ಬಿದಿರು ಮೆಳೆ ಕಂಟಿಯಲಿ

Author : ಬಿ.ಟಿ. ಲಲಿತಾ ನಾಯಕ್

Pages 198

₹ 80.00




Year of Publication: 1997
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004

Synopsys

'ಬಿದಿರು ಮೆಳೆ ಕಂಟೆಯಲಿ' ಬಿ.ಟಿ ಲಲಿತಾ ನಾಯಕ್‌ ಅವರ ಕವನ ಸಂಕಲನ. ಈ ಪುಸ್ತಕದ ಕವಿತೆಗಳು ಮೇಲಿನವರ ಬಗ್ಗೆ ಕೆಳಗಿನವರ ಮನೋಧರ್ಮವನ್ನೂ, ಅವರ ಚುಚ್ಚುಮಾತಿನ ವ್ಯಂಗ್ಯ ಧ್ವನಿಯನ್ನೂ, ಒಳಪ್ರಾಸಗಳ ರಚನಾ ವಿನ್ಯಾಸವನ್ನೂ ಸಾಕಷ್ಟು ಸ್ಫಷ್ಟವಾಗಿಯೇ ಸೂಚಿಸುತ್ತದೆ. ಲೇಖಕಿಯ ಕಾವ್ಯ ಬದುಕಿನುದ್ದಕ್ಕೂ ಈ ಗುಣಗಳು ಮತ್ತೆ ಅನೇಕ ಲಕ್ಷಣಗಳನ್ನು ಮೈಗೂಡಿಸಿಕೊಂಡು ಅವರ ಅನುಭವ ಅನೇಕ ಹಂತಗಳ ವೈವಿಧ್ಯಗಳನ್ನು ತೆರೆದಿಡುವ ರೀತಿಯಲ್ಲಿ ಈ ಸಂಕಲನ ರೂಪಿತವಾಗಿದೆ.ಬಂಡಾಯ ಪ್ರತಿಭಟನೆಗಳ ಬಗೆಗೆ ಅನೇಕ ಕವಿತೆಗಳನ್ನು ಈ ಕವನ ಸಂಕಲನವು ಹೊಂದಿದೆ. ಇಲ್ಲಿ ಕಾವ್ಯದ ಜೊತೆಗೆ ಸಾಮಾಜಿಕ ಬದ್ದತೆ ಮತ್ತು ನೋವುಗಳನ್ನು ಇಲ್ಲಿನ ಕವನಗಳು ಒಳಗೊಂಡಿದೆ.

ಕೃತಿಯಲ್ಲಿನ ಕೆಲವೊಂದು ಅಧ್ಯಾಯಗಳು ಹೀಗಿವೆ : ಕೊರಗಬೇಡ ಕನ್ನಡಮ್ಮ, ರಾಮ ಅರ್ಜಿ ಹಾಕಿದ್ದಾನೆ, ಸ್ವೀಕರಿಸು ಅಶ್ರುತರ್ಪಣವ, ಬದುಕು ಸಿಟಿ ಬಸ್ಸು, ಬೇಡ ದಾಸಿಯ ಪಟ್ಟ, ನೆನಪುಗಳು ಸಮಾಧಿ ಹೊಂದುತ್ತವೆ, ಕನ್ನಡಮ್ಮನ ಕೊನೆಯ ಮಾತು, ಕದನದ ಕಥೆ, ಬೆವರು ಹನಿದಾಗ, ಶಿಲಾವಾಣಿ, ಕ್ರೌರ್ಯದ ಕಪ್ಪು ಸಂಕೇತವಿದು, ಮೇಣದ ಬತ್ತಿ, ನೀ ಕಟ್ಟಿದಯುಗದಿಯೊಂಧು  ಬುತ್ತಿ, ಅದುಮಿಟ್ಟ ಕೊರಳು, ನನ್ನ ಕೇರಿಯಲಿ ಬೆಳಗಾಯಿತು, ಬಿಳಿಲು ಬಿಟ್ಟಾಲ, ಸುಳಿಗೆ ಸಿಲುಕಿದ ತೆಪ್ಪ, ಯುಗಾದಿಯೊಂದು ವಿನಂತಿ, ಉಸಿರು ಪಡೆದ ಆಕಾರಗಳು, ಏಕತೆಯ ಕೂಗು, ಎಸೆದುಬಿಡು ಕೊಡಲಿ, ಒಡಲ ಬೇಗೆ, ಬೆಳ್ಳಿ ಹಕ್ಕಿ, ಗಿಣಿ, ಒಲಿ ಉರಿದೀತು ಗುಡಿಸಿಲಲ್ಲಿ, ಕೇಳಿ ಮಾನಿನಿಯರೇ, ದೇವರು, ಅವ್ವನಿಗೆ ಅವಕಾಶ, ಜೋಕೆ ಕಾಣವ್ವ ಚಾಮುಂಡಿ, ಬಾಯಿಗಿಡುವಾ ಹೊತ್ತು, ಅಕ್ಷರದ ಲೋಕದಲಿ, ಈ ನನ್ನ ಜನರು, ತಾಯಿ ಕೃಷ್ಣೆಗೆ ನಮನ, ಅದೋ ಬಂತು ಮಾರ್ಜಾಲ, ಪ್ರಾರ್ಥನೆ, ಕಾಡು ಜನರ ಹಾಡು, ಹನಿಗವನಗಳು, ಸೂರ್ಯ, ನಾನು ನಿನ್ಹಂಗಾ ಅಜ್ಜ, ಈ ನೆಲದ ನೀತಿ, ಸಖಿಯರ ಸಂವಾದ, ಕಾಣುವಲ್ಲನಲ್ಲ ಚಂದ್ರ, ವಿಧಾನ ಸಭಾಧ್ಯಕ್ಷ, ಬಾಲ ಪರ್ವ.

ಅಧ್ಯಾಯ- 2 ಇದೇ ಕೂಗು ಮತ್ತೆ ಮತ್ತೆ : ಶ್ರದ್ದಾಂಜಲಿ, ಬೋರ ಕಂಡ ‘ದುಃಸ್ವಪ್ನ’, ಹುಡುಕಿದರು ಸಿಗಲೊಲ್ಲದು, ದರ್ಶನ, ಒಂದೇ ಒಂದು ಬಾರಿ ಹೊರಬನ್ನಿ, ನಾಚಿ ಮುದುಡಿತು ಹೂವಿನ ಮಾಲೆ, ಏಕೆ ಮಲಗಿರುವೆ, ಓಡುವವರ ಹಿಂದೆ, ಕೇಳು ಮಗುವೆ, ಯಾರೊ ನಿನಗೂ ತಿಳಿಸಿಬಿಟ್ಟಾರಲ್ಲಾ, ದುರಂತ, ಜೀವಧ್ವನಿ 

 

About the Author

ಬಿ.ಟಿ. ಲಲಿತಾ ನಾಯಕ್
(04 April 1945)

ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು 1945 ಏಪ್ರಿಲ್‌ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.   ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...

READ MORE

Related Books