ವಿಸ್ಮಯ

Author : ಜಯಶ್ರೀ ಸಿ. ಕಂಬಾರ

Pages 112

₹ 60.00
Year of Publication: 2009
Published by: ಸಿವಿಜಿ ಪಬ್ಲಿಕೇಷನ್ಸ್
Address: #70, 2ನೇ ಮುಖ್ಯ ರಸ್ತೆ, ಜಬ್ಬರ್ ಬ್ಲಾಕ್, ಬೆಂಗಳೂರು-56003
Phone: 9880132743

Synopsys

‘ವಿಸ್ಮಯ’ ಕೃತಿಯು ಜಯಶ್ರೀ ಸಿ. ಕಂಬಾರ ಅವರ ಕವನ ಸಂಕಲನವಾಗಿದೆ. ತನ್ನದೇ ದಾರಿ ತುಳಿಯುವ, ಹಿಡಿಯುವ ಆತ್ಮ ವಿಶ್ವಾಸದ ಕವಿತೆಗಳಿವೆ. ಬದುಕಿನ ಬದಲಾಗುವ ನಿತ್ಯ ಚಹರೆಗಳನ್ನು ಸಾವಧಾನದಿಂದ ಗಮನಿಸುವ ಇಲ್ಲಿನ ಕವಿತೆಗಳಲ್ಲಿ ಆಳವಾದ ವಿಷಾದದ ನಡುವೆಯೂ ಬದುಕಿನ ಸಹಜ ಗತಿಗಳ ನಿರಾಕರಣೆಯಿಲ್ಲ. ಎಲ್ಲಾ ಕವಿತೆಗಳಲ್ಲಿ ಸುತ್ತಮುತ್ತಲನ್ನು ಗಮನಿಸುವ ಕಣ್ಣು ಹಾಗೂ ನಾಯಕಿಯನ್ನು ನಿರ್ಲಕ್ಷಿಸಿದ ಜಂಭದ ಜಗತ್ತು ಮತ್ತೇ ಮತ್ತೆ ದಾಖಲಾಗುತ್ತದೆ. ‘ಸಂವಾದ’ ಎನ್ನುವ ಕವಿತೆ, ತನ್ನ ನಾಟಕೀಯ ಸಂವಾದದೊಂದಿಗೆ ಬದುಕಿನಾಟವನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುತ್ತದೆ.

About the Author

ಜಯಶ್ರೀ ಸಿ. ಕಂಬಾರ

ಕವಯತ್ರಿ ಜಯಶ್ರೀ ಸಿ. ಕಂಬಾರ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ‘ಇಂಗ್ಲಿಷ್ ಮತ್ತು ಕನ್ನಡ ನಾಟಕಗಳಲ್ಲಿ ಇತಿಹಾಸ’ ವಿಷಯವಾಗಿ ಪಿ.ಹೆಚ್.ಡಿ ಪದವೀಧರರು. ವಿವಿಧ ಕಾರ್ಯಕ್ರಮಗಳಿಗೆ ಸಂಪನ್ಲೂಲ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ರಾಜಾಜಿನಗರದಲ್ಲಿಯ   ಕೆ.ಎಲ್.ಇ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಕೃತಿಗಳು:  ಹೊಸದಾರಿ (ನಾಟಕ) ಹಸಿದ ಸೂರ್ಯ (ಕವನ ಸಂಕಲನ)   ಪ್ರಶಸ್ತಿ-ಪುರಸ್ಕಾರಗಳು: ಕನ್ನಡ ಸೇವಾ ರತ್ನ ಪ್ರಶಸ್ತಿ, ಇಂದಿರಾ ವಾಣಿ ರಾವ್ ಪ್ರಶಸ್ತಿ, ಸ್ನೇಹ ಸೇತು ಪ್ರಶಸ್ತಿಗಳು ಲಭಿಸಿವೆ.  ...

READ MORE

Related Books