ನೀನಿರದ ಹೊತ್ತು

Author : ಬಸವರಾಜ ಜಾಲವಾದಿ

Pages 80

₹ 80.00
Year of Publication: 2015
Published by: ಇಂಪನಾ ಪುಸ್ತಕ
Address: ಡಿಸಿಎಂ, ಟಿಡಬ್ಯು.ಪಿ, ದಾವಣಗೆರೆ, ಕರ್ನಾಟಕ- 577002\n
Phone: 9483490860

Synopsys

‘ನೀನಿರದ ಹೊತ್ತು’ ಬಸವರಾಜ ಜಾಲವಾದಿ ಅವರ ಕವನಸಂಕಲನವಾಗಿದೆ. ಕಾವ್ಯವೆಂದರೆ ಜೀವನ ದರ್ಶನ, ಕಾವ್ಯವೆಂದರೆ ಜೀವನ ಪ್ರೀತಿ ಎಂಬುದನ್ನು ಹಲವಾರು ಕವನಗಳಲ್ಲಿ ಸಾಕ್ಷೀಕರಿಸಿದ್ದಾರೆ. ಇಲ್ಲಿನ ಬಹುತೇಕ ಕವಿತೆಗಳು ಸಾಮಾಜಿಕ ಸಮಸ್ಯೆಗಳಾದ ಜಾತಿ, ಮತ, ದ್ವೇಷ, ಅಸೂಯೆ, ಪ್ರೀತಿ, ಪ್ರೇಮ ಕುರಿತು ಮಾತನಾಡುತ್ತಲೇ ಕಲ ಅವುಗಲಗೆ ತಾವಿರುವ ನೆಲೆಯಲ್ಲಿ ನೆಲದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಬಹುದು. ಮೋಸ, ವಂಚನೆ, ಸ್ವಾರ್ಥ, ಸಿನಿಕತನಗಳ ಮಧ್ಯದಲ್ಲೂ ; "ವಿವೇಕವೇ ನನ್ನ ವಿಶ್ವಾಸದ ಬೇರು" ಎನ್ನುವ ಕವಿ ಸತ್ಯಪರ, ಜೀವಪರ, ಮನುಷ್ಯಪರ ನಿಲುವು ತಾಳಿದ್ದು ಗಮನಾರ್ಹ. ಇಂತಹ ನಿಲುವುಗಳಿಗೆ ಪೂರಕವಾಗಿ ಕಾವ್ಯ ಇನ್ನಷ್ಟು ಗಟ್ಟಿಯಾಗಲು ಕಾವ್ಯದ ಪರಿಕರಗಳಾದ ಭಾಷೆ, ಭಾವನೆ, ತಂತ್ರಗಾರಿಕೆಯನ್ನು ದುಡಿಸಿಕೊಳ್ಳಲಾಗಿದೆ.

About the Author

ಬಸವರಾಜ ಜಾಲವಾದಿ

ಬಸವರಾಜ ಜಾಲವಾದಿ ಅವರು ಮೂಲತಃ ಜಮಖಂಡಿಯ ಬಾಗಲಕೋಟೆಯವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ. ಕವನ ಹಾಗೂ ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕೃತಿಗಳು: ನೀನಿರದ ಹೊತ್ತು ...

READ MORE

Related Books