ಕಲ್ಲೆದೆ ಬಿರಿದಾಗ

Author : ವಿಭಾ ಪುರೋಹಿತ

Pages 72

₹ 80.00




Year of Publication: 2019
Published by: ಅವನಿ ರಸಿಕರ ರಂಗ ಪ್ರಕಾಶನ
Address: ’ಅವನಿ’, 217, 2ನೇ ಮೈನ್ ರೋಡ್, 3ನೇ ಕ್ರಾಸ್, ನಾರಾಯಣಪುರ ಧಾರವಾಡ-580008
Phone: 9371382292

Synopsys

’ಕಲ್ಲೆದೆ ಬಿರಿದಾಗ’ ಸಂಕಲನದಲ್ಲಿ ವಿಭಾ ಅವರು ಸರಳ ನಡೆಯಲ್ಲಿ ಕವನ ಲೋಕವನ್ನು ಪ್ರವೇಶಿಸಿದ್ದಾರೆ. ಅವರ ತಮ್ಮ ಮೊದಲೆರಡು ಕವನ ಸಂಗ್ರಹಗಳ ನೇಸಲನ್ನು ಮೀರುವ ಪ್ರಯತ್ನವು ಕಾಣುತ್ತದೆ. ’ಪೆಪ್ಪಿ ಹನಿಗಳು ಪಿಜ್ಜಾ ತುಣಕಗಳು ಪ್ರೇಮಿಗಳ ಪಿಸು ಧ್ವನಿಗಳು, ಅತ್ತರದ ಘಮ ದಾರಿಹೋಕರಿಗೆ ಏನೆಲ್ಲ ಅನುಭವ  ನೀಡುತ್ತವೆ. ’ಕಂಬಕ್ಕೆ’ ಎಂಬ ಕಂಬವನ್ನು ಸಾಕ್ಷಿಪ್ರಜೆಯಾಗಿಸಿಕೊಂಡು ಚೂರು ಚೂರು ಚಿತ್ರಗಳ ಕೋಲಾಜ್ ಕಟ್ಟುತ್ತಾರೆ. ಅವರ ಕಾವ್ಯಲೋಕ ಎಷ್ಟು ಕೋಮಲವೋ ಅಷ್ಟೇ ವಿಶಾಲವಾಗಿ ಕಟ್ಟುವ ಕಲೆಯಾಗಿಸಿದ್ದಾರೆ ವಿಭಾ. ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ರತ್ನಾಕರ ವರ್ಣಿ-ಮುದ್ದಣ-ಅನಾಮಿಕ ದತ್ತಿ (ಪದ್ಯ) ಪ್ರಶಸ್ತಿ ದೊರೆತಿದೆ.

About the Author

ವಿಭಾ ಪುರೋಹಿತ

ಕವಯತ್ರಿ ವಿಭಾ ಪುರೋಹಿತ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಬೆಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡತೇರರಿಗೆ ಕನ್ನಡ ಕಲಿಕಾ ತರಬೇತಿ ನೀಡುತ್ತಿದ್ದಾರೆ. ಚಂದನ ವಾಹಿನಿಯಲ್ಲಿ ವಾರ್ತಾವಾಚಕಿಯಾಗಿ ಮತ್ತು ಹಾಸನದ ಎಫ್.ಎಂ. ಕೇಂದ್ರದಲ್ಲಿ ಉದ್ಘೋಷಕಿಯಾಗಿ ಕೆಲಸ ಮಾಡಿದ್ದಾರೆ. ಕವನ -ಪ್ರಬಂಧ ಬರೆಯುವುದು, ಅನುವಾದ ಮಾಡುವುದು ಇವರ ಹವ್ಯಾಸ. 'ಮಲ್ಲಿಗೆ ಮತ್ತು ಇತರೆ ಕವಿತೆಗಳು' ಹಾಗೂ  'ದೀಪ ಹಚ್ಚು' ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ.  ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಸೇರಿದಂತೆ ರಾಜ್ಯ ಹಲವಾರು ಕನ್ನಡ ಪರ ಮತ್ತು ಸಾಹಿತ್ಯಕ ಸಂಘ ಸಂಸ್ಥೆಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಾಹಿತ್ಯ ಸೇವೆಗೆ 'ಸ್ವಾಮಿ ವಿವೇಕಾನಂದ ಸದ್ಭಾವನಾ ...

READ MORE

Related Books