ಹೊಸ ದಿಗಂತದ ಹಾಯಿಕುಗಳು

Author : ಶಂಭುಲಿಂಗ ವಾಲ್ದೊಡ್ಡಿ

Pages 132

₹ 150.00
Year of Publication: 2020
Published by: ಶೋಭಾ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್, ವಾಲ್ದೊಡ್ಡಿ, ಬೀದರ.
Address: ಶೋಭಾ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್, ವಾಲ್ದೊಡ್ಡಿ, ಬೀದರ.
Phone: 9448186652

Synopsys

ಶಂಭುಲಿಂಗ ವಾಲ್ದೊಡ್ಡಿ ಅವರ ಹಾಯ್ಕುಗಳ ಸಂಕಲನ ‘ಹೊಸದಿಗಂತದ ಹಾಯಿಕುಗಳು’. 2022ರಲ್ಲಿ ಬಿಡುಗಡೆಯಾದ ಈ ಸಂಕಲನದಲ್ಲಿ ಹಾಯಿಕುಗಳ ವಿಭಿನ್ನ ಆಯಾಮಗಳನ್ನು ತೆರೆದಿರಿಸಿದ್ದಾರೆ. ಅನೇಕ ಸಂದರ್ಭಗಳಲ್ಲಿ ಬರೆದ ಹಾಯ್ಕುಗಳ ಸಂಗ್ರಹವನ್ನು ಮಾಡಿ ಈ ಕೃತಿಯನ್ನು ಹೊರತರಲಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಮಾತ್ರಾಗಣದಲ್ಲಿ ಮೊದಲನೆಯ ಸಾಲಿನಲ್ಲಿ ಹಾಯಕುಗಳು ಮೂಡಿಬಂದಿರುತ್ತವೆ. ಮಾತ್ರಾಗಣದಲ್ಲಿ  ಮೊದಲನೆಯ ಸಾಲಿನಲ್ಲಿ 3,4 ಮಾತ್ರೆಯ ಎರಡು ಗಣಗಳಿವೆ. ಜೊತೆಗೆ ಅಕ್ಷರ ವೃತ್ತದ ನಿಯಮಕ್ಕೆ ಬಂದರೆ ಐದು ಅಕ್ಷರಗಳಿಗೆ ಏಳು ಮಾತ್ರೆಗಳು, ಎರಡನೆಯ ಸಾಲಿನಲ್ಲಿ 3,4 ಮಾತ್ರೆಗಳ ಎರಡನೆಯ ಸಾಲಿನಲ್ಲಿ 3,4,3 ಮಾತ್ರೆಯ ಮೂರು ಗಣಗಳಿದ್ದು ಏಳು ಅಕ್ಷರಗಳಿಗೆ  ಹತ್ತು ಮಾತ್ರೆಗಳು. ಮೂರನೆಯ ಸಾಲಿನಲ್ಲಿ 3,4 ಮಾತ್ರೆಗಳ ಎರಡು ಗಣಗಳಿದ್ದು 5 ಅಕ್ಷರಗಳಿಗೆ ಏಳು ಮಾತ್ರೆಗಳಿವೆ. ಮೂರು ಸಾಲುಗಳ ಅಂತ್ಯದಲ್ಲಿ ಪ್ರಾಸವನ್ನು ಬಳಸಿದ್ದಾರೆ. ಇಲ್ಲಿ ಕವಿ ಒಟ್ಟು 450 ಹಾಯಿಕುಗಳನ್ನು ರಚಿಸಿದ್ದಾರೆ. 

