ಕೊನೆ ಎಂದು?

Author : ರಘುಶಂಖ ಭಾತಂಬ್ರಾ

Pages 72

₹ 60.00




Year of Publication: 2020
Published by: ವಚನ ಚೇತನ ಟ್ರಸ್ಟ್
Address: ಮುಕ್ತಿಧಾಮ ರಸ್ತೆ, ಮಾಧವನಗರ ಬೀದರ-585402
Phone: 9916424411

Synopsys

‘ಕೊನೆ ಎಂದು?’ ಕೃತಿಯು ರಘುಶಂಖ ಭಾತಂಬ್ರಾ ಅವರ ಆಯ್ದ ಕವನಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ತುಡಮೆ ನಾಗರಾಜ್ ಅವರು,  'ಕೊನೆ ಎಂದು?' ಕವನ ಸಂಕಲನದ ಕವಿತೆಗಳ ವಸ್ತು ವೈವಿಧ್ಯಮಯವಾದುದು. ಪ್ರೀತಿ-ಪ್ರೇಮ, ರೈತಾಪಿ ವರ್ಗದ ಬವಣೆ, ಸ್ತ್ರೀ ಶೋಷಣೆ, ವರದಕ್ಷಿಣೆ, ಸಾಮಾಜಿಕ ಅಸಮಾನತೆ, ರಾಜಕೀಯ ವಿಡಂಬನೆ, ಶೋಷಿತ ವರ್ಗದ ಬಗೆಗಿನ ಕಾಳಜಿ, ಅಧಿಕಾರಶಾಹಿ, ಬಂಡವಾಳಶಾಹಿ, ಸಂಪ್ರದಾಯಶಾಹಿಗಳ ವಿರುದ್ಧದ ಪ್ರತಿರೋಧ ವ್ಯಕ್ತವಾಗಿದೆ. ಕವಿ ರಘುಶಂಖ ಭಾತಂಬ್ರಾ ಅವರ ವೈಚಾರಿಕತೆ ಅಗಾಧವಾದುದು. ಹಿರಿಯರಿಗೇ ಪ್ರಶ್ನೆ ಮಾಡುವ ಪರಿ 'ನಮ್ಮ ಆಯೀ' ಕವಿತೆಯಲ್ಲಿ ಪ್ರಕಟವಾಗಿದೆ. ಮಗಳನ್ನೇ ಮದುವೆಯಾದ ಬ್ರಹ್ಮ, ಮದುವೆಯಾದ ಹೆಂಡತಿ ಪಾರ್ವತಿ ಇದ್ದರೂ ಗಂಗೆಯನ್ನೇ ಜಡೆಯಲ್ಲಿಟ್ಟುಕೊಂಡ ಶಿವ, ಬೆಳ್ಳಿಗೊಂಬೆಯ ತರಹ ಇದ್ದ ಅಹಲೈಯ ಬದುಕನ್ನು ಮೂರಾಬಟ್ಟೆ ಮಾಡಿದ ಇಂದ್ರ, ದಿನಾಲು ನೂರಾರು ಮನೆಯ ಬೆಣ್ಣೆ ಕಳವು ಮಾಡಿ ಗೋಪಿಕೆಯರ ಜೊತೆಗೆ ಚೆಲ್ಲಾಟ ಆಡಿ ಅವರ ಸೀರೆಯನ್ನು ಮುಚ್ಚಿಟ್ಟು ನಗುತ್ತ ಕುಣಿದಾಡುವ ಕೃಷ್ಣ, ಚಾಡಿಚುಗುಲಿ ಮಾಡುವ ನಾರದ, ಪಾರ್ವತಿಯ ಮೈಮಣ್ಣಿನಿಂದ ರೂಪಗೊಂಡಿರುವ ಗಣಪತಿ ಅದ್ದೇಗೆ ದೇವರಾಗಲು ಸಾಧ್ಯ? ಎಂದು ಪ್ರಶ್ನೆ ಎತ್ತುವುದಾಗಲೀ, "ಗುಡ್ಯಾಗ ಕುಂತ, ಜಗಲಿ ಮ್ಯಾಲ ನಿಂತ ಮೂಕಾದವು; ನೀರು ಬಿದ್ದಾಗ ಕೊಳ್ಳು, ಬಿಸ್ತಿಗೆ ಹಾಳಾಗುವೆಲ್ಲ ಎಂಥ ದ್ಯಾವು?" ಎಂದು ಸವಾಲು ಹಾಕುವುದಾಗಲೀ ಆ ಮುಗ್ಧಮಗುವಿನಲ್ಲಿ ಅಡಗಿರುವ ವೈಚಾರಿಕತೆಗೆ ಆಯೀ (ಅಜ್ಜಿ) ಕೊಡುವ ಉತ್ತರವೂ ಸ್ವಾರಸ್ಯಕರವಾದುದು. ಯುವಜನಾಂಗ ಮುಗ್ಧವಾಗಿ ಎಲ್ಲವನ್ನು ಸುಲಭವಾಗಿ ನಂಬುವ ಹಾಗಿಲ್ಲ. ಸತ್ಯಾಸತ್ಯತೆಯನ್ನು ಒರೆಗಲ್ಲಿಗೆ ಹಚ್ಚಿ ನೋಡುತ್ತಾರೆ ಎಂಬುದನ್ನು ಕವಿ ಇಲ್ಲಿ ಪ್ರತಿಪಾದಿಸಿದ್ದಾರೆ. ಹನ್ನೆರಡನೆಯ ಶತಮಾನದ ಮಹಾಮಾನವತಾವಾದಿ ಬಸವಣ್ಣನವರು ನಡೆ ನುಡಿ ಒಂದಾಗಿರಲೆಂದು ಆಶಿಸಿದವರು. ತಾವು ಮಾಡುವ ಸತ್ಯಶುದ್ಧ ಕಾಯಕದಲ್ಲಿಯೇ ಸ್ವರ್ಗವನ್ನು ಕಾಣಬಯಸಿದವರು. ಇಂತಹ ಮಾನವತಾವಾದಿಯನ್ನು ಕುರಿತು ಬರೆದ ಕವನದಲ್ಲಿ ಕವಿ ತನ್ನ ಬಾಲ್ಯವನ್ನು ಅರಿವಿನ ಕೊರತೆಯಿಂದಲೂ, ಯೌವನವನ್ನು ಕಾಮದ ಬಿಸಿಯಲ್ಲಿಯೂ ಕಳೆದು ಮುಪ್ಪಿನ ಹೊಸ್ತಿಲಿಗೆ ಬಂದಾಗ ಮತಿಯ ಅರಿವಾಗಿ ಬಸವಣ್ಣನವರನ್ನು ಮೊರೆಹೋಗುತ್ತಾರೆ’ ಎಂದಿದ್ದಾರೆ. 

