ಕಣ್ಣ ರೆಪ್ಪೆಯ ಅಹವಾಲು

Author : ರೇಣುಕಾತಾಯಿ. ಎಂ.ಸಂತಬಾ (ರೇಮಾಸಂ)

Pages 96

₹ 100.00




Year of Publication: 2000
Published by: ಸಂತಬಾ ಪ್ರಕಾಶನ
Address: ಎ.ಎಮ್. ಸಂತಬಾ, #4/1, ಬಡಿಗೇರ ಓಣಿ, ಧಾರವಾಡ ಜಿಲ್ಲೆ, ಹುಬ್ಬಳ್ಳಿ- 580020,

Synopsys

‘ಕಣ್ಣ ರೆಪ್ಪೆಯ ಅಹವಾಲು’ ರೇಣುಕಾತಾಯಿ ಎಂ ಸಂತಬಾ ಅವರ ಕವನಸಂಕಲನವಾಗಿದೆ. ಕೃತಿಯ ಕುರಿತು ವಿವರಿಸುತ್ತಾ 'ಕವಿತೆಯೊಂದು ಕಣ್ಣೂಡೆಯುವ ಗಳಿಗೆ ಕವಿ/ಕವಯತ್ರಿಯ ಮನೋಪ್ರಪಂಚದ ವಿಸ್ಮಯ, ಇಹದ ಬದುಕನ್ನು ಈ ಹೊತ್ತಿನಲ್ಲಿ ಸಹ್ಯವಾಗಿಸುವ, ಆಪ್ತ ಸಂಗಾತದ ಕವಿತೆಯೆಂಬ ಪಾರಿಜಾತ ಯಾರ ಹೃದಯದಲ್ಲಿ ಯಾವಾಗ, ಹೇಗೆ ಪಲ್ಲವಿಸುವುದೋ ಯಾರ ಎಣಿಕೆಗೂ ನಿಲುಕದಂತಹದ್ದು, ವೃಷ್ಟಿ ಮತ್ತು ಸಮಷ್ಟಿ ಪ್ರಜ್ಜೆಯ ಕಾವ್ಯದ ಅಂಗಳದಲ್ಲಿ ತಮ್ಮದೇ ಆದ ಪುಟ್ಟ ಹೂದೋಟವನ್ನು ಪೋಷಿಸಿರುವ ರೇಣುಕಾತಾಯಿ, ಬಗೆಬಗೆಯ ಕಾವ್ಯಪುಷ್ಪಗಳನ್ನು ನವಿರು ಭಾವಗಳಲ್ಲಿ ಅರಳಿಸಿದ್ದಾರೆ. ಈಚೆಗೆ ಕನ್ನಡ ಕಾವ್ಯಲೋಕವನ್ನು ಸಮೃದ್ಧಗೊಳಿಸುತ್ತಿರುವ ಹೊಸ ಕವಯತ್ತಿರ ಕಾವ್ಯಪ್ರಯೋಗಗಳು ಸ್ತ್ರೀ ಆಸ್ಮಿತೆಯ ಹುಡುಕಾಟ ಮತ್ತು ಹೋರಾಟಗಳ ಭಾಗವಾಗಿ ಮೂಡಿಬರುತ್ತಿರುವುದು ಸ್ವಾಗತಾರ್ಹವೂ ಸಂತೋಷದ ಸಂಗತಿಯೂ ಆಗಿದೆ. ಈ ಹಿನ್ನೆಲೆಯಲ್ಲಿ 'ಕಣ್ಣರೆಪ್ಪೆಯ ಅಹವಾಲು' ಸಂಕಲನದ ಮೂಲಕ ಅಂತ೦ಗರದ ಶೋಧಕ್ಕೆ ತೊಡಗಿರುವ ರೇಣುಕಾತಾಯಿ ಅವರ ಕವಿತೆಗಳು ಒಮ್ಮೆ ಮೆಲುದನಿಯಲ್ಲಿಯೇ ಮಾತಾಡುವ, ಮಗದೊಮ್ಮೆ ಮೌನಕ್ಕೆ ಜಾರುತ್ತ ಮನದ ಬೇಗುದಿಯನ್ನೂ ಮನೋಲ್ಲಾಸದ ಗಳಿಗೆಗಳನ್ನೂ ಹಿಡಿದಿಡುವ ಪ್ರಯೋಗಗಳಿಗೆ ಒಡ್ಡಿಕೊಂಡಿವೆ. ಪ್ರತಿಯೊಬ್ಬ ಕವಿ, ಕವಯತ್ರಿಗೂ ಅವರವರದೇ ಆದ ಕಾವ್ಯಸಂಸ್ಕಾರವಿರುತ್ತದೆ. ಬದಕಿನ ಮೂಲ ಗ್ರಹಿಕೆ, ಅನುಭವಗಳ ಹಿನ್ನೆಲೆಯಲ್ಲಿಯೇ ಕಲಾಸೃಷ್ಟಿ ರೂಪಗೊಳ್ಳುತ್ತಿರುತ್ತದೆ. ರೇಣುಕಾತಾಯಿ ಕೂಡ ತಮಗೆ ದಕ್ಕಿದ ಕವಿಸಮಯದ ಸವಿಗಳಿಗೆಗಳನ್ನು, ವೈಯಕ್ತಿಕ ಮತ್ತು ಸಾಮುದಾಯಿಕ ಬದುಕಿನಲ್ಲಿ ಕಂಡದ್ದನ್ನು ತಮ್ಮ ರಚನೆಗಳಲ್ಲಿ ಕಂಡರಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ಅವರ ಅನೇಕ ಕವಿತೆಗಳು ತಮ್ಮ ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸಿದ, ತತಕ್ಷಣದ ಪ್ರತಿಕ್ರಿಯೆಗಳಾಗಿಯೂ ಮೂಡಿಬಂದಿವೆ.

About the Author

ರೇಣುಕಾತಾಯಿ. ಎಂ.ಸಂತಬಾ (ರೇಮಾಸಂ)

ಲೇಖಕಿ ಡಾ. ರೇಣುಕಾತಾಯಿ. ಎಂ. ಸಂತಬಾ ಅವರು ಹಿಂದಿ ಭಾಷಾ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯದ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಎಸ್.ಆರ್.ಎಸ್ ಕರ್ನಾಟಕ ಪಬ್ಲಿಕ್ ಸ್ಕೂಲ್, ರಾಯನಾಳದ ಪ್ರಭಾರಿ ಉಪ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ ವಾಸವಿದ್ದಾರೆ. ...

READ MORE

Related Books