ದೇವರು ಮನುಷ್ಯರಾದ ದಿನ

Author : ಬಿ. ಪೀರ್ ಬಾಷ

Pages 122

₹ 80.00
Year of Publication: 2009
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಪೋಸ್ಟ್, ವಯಾ ಎಮ್ಮಿಗನೂರ್, ಬಳ್ಳಾರಿ - 583113
Phone: 9480353507

Synopsys

‘ದೇವರು ಮನುಷ್ಯರಾದ ದಿನ’ ಕವಿ ಪೀರ್ ಬಾಷ ಅವರ ಕವನಗಳ ಸಂಕಲನ. 1991ರಿಂದ 2001ರವರೆಗಿನ ಅವರ ಕವಿತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.  ಕವಿ ಎನ್.ಕೆ. ಹನುಮಂತಯ್ಯ ಬೆನ್ನುಡಿ ಬರೆದಿದ್ದಾರೆ. ನಾನು ಅತ್ತಾಗ ಬಿದ್ದ ಕಣ್ಣೀರಿನಲ್ಲಿ ಜೀವವಿದೆ ಎಂದು ಬರೆಯುವ ಗೆಳೆಯ ಪೀರ್ ಬಾಷ, ನಮ್ಮ ಕಾಲದ ಹಿಂಸೆಯ ವಿರುದ್ಧ ಪ್ರೀತಿಯ ಆಧ್ಯಾತ್ಮವನ್ನು ಶೋಧಿಸುವ ಮಹತ್ವದ ಕವಿ ಎನ್ನುತ್ತಾರೆ ಎನ್ಕೆ.

ಪೀರ್ ಬಾಷ ಅವರ ಕಾವ್ಯದಲ್ಲಿ ತೀವ್ರವಾದ ಸಾಮಾಜಿಕ ಎಚ್ಚರವಿದೆ. ಅಂತರಂಗ ಹಾಗೂ ಬಹಿರಂಗದ ಬದಲಾವಣೆಗೆ ಅಗತ್ಯವಾದ ದರ್ಶನಗಳಿವೆ. ವಿಶ್ವಾತ್ಮಕ ಹಾಗೂ ಸದಾ ಸಮಕಾಲೀನವಾಗುವ ಜೀವಂತಿಕೆ ಇದೆ, ಜೀವ ಕಲಕುವ ಕಾವ್ಯವನ್ನು ತನ್ನ ನೆತ್ತರಿನಿಂದಲೇ ಬರೆಯುತ್ತಿರಬಹುದೇ ಎಂದು ಬೆರಗುಗೊಳಿಸುವಂಥ ಸತ್ಯ ಮತ್ತು ಸತ್ವ ಇವರ ಕಾವ್ಯದಲ್ಲಿ ತುಂಬಿ ತುಳುಕುತ್ತಿದೆ. ಎಂದೂ ಅವರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

About the Author

ಬಿ. ಪೀರ್ ಬಾಷ
(01 May 1972)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ-  ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ,  ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...

READ MORE

Related Books