ಮನದ ರಿಂಗಣ

Author : ಸುಧಾರಾಣಿ ನಾಯ್ಕ

Pages 101

₹ 80.00
Year of Publication: 2021
Published by: ಸ್ಪಂದನ ಪ್ರಕಾಶನ
Address: ಸಿದ್ದಾಪುರ, ಜಿಲ್ಲೆ: ಉತ್ತರ ಕನ್ನಡ

Synopsys

‘ಮನದ ರಿಂಗಣ’ ಲೇಖಕಿ ಸುಧಾರಾಣಿ ನಾಯ್ಕ ಅವರ ಕವನಸಂಕಲನ. ಈ ಕೃತಿಯ ಕುರಿತು ಸಂಪ್ರತಿ ಬರೆದಿರುವ ಕಾತ್ಯಾಯಿನಿ ಕುಂಜಿಬೆಟ್ಟು ಅವರು, ‘ಸುಧಾರಾಣಿ ಅಮ್ಮಂದಿರ ಬಗ್ಗೆ ಬರೆದಿರುವ ‘ಅವ್ವ’ ಕವನದಲ್ಲಿ ತುಂಬ ಹೆಪ್ಪುಗಟ್ಟಿರುವ ಅಮ್ಮನ ಮೌನ ಶತಮಾನಗಳಿಂದ ಪಿತೃ ಮೂಲೀಯ ವ್ಯವಸ್ಥೆಯೊಳಗೆ ಅನಿವಾರ್ಯವಾಗಿ ಹೆಣ್ಣು ನಾಲಗೆ ಕತ್ತರಿಸಲ್ಪಟ್ಟು ಅಸ್ತಿತ್ವವೇ ಇಲ್ಲದೆ ಅನುಭವಿಸುವ ಮೂಕಮೌನ, ಪ್ರತಿಭಟಿಸದೆ ಬಾಳುವ ಭಾರತೀಯ ಕುಟುಂಬ ವ್ಯವಸ್ಥೆಯ ಸಾರ್ವತ್ರಿಕ ಪ್ರತಿನಿಧಿಯಾದ ಅಮ್ಮನನ್ನು ಬಿಂಬಿಸಿದ್ದಾರೆ. ಕೊನೆಗೆ ಇಲ್ಲಿ ಸ್ತ್ರೀ ಸಮಾನತೆಯ ಕ್ರಾಂತಿ ಎಂಬುದು ಬರೀ ಭ್ರಾಂತಿಯಾಗಿದ್ದು ಅದು ಹಸಿದ ಹಸುವಿಗೆ ಹುಲಿ ತೊಗಲ ತೊಡಿಸಿದಂತೆ ಎಂಬಲ್ಲಿ ಕವನ ಮುಕ್ತಾಯವಾಗುತ್ತದೆ. ಇಲ್ಲಿ ಬಳಸಿರುವ ವಸ್ತುಗಳು ವೈವಿಧ್ಯಮಯವಾಗಿವೆ ಹಾಗೂ ಸರ್ವಕಾಲಿಕವಾಗಿವೆ. ಅವರು ಬಳಸಿರುವ ಭಾಷೆ, ಉಪಮೆ, ರೂಪಕ, ಪ್ರತಿಮೆ, ಸಂಕೇತಗಳಿಂದ ಶ್ರೀಮಂತವಾಗಿದ್ದು ಕವನಗಳ ಆಶಯಗಳನ್ನು ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ಸಫಲವಾಗಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸುಧಾರಾಣಿ ನಾಯ್ಕ

ಲೇಖಕಿ ಸುಧಾರಾಣಿ ನಾಯ್ಕ ಮೂಲತಃ ಸಿದ್ದಾಪುರದ ಸಾಯಿನಗರದವರು.ಸಿದ್ದಾಪುರ ತಾಲೂಕಿನ ಪ್ರಾಥಮಿಕ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಓದುವುದು, ಕವನ, ಕತೆ ಕಾರ್ಯಕ್ರಮಗಳ ನಿರೂಪಣೆ ಅವರ ಹವ್ಯಾಸ.     ಕೃತಿಗಳು: ಮನದ ರಿಂಗಣ (ಕವನ ಸಂಕಲನ) ...

READ MORE

Related Books