ಉಳಿದು ಬಿಡು ಒಂದು ಬಿಂದುವಾಗಿ

Author : ಕೆ.ಪಿ. ಮೃತ್ಯುಂಜಯ

Pages 88

₹ 100.00




Year of Publication: 2023
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

‘ಉಳಿದು ಬಿಡು ಒಂದು ಬಿಂದುವಾಗಿ’ ಕೆ.ಪಿ ಮೃತ್ಯುಂಜಯ ಅವರ ರಚನೆಯ ಕವನಸಂಕಲನವಾಗಿದೆ. ಇಲ್ಲಿಯ ಕವಿತೆಗಳ ಬಗ್ಗೆ ನಾನೇ ಹೇಳಿಕೊಳ್ಳುವುದು ಅದು ಅನುಚಿತ. ತೀರಾ ಹೇಳಿಕೊಳ್ಳಬೇಕಾಗಿರುವುದು, ಅದು ನನ್ನ ಅಮ್ಮ. ಕ್ಯಾನ್ಸರಿನಿಂದ ತೀರಿಕೊಂಡ ಅಮ್ಮ ಕಾಡುತ್ತಲೇ ಇದ್ದು, ಆ ಅಮ್ಮನ ಕುರಿತಾದ ಕೆಲ ಪದ್ಯಗಳಿವೆ. ಬಹು ಮುಖ್ಯವಾಗಿ 'ಉಳಿದು ಬಿಡು ಒಂದು ಬಿಂದುವಾಗಿ', 'ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ'ಯಲ್ಲಿ(2015) ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆಯಿದು. ಇನ್ನು, “ನೆನೆವ ವಸಂತಸೇನೆ', ದಶಕಗಳ ಹಿಂದೆ ತೆರೆ ಕಂಡಂಥ 'ಉತ್ಸವ್' ಎಂಬ ಹಿಂದಿ ಸಿನೆಮಾ ನೋಡಿದ ತರುವಾಯ ಬರೆದ ಕವಿತೆ, ಸದಾ ಕಾಲ ನನ್ನ ಮನಸಿನಲ್ಲುಳಿವ ನೆಚ್ಚಿನ ತಾಣ ಕಾರ್ಕಳದ ಬಾಹುಬಲಿ ಬೆಟ್ಟ, ನನ್ನ ಮನ ತುಂಬ ಮುದಗೊಂಡುದು ಮಾತ್ರವಲ್ಲದೆ, ಹೆಚ್ಚು ಧ್ಯಾನಾವಸ್ಥೆಗೆ ತಲುಪಿದುದು ಇಲ್ಲಿಯೇ. ಬಾಹುಬಲಿ ಎಂಬ ಮಹಾಮೌನಿಗೆ ಮಹಾಮಸ್ತಕಾಭಿಷೇಕ (2014)ಸಂದ ಸಂದರ್ಭದಲ್ಲಿ ಬರೆದ ಕವಿತೆ ಕಾರ್ಕಳದ ಮಹಾಮೌನಿಗೆ'. ಇಲ್ಲಿಯ “ಪುಡಿ–ಪುಕ್ಕ'ದ ಬಗ್ಗೆ ಹೇಳುವುದಾದರೆ, ಚಿನಿವಾರಿಕೆ ವೃತ್ತಿಯ ನನ್ನ ಅಯ್ಯ (ತಂದೆ) ಹೇಳುತ್ತಿದ್ದ ಜೋಡಿ ಶಬ್ದವಿದು. ಚಿನ್ನದ ಚಿಕ್ಕ ಚಿಕ್ಕ ಕಣಗಳ ಬಗ್ಗೆ ಹೇಳುತ್ತಿದ್ದುದು. ದೀರ್ಘ ಕವನಗಳು ನನ್ನಿಂದ ಕಡಿಮೆಯಾದಂತಿದ್ದು, ಮುಂದೆ ಅವು ತಾವಾಗೇ ಬಂದ ಕಾಲಕ್ಕೆ ಒದಗಿ ಬರಲಿ ಎಂದು ಭಾವಿಸಿಕೊಂಡು 'ಇಬ್ಬನಿ ಪದ್ಯಗಳನ್ನು ಬರೆದಿರುವ ಮತ್ತು ಬರೆಯುತ್ತಿರುವೆ, ಇಲ್ಲಿರುವ ಅಂಥ ಪದ್ಯಗಳು ನನಗೇ ಕೆಲವು ಬೆರಗುಗೊಳಿಸಿವೆ.- ಕೆ.ಪಿ ಮೃತ್ಯುಂಜಯ

About the Author

ಕೆ.ಪಿ. ಮೃತ್ಯುಂಜಯ

ಕೆ.ಪಿ. ಮೃತ್ಯುಂಜಯ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯವರು. ತಂದೆ - ಪುಟ್ಟಬಸವಾಚಾರ್ ಕೆ. ತಾಯಿ- ಗಂಗಮ್ಮ. ಕನ್ನಡ ಉಪನ್ಯಾಸಕರಾಗಿದ್ದಾರೆ. ಒಂದು ಅನುರಾಗಕ್ಕಾಗಿ ಎಷ್ಟೆಲ್ಲಾ, ಮರ್ತ್ಯ ಮೀರದ ಮಾತು, ಎಲೆ ಎಸೆದ ಮರ, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ದ ನಿನ್ನಲಿ ಒಂದು ಅವರ ಪ್ರಕಟಿತ ಕವನಸಂಕಲನಗಳು. ಇವರ ಮೊದಲ ಕವನಸಂಕಲನಕ್ಕೆ 1994ರಲ್ಲಿ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪುರಸ್ಕಾರ, ಎರಡನೇ ಕವನಸಂಕಲನಕ್ಕೆ ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಮೂರನೇ ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ನಾಲ್ಕನೇ  ...

READ MORE

Related Books