ಅರಿವೇ ಅಂಬೇಡ್ಕರ್‌

Author : ಹಂದಲಗೆರೆ ಗಿರೀಶ್

Pages 248

₹ 200.00

Synopsys

ಕತ್ತಲ ಹುರಿ ಮಾಡಿ ಹಿಂಡಿ ಬೆಳದಿಂಗಳ ತೆಗೆದವರು' ’ಅಭಿಮಾನದ ನೇಗಿಲಿಂದ ಬಂಜರು ನೆಲ ಉತ್ತವನೆ' ಅಂಬೇಡ್ಕರ್ ಕುರಿತು ನಾನಾ ವಿಧದಲ್ಲಿ ಚರ್ಚೆ ದೇಶ ವಿದೇಶದಲ್ಲಿ ನಡೆಯತ್ತಿದೆ.ಈ ಕವನ ಸಂಕನದಲ್ಲಿ ವಿವಿದ ಸಾಹಿತಿಗಳು ಅಂಬೇಡ್ಕರ್‌ರವರ ಕುರಿತು ರಚಿಸಿರುವ ಕವಿತೆಗಳ ಸಂಗ್ರಹವಿದೆ.ಈ ಸಂಕಲನದಲ್ಲಿ ಸರಿಸುಮಾರು 125 ಕವಿತೆಗಳಿವೆ. ದಲಿತ-ಬಂಡಾಯ ಚಳವಳಿ, ಮಹಿಳಾ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿಗಳು ಬೆನ್ನ ಹಿಂದೆ ಇವೆ. ವೈದಿಕ ಚಿಂತನೆಗಳಿಗೆ ಎದುರುಗೊಂಡ ವೈಚಾರಿಕ ಚಿಂತನೆಗಳ ಸಂಘರ್ಷ ಕಣ್ಣೆದುರಿಗಿದೆ. ಈ ಎಲ್ಲದರ ಹಿಂದೆ ಶತಮಾನಗಳ ಗಾಯಗಳಿಗೆ ಉರಿವ ವರ್ತಮಾನದಲ್ಲಿ ನಿಂತು ಮುಲಾಮು ಹುಡುಕುತ್ತಿರುವ ನೆಲೆಯಲ್ಲೆ ಅಂಬೇಡ್ಕರ್ ರೂಪುಗೊಂಡಿರುವುದು ಕನ್ನಡ ಕಾವ್ಯದ ವಿಶೇಷತೆ.

About the Author

ಹಂದಲಗೆರೆ ಗಿರೀಶ್

ಕವಿ, ಸಾಹಿತಿ, ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು. ತಂದೆ ಚಿಕ್ಕತಿಮ್ಮಯ್ಯ, ತಾಯಿ ಶಾಂತಮ್ಮ. ಸಾಮಾನ್ಯ ರೈತಕುಟುಂಬದಲ್ಲಿ ಹುಟ್ಟಿದ ಗಿರೀಶ್ ಕೆಲಸ ಅರಸಿ ಬೆಂಗಳೂರಿಗೆ ಬಂದವರು. ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಾ  ಬದುಕು ಕಟ್ಟಿಕೊಂಡಿದ್ದಾರೆ.  ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು. ಸಧ್ಯ ಕೃಷಿಯಲ್ಲೂ ತೊಡಗಿರುವುದರಿಂದ ಬಿಡುವಿನ ಸಮಯವೆಲ್ಲಾ ಕೃಷಿಗೆ ಮೀಸಲಿಟ್ಟಿದ್ದಾರೆ. ' ನೇಗಿಲ ಗೆರೆ ' 'ನೀರಮೇಗಲ ಸಹಿ' ಎಂಬ ಎರಡು ಕವನ ಸಂಕಲನಗಳು ಮತ್ತು 'ಅರಿವೇ ಅಂಬೇಡ್ಕರ್ 'ಕೃತಿ ಸಂಪಾದನೆ ಮಾಡಿದ್ದಾರೆ. ಅವರ ಕವಿತೆ ...

READ MORE

Related Books