ಹೆಣ್ಣು ಮಕ್ಕಳಿಗೆ ಬೆಲೆ ಕೊಡದ ಧರ್ಮ ಯಾವುದಾದರೂ ಇದ್ದರೆ, ಆ ಧರ್ಮ ಸತ್ತ ಸಮಾನವೆಂದು ಕವಿ ಸೊಗಸಾಗಿ ಹೇಳಿದ್ದಾರೆ. ಕಾರಣ ಜಗತ್ತಿನಲ್ಲಿರುವ ಪ್ರತಿಯೊಂದು ಧರ್ಮವು ಹೆಣ್ಣಿನ ಬಗ್ಗೆ ಸಾಕಿಷ್ಟು ಒಳ್ಳೆಯ ಚಿಂತನೆ ಮಾಡಬೇಕೆಂಬುದು ಕವಿಯ ಮನದಾಳದ ಬಯಕೆಯಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಶರಣರು ಹೆಣ್ಣೇ ಸರ್ವಸ್ವವೆಂದು ಆಕೆ ಗೌರವ ಆದರಗಳನ್ನು ಸೂಕ್ತವಾಗಿ ಸಲ್ಲಿಸಬೇಕೆಂದು ವಚನಗಳ ಮೂಲಕ ಹೇಳಿದ್ದಾರಲ್ಲದೇ ಅದರಂತೆ ನಡೆದು ತೋರಿಸಿದ್ದಾರೆ. ಆದ್ದರಿಂದ ಹೆಣ್ಣಿಗೆ ಪ್ರತಿಯೊಬ್ಬರೂ ಗೌರವಿಸಲೇಬೇಕೆಂದು ಕವಿಯ ಆಶಯವಾಗಿದೆ. 

ಈ ಕೃತಿಯಲ್ಲಿ ಕವಿಗಳು ಭೀಮರಾವ ಅಂಬೇಡ್ಕರ್, ಗೌತಮಬುದ್ಧ, ತಾಯಿ, ಅಪ್ಪ, ಕತ್ತಲೆ, ಮಣ್ಣು, ಕೃಷಿ, ಜಾತಿ-ವಿಜಾತಿಗಳ, ಬಡವ ಬಲ್ಲಿದರ, ಸುಳ್ಳು ಸತ್ಯ ಹೀಗೆ ನಾನಾ ವಿಷಯಗಳ ಕುರಿತು ಹಾಯಿಕುಗಳನ್ನು ರಚಿಸಿದ್ದಾರೆ. ಕವಿಗಳು ಛಂದಸ್ಸಿನ ಎರಡು ಪ್ರಕಾರಗಳನ್ನು ಸಮ್ಮಿತಗೊಳಿಸಿ ಕೃತಿಯನ್ನು ರಚಿಸಿರುತ್ತಾರೆ. 

About the Author

ಶಂಭುಲಿಂಗ ವಾಲ್ದೊಡ್ಡಿ

ಶಂಭುಲಿಂಗ ವಾಗ್ದೊಡ್ಡಿ ಅವರು ಮೂಲತಃ ಬೀದರ ಜಿಲ್ಲೆಯ ವಾಗ್ದೊಡ್ಡಿ ಯವರು. ಲೇಖಕರು, ಜಾನಪದ ಕಲಾವಿದರು, ಗಾಯಕರು, ಬೀದರಿನ ವಿದ್ಯಾನಗರದ ಸಮತಾ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಹೊಸ ದಿಗಂತದ ಹಾಯಿಕುಗಳು, ಮಹಾತಾಯಿ (ಜೀವನ ಚಿತ್ರ), ಮಮತೆಯ ಮಂದರ (ವಿಮರ್ಶಾ ಲೇಖನಗಳ ಸಂಕಲನ)  ಪ್ರಶಸ್ತಿ-ಪುರಸ್ಕಾರಗಳು: ಅವರ  ಜಾನಪದ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಕರ್ನಾಟಕ ಜಾನಪದ ಪರಿಷತ್ತಿನಿಂದ 'ಜಾನಪದ ಲೋಕ ಪ್ರಶಸ್ತಿ'  ಹಾಗೂ 2008-2009 ನೇ ಸಾಲಿನ 'ರಾಷ್ಟ್ರೀಯ ಉತ್ತಮ ಶಿಕ್ಷಕ' ಪ್ರಶಸ್ತಿ ಲಭಿಸಿದೆ.    ...

READ MORE

Related Books