ಸತ್ಯಮಂಗಲ ಮಹದೇವ ಅವರು ಮಾನವತಾವಾದಿ ಮಹಾತ್ಮ ಗಾಂಧೀಜಿಗೆ ಅರ್ಪಿಸಿರುವ ಕೃತಿ ಪಂಚವರ್ಣದ ಹಂಸ. ಕವಿತೆಗಳ ಗುಚ್ಚವಾಗಿರುವ ಈ ಕೃತಿ ಇಂದಿನ ಸಮಾಜದ ಕೈಗನ್ನಡಿಯಂತಿದೆ. ಮನುಷ್ಯ ಪ್ರಜ್ಞೆಯಿರುವವರು ಲೋಕದ ಎಡತಾಕುಗಳಿಗೆ ತನ್ನನ್ನು ಈಡುಮಾಡಿಕೊಂಡು ವಿಶ್ಲೇಷಿಸಿಕೊಳ್ಳುವ ಅಗತ್ಯ ಇಂದಿನ ತುರ್ತು ಎನ್ನುವ ಲೇಖಕರು ತಮ್ಮ ಕವಿತೆಗಳ ಮೂಲಕ ಆತಂಕ, ದುಗುಡವನ್ನು ಹೊರಹಾಕುತ್ತಾ, ನಾವು ಪ್ರಶ್ನಿಸುವುದನ್ನು ಕಲಿಯಬೇಕು, ಅವ್ಯವಸ್ಥೆಯ ವಿರುದ್ಧ ಮಾತನಾಡಬೇಕು ಎಂದಿದ್ದಾರೆ.
ಸತ್ಯಮಂಗಲ ಮಹದೇವ ಅವರು ತಮ್ಮ ಕಾವ್ಯಯಾನದಲ್ಲಿ ಅಗ್ನಿ ಮತ್ತು ನೀರೆಂಬ ಎರಡು ವೈರುಧ್ಯಗಳ ನಡುವೆ ಬಿಗಿದಿರುವ ದಾರದ ಮೇಲೆ ಪಯಣಿಸುತ್ತಿದ್ದಾರೆ. ಒಂದು ಲೋಕದೆಚ್ಚರ ಮತ್ತೊಂದು ಲೋಕಭ್ರಮೆ. ಭ್ರಮೆ ಮತ್ತು ಎಚ್ಚರ ಇಂದಿನ ಪರಿಸ್ಥಿತಿಯಲ್ಲಿ ಒಂದೇ ಎಂದು ನಂಬಿಸುವ ಮಟ್ಟಿಗೆ ಜನರ ಪ್ರಜ್ಞೆಯ ಮೇಲೆ ದಾಳಿ ಮಾಡಲಾಗುತ್ತಿದ.ಎ ಯಾವುದು ಭ್ರಮೆ ಮತ್ತು ಯಾವುದು ಎಚ್ಚರ ಎನ್ನುವ ಹುನ್ನಾರ ಮತ್ತು ಉಪಕಾರಗಳನ್ನು ಅರಿಯುವ ಮನಃಸ್ಥಿತಿಯನ್ನೇ ಬದಲು ಮಾಡಿಬಿಟ್ಟಿವೆ. ಇಂತಹ ಸಂದರ್ಭದಲ್ಲಿ ಪಂಚವರ್ಣದ ಹಂಸ ಸಂಕಲನದ ಕವಿತೆಗಳು ಪ್ರಸ್ತುತ ಎನಿಸುತ್ತವೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ.
ಈ ಸಂಕಲನದ ಒಂದೆರಡು ಕವಿತೆಗಳು ಓದಿಗಾಗಿ:
ಗುಡಿ, ಚರ್ಚು, ಮಸೀದಿಗಳೊಳಗೆ
ಮೈಕು ಬಂದ ದಿನವೇ
ಪ್ರಾರ್ಥನೆ ಅತ್ಯಾಚಾರಕ್ಕೊಳಗಾದಳು
ಎಲ್ಲಿ ಸ್ವಲ್ಪ ಜಾಗ ಕೊಡಿ
ಮಾತನಾಡಬೇಕಿದೆ ನಾನು
ರಕ್ಕಸ ಏಕಾಂತಗಳ ನಡುವೆ
ಕವಿ, ಲೇಖಕ ಸತ್ಯಮಂಗಲ ಮಹಾದೇವ ಅವರು ಮೂಲತ: ತುಮಕೂರು ಜಿಲ್ಲೆಯ ಜಯ ಸತ್ಯಮಂಗಲ ಗ್ರಾಮದ ದಲಿತ ಕುಟುಂಬದಲ್ಲಿ 1983ರಲ್ಲಿ ಜೂನ್ 12ರಂದು ಜನಿಸಿದರು. ತಂದೆ ರಾಜಣ್ಣ ಮತ್ತು ತಾಯಿ ಜಯಮ್ಮ. ಪದವಿ ವಿದ್ಯಾರ್ಥಿಯಾಗಿರುವಾಗಲೇ 2003ರಲ್ಲಿ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಏರ್ಪಡಿಸಿದ ಆಂತರಕಾಲೇಜು ಕವನ ಸ್ಪರ್ಧೆಯಲ್ಲಿ "ಡಾ. ದ.ರಾ ಬೇಂದ್ರೆ ಸ್ಮೃತಿ ಪ್ರಶಸ್ತಿ" ಹಾಗೂ 2015 ನೇ ಸಾಲಿನ 'ಸಂಚಯ ಸಾಹಿತ್ಯ ಪ್ರಶಸ್ತಿ' ಪಡೆದುಕೊಂಡ ಪ್ರತಿಭಾನ್ವಿತ ಕವಿ. 2005ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ 'ಭಾವತೀರದ ಹಾದಿಯಲ್ಲಿ' ನಂತರ 2011ರಲ್ಲಿ 'ಹೆಜ್ಜೆ ಮೂಡಿದ ಮೇಲೆ' ಎಂಬ ಎರಡು ಕವನ ಸಂಕಲನಗಳಿಂದ ಗಮನ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2019