ಲಿದ್ದಾರೆ. ಪದಗುಣಿತಾರ್ಥ,ಹೊಸ ಅರ್ಥಗಳ ನೆಗೆತ ಹಾಗೂ ಸಂಯೋಜನೆಯ ಒಳದನಿಗಳು ಇಲ್ಲಿ ಓದಿನ ಪುಳಕಕ್ಕೆ ಒಳಮಾಡುತ್ತವೆ. ತಮ್ಮ ಸಹಜ ಭಾಷಾ ಸಾಮರ್ಥ್ಯದ ಮೂಲಕ, ಸಮಕಾಲೀನ ಕಾವ್ಯದ ಬೀಸನ್ನು ಆವಿಷ್ಕರಿಸಿಕೊಂಡು ಬರೆಯುತ್ತಿರುವ ಕವಿಯ ಕಾವ್ಯ,  ಓದಿನ ಖುಷಿಯ ಜೊತೆಗೆ ಕಾವ್ಯ ನಿಜಾನುಭವದ ಸಂವೇದನೆಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿವೆ. ಸಾಮಾಜಿಕ ಮತ್ತು ಸೌಂದರ್ಯ ಪ್ರಜ್ಞೆಗಳೆರಡನ್ನೂ ಏಕೀಭವಿಸಿ ನೋಡುವ ಪದ್ಯಗಳು ಇಲ್ಲಿವೆ.

About the Author

ವಿಜಯಕಾಂತ ಪಾಟೀಲ
(09 August 1969)

ವಿಜಯಕಾಂತ ಪಾಟೀಲ- ಹಾನಗಲ್ಲ ತಾಲೂಕಿನ ಕ್ಯಾಸನೂರಿನಲ್ಲಿ 1969 ರ ಅಗಸ್ಟ್ 9ರಂದು ಹುಟ್ಟಿದ್ದು; ಪ್ರಾಥಮಿಕ, ಪ್ರೌಢಶಿಕ್ಷಣ: ಕ್ಯಾಸನೂರು, ಶಕುನವಳ್ಳಿ (ಸೊರಬ); ಪಿಯುಸಿಯಿಂದ ಎಂ.ಎ (ಅರ್ಥಶಾಸ್ತ್ರ), ಎಲ್‌ಎಲ್‌ಬಿ ಧಾರವಾಡ; ಮೈಸೂರು ವಿವಿಯಲ್ಲಿ ಪತ್ರಿಕೋದ್ಯಮ ಡಿಪ್ಲೋಮಾ; ಸದ್ಯ ಹಾನಗಲ್ಲಿನಲ್ಲಿ ನ್ಯಾಯವಾದಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ, ಹಾನಗಲ್ಲಿನ ಕನ್ನಡ ಯುವಜನ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ. ಪ್ರಕಟಿತ ಕೃತಿಗಳು: ಮಾಸದ ಕಲೆಗಳು (1994), ಸಲಸಲದ ಪಾಡು : (2003), ನೂರು ಬಣ್ಣದ ಕಣ್ಣು (2012), ಹೌದು ನಾನು ಕೌದಿ (2013), ಇಂತಿ ನದಿ (20050)ಕವನ ಸಂಕಲನ. ಪ್ರಬಂಧ: ವಜನುಕಟ್ಟು (2005), ಮಕ್ಕಳ ಸಾಹಿತ್ಯ: ...

READ MORE

Related Books