ಬಾಲ್ಕನಿ ಕಂಡ ಕವಿತೆಗಳು

Author : ವಿಭಾ ಪುರೋಹಿತ

Pages 72

₹ 80.00
Year of Publication: 2020
Published by: ಅವನಿ ರಸಿಕರ ರಂಗ
Address: ‘ಅವನಿ’, 217, 2ನೇ ಮೇನ್, 3ನೇ ಕ್ರಾಸ್, ನಾರಾಯಣಪುರ ಧಾರವಾಡ- 580008
Phone: 08362472131

Synopsys

‘ಬಾಲ್ಕನಿ ಕಂಡ ಕವಿತೆಗಳು’ ವಿಭಾ ಪುರೋಹಿತ್ ಅವರ ಕವನ ಸಂಕಲನ. ಇಲ್ಲಿ ಮೂರು ಧಾರೆಯ ಕವಿತೆಗಳಿವೆ. ಸಾಹಿತಿ ಸತೀಶ್ ಕುಲಕರ್ಣಿ ಅವರು ಈ ಕೃತಿಗೆ ಮುನ್ನುಡಿ ಬರೆದು ‘ವ್ಯಕ್ತಿಗತ ಅನ್ನಬಹುದಾದ ಜೀವನ ದರ್ಶನ ಮತ್ತು ಕೋವಿಡ್ ಸಂದರ್ಭ ಇಲ್ಲಿ ಚಿತ್ರಿತವಾಗಿದೆ. ಇವುಗಳ ಒಟ್ಟು ಆಶೆಯ ಹಸನಾದ ಮನಸ್ಸು ಮತ್ತು ಸಮಾಜವೇ ಆಗಿದೆ. ಯಾವ ಸಂಗತಿಗೂ ಮುಖ ತಿರುಗಿಸದೆ ಅದನ್ನು ಪರೀಕ್ಷಿಸಿ ಅದಕ್ಕೊಂದು ಸದಾಶೆಯದ ಭಾವ ತುಂಬಿರುವುದು ವಿಭಾ ಕಾವ್ಯದ ಬಲವಾಗಿದೆ. ನಿತ್ಯ ಜೀವನದ ಸರಳ ಸಂಗತಿಗಳು ಮತ್ತು ತಮಗೆ ನಿಲುಕಿದ ವಸ್ತು ವಿಚಾರಗಳನ್ನು ಆಯ್ದು ಕವಿತೆಗಳನ್ನು ರಚಿಸಿದ್ದಾರೆ. ನಿತ್ಯದ ಕಪ್ ಚಹಾ, ಅಡುಗೆ ಮನೆಯ ಗ್ಯಾಸ್ ಸಿಲೆಂಡರಿನ ನೀಲಿಬೆಂಕಿ, ಅಪಾರ್ಟಂಟಿನ ಒಂದೇ ಬಾಗಿಲು, ಮನೆಯ ಅಂಗಳದ ಇಣಿಚಿ ನೋಡಿ ಬರೆದ ಮಾಳಿಗೆ ಮತ್ತು ಬಿಲ, ಜೀವ ಜಗತ್ತನ್ನು ಜಾಲಾಡಿದ ಕೊರೋನಾ ಕೈಯಲ್ಲೊಂದು ಕರಪತ್ರ ಮುಂತಾದ ಕವಿತೆಗಳು ನಮ್ಮವೇ ಅನಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.

About the Author

ವಿಭಾ ಪುರೋಹಿತ

ಕವಯತ್ರಿ ವಿಭಾ ಪುರೋಹಿತ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡತೇರರಿಗೆ ಕನ್ನಡ ಕಲಿಕಾ ತರಬೇತಿ ನೀಡುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಮತ್ತು ಹಾಸನದ ಎಫ್.ಎಂ. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕವನ -ಪ್ರಬಂಧ ಬರೆಯುವುದು, ಅನುವಾದ ಮಾಡುವುದು ಇವರ ಹವ್ಯಾಸ. 'ಮಲ್ಲಿಗೆ ಮತ್ತು ಇತರೆ ಕವಿತೆಗಳು' ಹಾಗೂ  'ದೀಪ ಹಚ್ಚು' ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.  ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸೇರಿದಂತೆ ರಾಜ್ಯ ಹಲವಾರು ಕನ್ನಡ ಪರ ಮತ್ತು ಸಾಹಿತ್ಯಕ ಸಂಘ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ...

READ MORE

Related Books