ನದಿ ಧ್ಯಾನದಲ್ಲಿದೆ

Author : ಕೆ.ಎನ್. ಲಾವಣ್ಯ ಪ್ರಭಾ

Pages 74

₹ 70.00
Year of Publication: 2013
Published by: ಭೂಮಿಕಾ ಪ್ರಕಾಶನ
Address: 12, 4ನೇ ಬ್ಲಾಕ್, ಎಸ್.ಬಿ.ಎಂ. ಲೇಔಟ್, ಶ್ರೀರಾಂಪುರಂ, 2ನೇ ಹಂತ, ಮೈಸೂರು-570023
Phone: 9480663964/9243501563

Synopsys

'ನದಿ ಧ್ಯಾನದಲ್ಲಿದೆ' ಕೆ.ಎನ್. ಲಾವಣ್ಯ ಪ್ರಭ ಅವರ ಕವನ ಸಂಕಲನ. ಈ ಕವನ ಸಂಕಲನದಲ್ಲಿ ಒಟ್ಟು 49 ಕವಿತೆಗಳಿವೆ. ಪ್ರಬುದ್ಧ ಚಿಂತನೆಯ ಗಾಢ ಅನುಭವದ ಪ್ರತಿಫಲನದಂತಿರುವ ಕವಿತೆಗಳು ಚೆನ್ನಾಗಿವೆ. ತನಗೆ ತಾನೇ ರೂಪುಗೊಳ್ಳುವ ಆತ್ಮಾನುಸಂಧಾನದ ಪರಿಯೇ ಕವಿತೆ ಎಂಬುದು ತಿಳಿಯುತ್ತದೆ. ವೈವಿಧ್ಯಮಯ ಲಯ, ಮುಖವಾಡರಹಿತ ಮನಸ್ಸಿನ ನೈಜ ಅಭಿವ್ಯಕ್ತಿ ಈ ಕವಿತೆಗಳ ವಿಶೇಷ.

About the Author

ಕೆ.ಎನ್. ಲಾವಣ್ಯ ಪ್ರಭಾ

ಕವಿ ಕೆ. ಎನ್. ಲಾವಣ್ಯ ಪ್ರಭ ಅವರು ಮೂಲತಃ ಮೈಸೂರಿನವರು. ಅವರು 1971 ನವೆಂಬರ್‌ 02ರಂದು ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಡಾ. ಆರ್‌. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಅವರು ‘ಎಂ. ವಿ. ಸೀತಾರಾಮಯ್ಯನವರ ಸಾಹಿತ್ಯ’ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಇವರ ಹಲವಾರು ಕವಿತೆಗಳು ಕನ್ನಡದ ದಿನ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ‘ನದಿ ಧ್ಯಾನದಲ್ಲಿದೆ’, ‘ಹುಟ್ಟಲಿರುವ ನಾಳೆಗಾಗಿ’, ‘ಗೋಡೆಗಿಡ’ ಅವರ ಕವನ ಸಂಕಲನಗಳು. ಸಂಶೋಧನಾ ಪ್ರಬಂಧ ಅವರ ಕವನ ಸಂಕಲನ. ತಮ್ಮದೇ ಯುಟ್ಯೂಬ್‌ ಚಾನೆಲ್‌ ಮೂಲಕ ಕಾವ್ಯ ...

READ MORE

Related Books