ಸರಹದ್ದುಗಳಿಲ್ಲದ ಭೂಮಿಯ ಕನಸು

Author : ನಿರ್ಮಲಾ ಶೆಟ್ಟರ್

Pages 104

₹ 100.00
Year of Publication: 2020
Published by: ಫಾಲ್ಗುಣಿ ಪ್ರಕಾಶನ
Address: ಸುರುಗೇಶ್ವರ ನಿಲಯ, ದೇಸಾಯಿ ಬಣ, ಲಕ್ಷ್ಮೇಶ್ವರ, ಗದಗ ಜಿಲ್ಲೆ
Phone: 9986334719

Synopsys

ನಿರ್ಮಲಾ ಶೆಟ್ಟರ್‌ ಅವರ ಕವನ ಸಂಕಲನ ‘ಸರಹದ್ದುಗಳಿಲ್ಲದ ಭೂಮಿಯ ಕನಸು’ ಒಟ್ಟು ನಲವತ್ನಾಲ್ಕು ಕವಿತೆಗಳಿವೆ.  ಕೃತಿಗೆ ಮುನ್ನುಡಿ ಬರೆದ ಲೇಖಕ ಶೂದ್ರ ಶ್ರೀನಿವಾಸ್‌ ಅವರು "ಸೂತ್ರ ಬಿಗಿವ ಶಾಸ್ತ್ರದೊಡನೆಯೆ ಎದೆ ಬಿರಿದು ಉಸಿರು ಕಂಪಿಸುವಲ್ಲಿ ಹಾರುವಾಸೆ ರೆಕ್ಕೆ ಇಲ್ಲದೆಯು ಹಕ್ಕಿ ನೋಟದ ವಿಸ್ತಾರ ದಾಚೆಗೂ" `ಕಣ್ಣಬಿದಿರು’ ಕವನದ ಈ ಸಾಲುಗಳನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು. ಮನುಷ್ಯ ಎಷ್ಟೋ ಕಾಲದಿಂದ ಇಂಥ ಬಹು ದೊಡ್ಡ ಕನಸುಗಳ ಆಶಯವನ್ನು ಮುಂದಿಟ್ಟುಕೊಂಡೇ ಅನುಭವವನ್ನು ಸಮೃದ್ಧಗೊಳಿಸಿಕೊಳ್ಳುವಲ್ಲಿ ತೃಪ್ತಿ ಮತ್ತು ಅತೃಪ್ತಿಯ ನಡುವೆ ಒದ್ದಾಡುವುದು.ಕಾವ್ಯದ ಧ್ವನಿ ಗಟ್ಡಿಯಾಗುವುದು ಇಂಥ ಕಡೆಯಲ್ಲಿಯೇ’ ಎಂದು ಕವಿತೆಗಳನ್ನು ವಿಶ್ಲೇಷಿಸಿದ್ದಾರೆ.

About the Author

ನಿರ್ಮಲಾ ಶೆಟ್ಟರ್

ಕವಿ ನಿರ್ಮಲಾ ಶೆಟ್ಟರ್‌ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಧಾರವಾಡದ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕಿಯಾಗಿದ್ದು, ಇವರಿಗೆ ತಾಲೂಕು ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. . ಕೃತಿಗಳು: ಬೆಳಕಿನೊಡನೆ ಪಯಣ (ಕವನ ಸಂಕಲನ), ನಿನ್ನ ಧ್ಯಾನಿಸಿದ ಮೇಲೂ (ಗಜಲ್ ಸಂಕಲನ), ‘ಸರಹದ್ದುಗಳಿಲ್ಲದ ಭೂಮಿಯ ಕನಸು (ಕವನ ಸಂಕಲನ). . *ಆಕಾಶವಾಣಿಯಲ್ಲಿ ಕತೆ ಕವಿತೆ ವಾಚನ. 2020 ರಲ್ಲಿ ಪ್ರಜಾವಾಣಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ. ಅನುಪಮಾ ನಿರಂಜನ ಕಥಾ ಬಹುಮಾನ ಲಭಿಸಿದೆ. ...

READ MORE

Related Books