ನೀನು ಚೂರು ಸ್ವಾರ್ಥಿಯಾಗಬೇಕಿತ್ತು

Author : ಫಕ್ಕೀರೇಶ ಜಾಡರ

Pages 80

₹ 70.00
Year of Publication: 2020
Published by: ಜಾಡರ್ ಪ್ರಕಾಶನ
Address: # ನೀರಲಗಿ, ಅಂಚೆ ಕುಂದೂರು-581202, (ತಾ: ಹಾನಗಲ್, ಜಿ: ಹಾವೇರಿ)
Phone: 7619198236

Synopsys

ಕವಿ ಫಕ್ಕೀರೇಶ ಜಾಡರ್ ಅವರ ಕವನ ಸಂಕಜಲನ-ನೀನು ಚೂರು ಸ್ವಾರ್ಥಿಯಾಗಬೇಕಿತ್ತು. ಕೃತಿಗೆ ಮುನ್ನುಡಿ ಬರೆದ ಡಾ. ಎಸ್. ವೀರೇಶ ಹಿತ್ತಲಮನಿ ‘ ಕವನಗಳ ಶೀರ್ಷಿಕೆಗಳನ್ನು ಅವಲೋಕಿಸುತ್ತಿದ್ದಂತೆ ಕಾವ್ಯದ ಸಾಲುಗಳನ್ನು ನನಗರಿವಿಲ್ಲದೆ ಓದಿಸಿಕೊಂಡು ಹೋಗುವಷ್ಟು ಕುತೂಹಲಕಾರಿಯಾಗಿವೆ.  ನೀ ಚೂರು ಸ್ವಾಥಿ೯ಯಾಗಬೇಕಿತ್ತು ಕವನದಲ್ಲಿ ಪ್ರತಿಯೊಬ್ಬ ತಾಯಿಯ ತ್ಯಾಗಮಯಿ ಚಿತ್ರಣ ತುಂಬಿದ ಸಾಲುಗಳಲ್ಲಿ ಒಬ್ಬ ತಾಯಿ ನೂರು ಜನ ಶಿಕ್ಷಕರಿಗೆ ಸಮ ಎಂಬ ಕವಿಯ ಕಲ್ಪನೆ  ವ್ಯಕ್ತವಾಗಿದೆ. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ ಜೊತೆಗೆ ವ್ಯಕ್ತಿಯ ಸಾಧನೆಯ ಹಾದಿಯಲ್ಲಿ ಕಷ್ಟಗಳು ಸಾವಿರಾರು.ಆದರೆ ಸಾಧನೆ ಸಾಧಕನ ಸ್ವತ್ತು, ಸೋಮಾರಿಗಳದ್ದಲ್ಲ.ಎಂಬ ಕಲ್ಪನೆ ಮಾಮಿ೯ಕವಾಗಿದೆ. ಕಾಮಿ೯ಕ ವರ್ಗದ ಶ್ರಮ ಜೀವನ ಚಿತ್ರಿಸುವ ಕಾಮಿ೯ಕ ಪ್ರಭುವೇ...! ಕವನ ನನಗೊಮ್ಮೆ ಕಾಲ್೯ ಮಾಕ್ಸ್೯ ಅವರ " ನಮಿಸುವ ಕೈಗಳಿಂತ, ಶ್ರಮಿಸುವ ಕೈಗಳು ಲೇಸು " ಎಂಬ ಮಾತನ್ನೊಮ್ಮೆ ನೆನಪಿಸಿತು. ಪ್ರಸ್ತುತ ದಿನಗಳಲ್ಲಿ   ಯುವ ಪೀಳಿಗೆಗೆ ಜೀವನ ಮೌಲ್ಯ ಬಿತ್ತಲು ಅವಿಭಕ್ತ ಕುಟುಂಬಗಳು  ಅಗತ್ಯವಾಗಿವೆ ಎಂಬ ವಾದ,   ಹಿಂದೂ ಸನಾತನ ಧರ್ಮದ ಮಹಾನ್ ಸಂತ ವಿವೇಕ ಗಣಿ ವಿವೇಕಾನಂದರ ಕವನ  ಅರ್ಥವತ್ತಾಗಿ ಮೂಡಿಬಂದಿವೆ‌ಅನೇಕ ಕವನಗಳಲ್ಲಿ  ಸಹೋದರರು ಪ್ರಸ್ತುತ ಸಮಾಜಕ್ಕೆ ಅತೀ ಅಗತ್ಯವಿರುವ ಸಾಮಾಜಿಕ, ಸಾಂಸ್ಕೃತಿಕ, ಕೌಟುಂಬಿಕ, ಧಾಮಿ೯ಕ ಇತ್ಯಾದಿ ಆದರ್ಶ ಮೌಲ್ಯಗಳನ್ನು ಬಿತ್ತುವ ಕಾಯಕ ಮಾಡುತ್ತಿದ್ದಾರೆ.  ಅತೀ ಕಡಿಮೆ  ವಯಸ್ಸಿನಲ್ಲಿ  ಗಳಿಸಿದ ಭಾಷಾ ಪ್ರಬುದ್ದತೆಯೊಂದಿಗಿನ ಕಾವ್ಯ ಕಟ್ಟುವ ಕಾಯಕ ಅಭಿನಂದನೀಯ’ ಎಂದು ಪ್ರಶಂಸಿಸಿದ್ದಾರೆ.

About the Author

ಫಕ್ಕೀರೇಶ ಜಾಡರ

ಕವಿ ಫಕ್ಕೀರೇಶ ಜಾಡರ ಅವರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನೀರಲಗಿ ಗ್ರಾಮದವರು. ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿ. ಕವನ, ಕಥೆ, ಚುಟುಕು, ಲೇಖನ ಬರಹ ಇವರ ಹವ್ಯಾಸ.  ‘ನೀನು ಚೂರು ಸ್ವಾರ್ಥಿಯಯಾಗಬೇಕಿತ್ತು’ ಇವರ ಮೊದಲ ಕವನ ಸಂಕಲನ. ...

READ MORE

Related Books