ಬೊಗಸೆಯೊಳಗಿನ ಕಡಲು

Author : ಶ್ರೀಶ ಹುಟಗಿ

Pages 87

₹ 90.00
Year of Publication: 2021
Published by: ಕಾಚಕ್ಕಿ ಪ್ರಕಾಶನ
Address: #72, ದೈವ ಕೃಪಾ, ಡಿ ಗ್ರೂಫ್ ಬಡಾವಣೆ, ಕೆ.ಎಸ್. ಅಗ್ರಹಾರ, ಕುಣಿಗಲ್-572130
Phone: 8660788450

Synopsys

ಕವಿ ಶ್ರೀಶ ಹುಟಗಿ ಅವರ ಕವನ ಸಂಕಲನ- ಬೊಗಸೆಯೊಳಗಿನ ಕಡಲು. ಇಲ್ಲಿಯ ಕವನಗಳು ಪ್ರೇಮಾರಾಧನೆಯ ರಸಪಾಕ,ಶೃಂಗಾರದ ’ಆಲಂಬನ-ವಿಪ್ರಲಂಬ’ ವೇ ಪ್ರಧಾನವಾಗಿರುವ ರಚನೆಗಳನ್ನು ಹೊಂದಿದ್ದು, ತಮ್ಮ ಮಾರ್ದತೆಯಿಂದ ಮೈದುಂಬಿಕೊಂಡು ಮೆರೆದರೂ, ಎಲ್ಲೂ ಮೇರೆ ಮೀರದಿರುವ ಧನಾತ್ಮಕ ಗುಣ ಮೈಗೂಡಿಸಿಕೊಂಡಿವೆ. ಸೃಜನಶೀಲ ಮನಸ್ಸು ಹಲವು ಹರಿವುಗಳನ್ನು ಮೈಗೆ ಸುತ್ತಿಕೊಂಡೇ ಪ್ರವೇಶಿಸುತ್ತದೆ. ಅದು ಕಾವ್ಯೋನ್ಮುಖಿಯಾದ ಹಗಲು-ಇರುಳುಗಳನ್ನು ಹೃದಯದಲ್ಲಿ ಪ್ರತಿನಿಧಿಸುತ್ತದೆ. ಬರೀ ಪದಗಳೇ ಕುಣಿಸುವ ರಚನೆಗಳೇ ಅಧಿಕವಾಗಿರುವ ಈ ಕಾಲ ಘಟ್ಟದಲ್ಲಿ, ಈ ರೀತಿಯ ಪ್ರತಿಮೆ ಪೂರಿತ ಸಾಲು ಓದುಗನೆದೆಯಾಳಕ್ಕಿಳಿಯುವುದನ್ನು ಕಾಣುತ್ತೇವೆ. ಅಮ್ಮನೊಲವ ಕುರಿತ ಸಾಲುಗಳು, ಅವಳ ನೋವು, ನಲಿವುಗಳ ಕಡೆಗೆ ಒಳಗಣ್ಣು ಹಾಯಿಸಿ, ಜಗದ ಕಣ್ತೆರೆಸುವ ಕವಿಯ ರಚನೆ ತುಂಬಾ ಪರಿಣಾಮಕಾರಿಯಾಗಿದೆ. 

About the Author

ಶ್ರೀಶ ಹುಟಗಿ

ಲೇಖಕ ಶ್ರೀಶ ಹುಟಗಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದವರು. ಹುಟ್ಟೂರಿನಲ್ಲಿ,ಪ್ರಾಥಮಿಕ ಶಿಕ್ಷಣ, ಚಿಕ್ಕಪಡಸಲಗಿಯಲ್ಲಿ ಪ್ರೌಢಶಿಕ್ಷಣ, ಗುಳೇದಗುಡ್ಡದಲ್ಲಿ ಪದವಿ ಶಿಕ್ಷಣ  ಮತ್ತು ಬಾಗಲಕೋಟೆಯಲ್ಲಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ. ಶಿಕ್ಷಣ ಪೂರೈಸಿದ್ದಾರೆ. ಸಾಹಿತ್ಯ, ಸಂಗೀತ, ಫೋಟೋಗ್ರಫಿಯಲ್ಲಿ ಆಸಕ್ತರು. ಪ್ರಸ್ತುತ ವಿಜಯಪುರದಲ್ಲಿ ಬ್ಯಾಂಕ್ ಉದ್ಯೋಗಿ. ಕೃತಿಗಳು: ಬೊಗಸೆಯೊಳಗಿನ ಕಡಲು( ಕವನ ಸಂಕಲನ)  ...

READ MORE

Related Books