ಸುಮುಖ ಕಲಾ

Author : ಆಶಾಕಿರಣ್

Pages 88

₹ 100.00
Year of Publication: 2021
Published by: ಸ್ಪಂದನ ಸಿರಿ ಪ್ರಕಾಶನ
Address: #406. 11ನೇ ಅಡ್ಡ ರಸ್ತೆ, ಕುವೆಂಪುನಗರ, ಹಾಸನ-573201
Phone: 7204731877

Synopsys

`ಸುಮುಖ ಕಲಾ’ ಕೃತಿಯು ಆಶಾ ಕಿರಣ್ ಅವರ ಕವನಸಂಕಲನವಾಗಿದೆ. ಕೃತಿಯ ಕುರಿತು ರಾಜಶೇಖರ ಮಠಪತಿ ಅವರು, ಬದುಕಿನ ಸಂತೃಪ್ತಿಯ ಈ ಘಳಿಗೆಯಲ್ಲಿ ಆಶಾ ಕಿರಣ್ ಅವರಿಗೆ ಕಾವ್ಯದ ಈ ಎಲ್ಲ ಸೂಕ್ಷ್ಮತೆಗಳನ್ನು ದಕ್ಕಿಸಿಕೊಳ್ಳುವ ಅವಕಾಶವಿದೆ. ಪ್ರೀತಿ ಮತ್ತು ಪ್ರಯೋಗಶೀಲತೆ ಅವರ ವ್ಯಕ್ತಿತ್ವದ ಬಹುಮುಖ್ಯ ಲಕ್ಷಣಗಳು. ಒಂದು ಉತ್ಕೃಷ್ಟ ಕಾವ್ಯದ ಗಂತವ್ಯವೇ ಸತ್ಯ, ಸತ್ಯವನ್ನಲ್ಲದೆ ಅದು ಮತ್ತಿನ್ನೇನೂ ಹೇಳುವುದಿಲ್ಲವಾದುದರಿಂದ ಅದು ನಮ್ಮ ನೆನಪುಗಳಿಗೆ ಮತ್ತೆ ಮತ್ತೆ ಹತ್ತಿರವಾಗುತ್ತಿರುತ್ತದೆ. ಹೀಗಾಗಿಯೆ, ಲೋಕವ್ಯವಹಾರದ ಭಾಗವೇ ಆಗಿರುವ ಕವಿ ಸುಳ್ಳಾಡಬಹುದು, ಆದರೆ ಈ ಎಲ್ಲವೂ ಮೀರಿ ಅವನೊಳಗೆ ಘಟಿಸುವ ಕವಿತೆ ಎಂದೂ ಸುಳ್ಳಾಡದು ಎನ್ನುತ್ತಾರೆ

About the Author

ಆಶಾಕಿರಣ್

ಆಶಾ ಕಿರಣ್ ಅವರು ಮೂಲತಃ ಚನ್ನರಾಯಪಟ್ಟಣ ತಾಲೂಕಿನ ಕಲ್ಕೆರೆ ಚೌಡೇನಹಳ್ಳಿಯವರು. 1968 ನವೆಂಬರ್ 25 ರಂದು ಜನನ. ಅವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿರುತ್ತದೆ. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರ ಕೃತಿಗಳು: ಸುಮುಖ ಕಲಾ ...

READ MORE

Related Books