ತೋಚಿದ್ದೆ ಗೀಚಿದೆ ..!!

Author : ಆರ್ ಪಿ ಮಂಜುನಾಥ್ ಬಿ ಜಿ ದಿನ್ನೆ

Pages 88

₹ 100.00
Year of Publication: 2018
Published by: ಐಸಿರಿ ಪ್ರಕಾಶನ
Address: ಐಸಿರಿ ಪ್ರಕಾಶನ, # 468, 2ನೇ ‘ಸಿ’ ಮುಖ್ಯರಸ್ತೆ, 11ನೇ ಬ್ಲಾಕ್, ನಾಗರಭಾವಿ, 2ನೇ ಹಂತ, ಬೆಂಗಳೂರು-72.
Phone: 9341804700

Synopsys

'ತೋಚಿದ್ದೆ ಗೀಚಿದೆ' ಕವಿ ಆರ್.ಪಿ.ಮಂಜುನಾಥ ಬಿ.ಜಿ.ದಿನ್ನೆ ಅವರ ಕವನ ಸಂಕಲನ. ಭಾವ ಬತ್ತುವ ಮುನ್ನ ಎಂಬ ಉಪಶೀರ್ಷಿಕೆಯಡಿ ಕವನಗಳು ಮೈದೆಳೆದಿವೆ.ಪ್ರೀತಿ-ಪ್ರಣಯ, ಮಮತೆ, ದೇಶ-ಭಾಷೆ, ಸಂಸ್ಕೃತಿ, ಬಾಲ್ಯ, ಹರೆಯ, ಗೆಳೆತನ, ಹೊಸತನ, ಸಾಮಾಜಿಕ ಕಾಳಜಿ ,ಮಾನವೀಯ ಮೌಲ್ಯ ,ಜೀವನಪ್ರೀತಿ , ಬದ್ಧತೆ ಹೀಗೆ ವಯೋಮಾನಕ್ಕೆ ತಕ್ಕಂತೆ ಭಾವ ಮೂಲದಲ್ಲಿ ಹೊರಹೊಮ್ಮಿದ ಅನಿಸಿಕೆಗಳಿಗೆ ಅಕ್ಷರ ರೂಪ ಕೊಟ್ಟು ಕವನಗಳನ್ನಾಗಿಸಿದ್ದಾರೆ. ವಸ್ತು, ನಿರೂಪಣಾ ಶೈಲಿಯಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. 

About the Author

ಆರ್ ಪಿ ಮಂಜುನಾಥ್ ಬಿ ಜಿ ದಿನ್ನೆ
(01 June 1989)

ಲೇಖಕ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಅವರು ಮೂಲತಃ (ಜನನ: 01-06- 1989) ತಂದೆ - ಆರ್.ಪ್ರಕಾಶಗೌಡ ತಾಯಿ - ಆರ್.ಅನ್ನಪೂರ್ಣಮ್ಮ.  ಬೈರಗಾಮದಿನ್ನೆ ಹಾಗೂ ಕೊತ್ತಲಚಿಂತಾದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಣ, ಬಳ್ಳಾರಿಯಲ್ಲಿ ಪಿಯು ಕಾಲೇಜು ನಂತರ ಡಿ.ಎಡ್, ತದನಂತರ ಬಿ.ಎ. ಪದವಿ ಪಡೆದರು. ಕನ್ನಡ ವಿ.ವಿ.ಯಿಂದ ಡಿಪ್ಲೊಮಾ ಇನ್ ಡ್ರಾಮಾ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಬಿ.ಎಡ್, ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷೆಯಲ್ಲಿ ನಾಟಕ ಕಲೆ ವಿಷಯದಲ್ಲಿ ರಾಜ್ಯಕ್ಕೆ ಅತಿಹೆಚ್ಚು ಅಂಕ ಗಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಿಂದ ನಾಟಕ ಕಲೆಯ ಸ್ನಾತಕೋತ್ತರ ಪದವಿಯಲ್ಲಿ ಅತಿಹೆಚ್ಚು ಅಂಕ ಗಳಿಸಿ "ಚಿನ್ನದ ಪದಕ"ಪಡೆದಿದ್ದಾರೆ. ಪ್ರಶಸ್ತಿಗಳು : ಬಳ್ಳಾರಿ ...

READ MORE

Related Books