ಕಲರವ

Author : ಅನಿಲ್ ಪಿ. ಗ್ರಾಮಪುರೋಹಿತ್

Pages 72

₹ 0.00
Year of Publication: 2020
Published by: ಅನಿಲ್‌ಕುಮಾರ್‌ ಪಿ. ಗ್ರಾಮಪುರೋಹಿತ್ ಗುನ್ನಾಪುರ
Address: ಶಿವಾಜಿನಗರ, ಬೆಂಗಳೂರು
Phone: 9886243473

Synopsys

‘ಕಲರವ’ ಕವನ ಸಂಕಲನದಲ್ಲಿ ಒಟ್ಟು 64 ಕವನಗಳಿದ್ದು ಎಲ್ಲವೂ ಪೊಲೀಸ್ ಅಧಿಕಾರಿಯೊಬ್ಬನ ಜೀವನ ದರ್ಶನದ ಪ್ರತಿರೂಪವೆಂಬಂತೆ ಕಂಡುಬರುತ್ತವೆ. ವಿಶೇಷವಾಗಿ ಈ ಕೊರೊನಾ ಸೃಷ್ಟಿಸಿದ ಅವಾಂತರದಲ್ಲಿ ಪೊಲೀಸರ ಜೀವನದ ಸಂಕಷ್ಟಗಳು ಹಾಗೂ ಆತಂಕದೊಂದಿಗೆ ನಿರ್ವಹಿಸುವ ಕರ್ತವ್ಯ ಜವಾಬ್ದಾರಿಗಳ ಬದ್ಧತೆ ಕುರಿತು ಈ ಕವಿತೆಗಳು ಒಳನೋಟ ಚೆಲ್ಲುತ್ತವೆ. ಮನಸು, ಕನಸುಗಳು,ಭಾವನೆಗಳು,ಪ್ರಕೃತಿ ಮತ್ತು ಬೃಂದಾವನದ ಕೃಷ್ಣ ಇಲ್ಲಿಯ ಕವನಗಳಲ್ಲಿ ಮುಖ್ಯವಾಗಿ ಕಂಡುಬರುವ ವಿಷಯಗಳು ಮತ್ತು ಪಾತ್ರಗಳಾಗಿವೆ. ಸಂಕಲನದ ಬೆಲೆ ಉಚಿತ. 

About the Author

ಅನಿಲ್ ಪಿ. ಗ್ರಾಮಪುರೋಹಿತ್
(17 April 1973)

ವೃತ್ತಿಯಿಂದ ಟ್ರಾಫಿಕ್‌ ಪೊಲೀಸ್‌ ಆಗಿರುವ ಅನಿಲ್ ಪಿ. ಗ್ರಾಮಪುರೋಹಿತ್ ಪ್ರವೃತ್ತಿಯಿಂದ ಸಾಹಿತಿ. ಹುಟ್ಟಿದ್ದು 17 ಏಪ್ರಿಲ್ 1973 ಗದಗ ಜಿಲ್ಲೆಯ ನರೇಗಲ್‌ನಲ್ಲಿ. ರೇಷ್ಮೆ ಕೃಷಿಯಲ್ಲಿ ಎಂ.ಎಸ್ಸಿ, ಎಂ.ಫಿಲ್, ಪಿಎಚ್‌.ಡಿ, ಪದವೀಧರರು. ಕುವೆಂಪು ಅವರ ಬೆರಳ್ಗೆ ಕೊರಳ್ ನಾಟಕದಲ್ಲಿ ಬರುವ ಪ್ರತಿ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾರೆ. ಮೊದಲ ಕವನ ಸಂಕಲನ- `ರಸ್ತೆ ಸುರಕ್ಷತೆ’. ‘ರಸ್ತೆ ಸುರಕ್ಷತಾ ಶತಕ’ ಹಾಗೂ  ‘ತುಂತುರು’-ಎರಡು ಪ್ರತ್ಯೇಕ ಕವನ ಸಂಕಲನಗಳು. ‘ಮೆಲುಕು’ - ಪ್ರಬಂಧ ಸಂಕಲನ. ಕೊರೊನಾ ಸಂದರ್ಭದಲ್ಲಿ ಪೊಲೀಸರ ಬದುಕು-ಭಾವನೆ ಗಳನ್ನು ತೋರುವ 'ಕೋವಿಡ್ -19 ಕರಾಳ ನೆರಳಿನ ದಿನಗಳಲ್ಲಿ’ -ಕವನ ಸಂಕಲನ ಪ್ರಕಟಿಸಿದ್ದಾರೆ. ...

READ MORE

Related Books