ನೀಹಾರಿಕೆ

Author : ಅನಸೂಯಾ ಜಹಗೀರದಾರ

Pages 72

₹ 100.00
Year of Publication: 2021
Published by: ಗುರು ಪ್ರಕಾಶನ
Address: ಕೋಟೆ, ಕೊಪ್ಪಳ -583 231

Synopsys

ಕವಯತ್ರಿ ಅನಸೂಯ ಜಹಗೀರದಾರ ಅವರ ‘ನೀಹಾರಿಕೆ’ ಕೃತಿಯು 151 ಹನಿಗವನಗಳ ಸಂಗ್ರಹವಾಗಿದೆ. ಉಡುಗಣದ ಒಡಲು ಎಂಬ ಉಪಶೀರ್ಷಿಕೆಯನ್ನು ಹೊಂದಿರುವ ಈ ಕೃತಿಗೆ ಶರಚ್ಚಂದ್ರ ತಳ್ಳಿ ಗಂಗಾವತಿ ಅವರು ಮುನ್ನುಡಿ ಬರೆದಿದ್ದಾರೆ. ಡಾ. ಆನಂದ್ ಋಗ್ವೇದಿ ಅವರು ಬೆನ್ನುಡಿ ಬರೆದಿದ್ದು,”ಇಲ್ಲಿಯ ಹನಿಗವಿತೆಗಳು ಸೂಕ್ಮ್ಷವಾಗಿ ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸುತ್ತವೆ. ರೈತ ಕವಿತೆಯು ‘ಮಣ್ಣು ಮಣ್ಣೆಂದೆನುತ ಮಣ್ಣಲ್ಲಿ ಮಣ್ಣಾದ‘ ಕಾಳಜಿಯ ಆರ್ದ್ರತೆಯನ್ನು ಹೇಳುತ್ತದೆ. ಚೈನಾ ಬಜಾರಿನ ಮಾಂತ್ರಿಕತೆಯಲ್ಲಿ ನಮ್ಮ ಗುಡಿಕೈಗಾರಿಕೆಗಳ ಹಿನ್ನಡೆ ಜಾಗತೀಕರಣದ ಪ್ರಭಾವದ ಪರಿಣಾಮಗಳನ್ನು ಕಾಣಬಹುದಾಗಿದೆ. ‘ಪ್ರೇಮಗವಿತೆಗಳಲಿ ಮಿಡಿಯಬೇಕು ಹೃದಯ ಪರಸ್ಪರ ಬದ್ಧತೆ’ಯಿಂದ ಎಂಬ ಮಾತು ಪ್ರೇಮವನ್ನು ಇಲ್ಲಿ ಜಾಗೃತ ಮನ ಕಾಣಬಲ್ಲದು ಅನ್ನುವುದು ಮನವರಿಕೆಯಾಗುತ್ತದೆ. ‘ನೀರೆ ನೀರಾದಳುಕಣ್ಣೀರಾದಳು, ಮೂಕವಾದಳು’ ಎಂದಾಗ ಇಲ್ಲಿಯ ಎಲ್ಲಾ ಹನಿಗಳೂ ಸೇರಿ ನೀರಾದಂತೆ, ಕಣ್ಣೀರು ಆದಂತೆ ಭಾಸವಾಗುವುದು ಅವಳ’ ಭಾವಪೂರ್ಣತೆಯೇ ಇಲ್ಲಿ ಹನಿಗವಿತೆಗಳಾಗಿ ಅಕ್ಕರದಲ್ಲಿ ಪ್ರತಿಬಿಂಬಿತವಾಗಿವೆ. ಅನಸೂಯ ಜಹಗೀರದಾರ ಅವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಕನ್ನಡ ಸಾಹಿತ್ಯ ಲೋಕವ ಪ್ರವೇಶಿಸಿ ಶ್ರೀಮಂತಗೊಳಿಸಲಿ” ಎಂದಿದ್ದಾರೆ.

About the Author

ಅನಸೂಯಾ ಜಹಗೀರದಾರ

ಅನಸೂಯಾ ಜಹಗೀರದಾರ ಅವರು ಮೂಲತಃ ಕೊಪ್ಪಳದವರು. ಕವಯತ್ರಿ, ಬರಹಗಾರರೂ, ಹಿಂದುಸ್ತಾನಿ ಸಂಗೀತ ಕಲಾವಿದೆಯೂ ಹೌದು. ಸರಕಾರಿ ಪ್ರೌಢ ಶಾಲಾ ಶಿಕ್ಷಕರು, ಕನ್ನಡ ಪರ ವಿವಿಧ ಸಂಘಟನೆಗಳಲಿ ಪದಾಧಿಕಾರಿ, ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಅಧ್ಯಕ್ಷರು.ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದಲ್ಲಿ ಎಂ ಎ, ಬಿ.ಇಡಿ ಪದವೀಧರರು.  ಕೃತಿಗಳು: ಒಡಲಬೆಂಕಿ (2014), ಆತ್ಮಾನುಸಂಧಾನ (ಗಜಲ್-2021), ನೀಹಾರಿಕೆ (ಹನಿಗವಿತೆಗಳು- 2021) ಇವರ ಕವನ ಸಂಕಲನಗಳು.  ಪ್ರಶಸ್ತಿ-ಪುರಸ್ಕಾರಗಳು: ಡಾ.ಡಿ. ಎಸ್. ಕರ್ಕಿ ರಾಜ್ಯ ಕಾವ್ಯ ಪ್ರಶಸ್ತಿ ( ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನ. ಬೆಳಗಾವಿ-ಒಡಲಬೆಂಕಿ ಕೃತಿಗೆ 2015ರಲ್ಲಿ), ಕಾವ್ಯಶ್ರೀ ಪ್ರಶಸ್ತಿ ( ಕಸ್ತೂರಿ ಸಿರಿಗನ್ನಡ ಬಳಗ ಮಂಡ್ಯ), ...

READ MORE

Related Books