ಗೆಳತಿಗೊಂದು ಪ್ರಶ್ನೆ

Author : ರಮೇಶಬಾಬು ಯಾಳಗಿ

Pages 82

₹ 20.00
Year of Publication: 2003
Published by: ಗಾಂಧಿ ಸ್ಮಾರಕ ಶಿಕ್ಷಣ ಸಂಸ್ಥೆ
Address: ಮಾನವಿ, ರಾಯಚೂರು

Synopsys

ಬಾಲ್ಯದಲ್ಲಿ ಕಾಡಿದ ಹಲವು ಭಾವನೆಗಳು ಯೌವ್ವನಕ್ಕೆ ಬರುವಷ್ಟರಲ್ಲಿ ಪ್ರಶ್ನೆಗಳಾಗಿವೆ ಕವಿಗೆ. ಅಂಥ ಪ್ರಶ್ನೆಗಳಿಗೆ ಗೆಳತಿಯ ನೆಪದಲ್ಲಿ ಉತ್ತರ ಹುಡುಕಿಕೊಳ್ಳುವ ಹಂಬಲಗಳು ಇಲ್ಲಿ ಕವಿತೆಗಳಾಗಿ ಮೂಡಿ ಬಂದಿವೆ. ಕವಿಗೆ ವಾಸ್ತವದ ಹಸಿವಿದ್ದರೂ ಕಾವ್ಯದ ಕಾರಣಕ್ಕಾಗಿ ದೇವರು, ಧರ್ಮ, ಸಂಪ್ರದಾಯಗಳಲ್ಲಿ ಶಾಮೀಲು ಆಗಿದ್ದಾರೆ ಅನಿಸುತ್ತದೆ. ಹಾಗಾಗಿ, ಕವಿಯಾಳಗಿ ಅವರು ಇಲ್ಲಿ ಪರಂಪರೆ-ಸಂಪ್ರದಾಯಗಳನ್ನು ಗ್ರಹಿಸಿಕೊಂಡಿರುವ ರೀತಿ ಮುಗ್ಧ ಎಂದರೆ ತಪ್ಪಾಗಲಾರದು.

About the Author

ರಮೇಶಬಾಬು ಯಾಳಗಿ
(15 October 1970)

ಮಾನ್ವಿಯ ಕಲ್ಮಠ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಮೇಶಬಾಬು ಯಾಳಗಿ ಅವರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಶಹಾಪುರದಲ್ಲಿ ಪಡೆದ ಅವರು ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅನುಭವಗಳ ಅನಾವರಣ, ಭರವಸೆಯ ಬೇಸಾಯ, ಸರ್ವಜ್ಞನ ವಿಚಾರ ದರ್ಶನ ಅವರ ಪ್ರಕಟಿತ ಕೃತಿಗಳು. ...

READ MORE

Related Books