ಕೃತಿಯ ಪರಿವಿಡಿಯಲ್ಲಿ ಒಟ್ಟು 30 ಅಧ್ಯಾಯಗಳು ಹಾಗೂ 3 ಅನುಬಂಧಗಳನ್ನು ಹೊಂದಿದೆ. ಶುದ್ದೀಕರಣ, ನಮ್ಮ ಆಯೀ, ತಲಿ ಬಡಿಬ್ಯಾಡ್ರಿ, ಗತಿ ನೀನೇ ಬಸವ, ವಿಶ್ವ ಹಿತೈಷಿ, ಶಿವರಾತ್ರಿ, ಮಾರಿಕೊಂಡವರು, ಮಾರಾಟಕ್ಕಿದೆ ಲೇಖನಿ, ಕರೆಯುತ್ತದೆ ಕಾಲ, ಬಂಡಾಯದ ಧ್ವನಿ, ದಿಕ್ಕಾರ, ಹಾಲಾಹಲ, ಕೊನೆ ಎಂದು, ಬೆಂಕಿ ಬೇಡ ಬೆಳಕು ಸಾಕು, ರಾಜಚಿಹ್ನೆಗಳು, ನಾಗಾವಿ, ಪ್ರಿಯಸಖಿಯನು ನೆನೆದು, ಮೇಘ ಸಂದೇಶ, ಕದ ತೆರೆದು ಬಾ, ನನ್ನ ಕೂಡಿದವಳು, ಅಗಲದ ಜೋಡಿ, ಮಳೆ ಕರುಣಿಸು, ರೈತನ ಪಾಡು, ಸಮಾನತೆ, ನೀ ಏನಾಗುವೆ, ಸೆಕ್ರೆಟರಿ, ಸಮಾನತೆ, ಪೇಟೆಯ ಪರಿಸರ ಮೂಂತಾದ ಪರಿಡಿ ಮತ್ತು ಅನುಬಂಧಗಳನ್ನು ಹೊಂದಿದೆ. 

 

About the Author

ರಘುಶಂಖ ಭಾತಂಬ್ರಾ
(01 January 1970)

“ರಘುಶಂಖ” ಕಾವ್ಯನಾಮದಿಂದ ಪರಿಚಿತರಾಗಿರುವ ಡಾ. ರಘುನಾಥ  ಖರಾಬೆಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದವರು. ಶ್ರೀಮತಿ ಗುರಮ್ಮ ಶ್ರೀ ಶಂಕರೆಪ್ಪನವರ ಮಗನಾಗಿ 01-01-1970ರಲ್ಲಿ ಜನಿಸಿದರು. ಎಂ.ಎ; ಎಂ.ಪಿಎಲ್;  ಪಿಎಚ್.ಡಿ. ಪದವಿಧರರು. 1996ರಲ್ಲಿ ಗುಲಬರ್ಗಾ ಶ್ರೀ ಶರಣಬಸವೇಶ್ವರ ವಾಣಿಜ್ಯ ಕಾಲೇಜು; ಎಸ್.ಎಸ್. ಖೂಬಾ ಬಸವೇಶ್ವರ ಪದವಿ ಕಾಲೇಜು ಬಸವಕಲ್ಯಾಣದಲ್ಲಿ ಕನ್ನಡ ಉಪನ್ಯಾಸಕರಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗರ್ಮಾತಾಂಡಾದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶರಣಬಸವಪ್ಪ ಅವರ ಜೀವನ ಸಾಧನೆ (ಎಂ.ಪಿಎಲ್.), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ ...

READ MORE

Related Books