ಜೀವನ ಹೂ-ಬನ

Author : ಅಂಜನಾ ಕೃಷ್ಣಪ್ಪ

Pages 88

₹ 40.00
Year of Publication: 2013
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

‘ಜೀವನ ಹೂ-ಬನ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಐದನೇ ಕವನ ಸಂಕಲನ. ಬಹುತೇಕ ಬರೆಹ ಮತ್ತು ಭಾವಗಳು ಬಹು ಹಳೆಯವು, ಕಾಲದೊಂದಿಗೆ ಸಾಗಿ ಬಂದಂತಿವೆ. ಸಾಮಾನ್ಯವಾಗಿ ಎಲ್ಲರ ಜೀವನವು ಹುಟ್ಟಿನಿಂದ ಸಾವಿನತನಕ ಸಾಗುವ ಯಾನ. ಆ ಪಯಣದಲ್ಲಿ ಆರಂಭವಾದ ಸುಮಧುರ ಭಾವಲಹರಿಗೆ ಕವನ ರೂಪಬಂದಿದೆ. ಜೀವಿತ ಕಾಲದಿ ಅಂಡಲೆಯುವ ಬದುಕಿನ ಸ್ತರಗಳನ್ನು ಜೀವನ ಹೂಬನವೆಂದು ಭಾವಿಸಿ ಬರೆದ ಕವನಗಳು ನನ್ನ ಅನುಭವಗಳು ಮಾತ್ರ ಎನ್ನುತ್ತಾರೆ ಲೇಖಕಿ ಅಂಜನಾ ಕೃಷ್ಣಪ್ಪ.

ಯೌವ್ವನದ ಮಧುರ ಭಾವಗಳು ಸಂಸ್ಕೃತಿಯ ಧರ್ಮದೀಕ್ಷೆಗಳು ನಾಗರಿಕ ಜೀವನದ ಪದರುಗಳ ನಡುವೆ ಹರಿದಾಡುವ ಸಾರ ಸಂಸಾರದ ಅಲೆಗಳು ಹೂಬನದಲಿ ನೆಲೆಗೊಳ್ಳುವ ಲತೆಯಲಿ ಚಿಗುರೊಡೆಯುವ ಎಳೆಗಳು ತಾಯಿ ಬೇರಿನ ತವನಿಧಿಯಲಿ ರಸದಾನದ ಪರಿಗಳು ಎಲ್ಲವೂ ಸುಂದರ ಹಂದರವೀ ಜೀವನ ಹೂ-ಬನ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books