ಮಧುರ ಹನಿಗಳು

Author : ಸಿ.ಎಸ್. ಆನಂದ

Pages 100

₹ 70.00




Year of Publication: 2017
Published by: ಕಾದಂಬರಿ ಪ್ರಕಾಶನ
Address: # ಸಿದ್ದಣ್ಣ ಪೂಜಾರಿ, ಅಪೂರ್ವ ನಿವಾಸ, ಯಮುನಾ ನಗರ, ಕುಸನೂರು ರಸ್ತೆ, ಕಲಬುರಗಿ-585105
Phone: 9731826634

Synopsys

ಲೇಖಕ ಸಿ.ಎಸ್. ಆನಂದ ಅವರ ಕವನ ಸಂಕಲನ-ಮಧುರ ಹನಿಗಳು. ಕವಿ ಡಾ. ಸತ್ಯಾನಂದ ಪಾತ್ರೋಟ ಅವರು ಕೃತಿಗೆ ಬೆನ್ನುಡಿ ಬರೆದು ‘ಇಲ್ಲಿಯ ಕವನಗಳು ತಾಜಾತನದೊಂದಿಗೆ ಓದುಗರ ಮನಸ್ಸನ್ನು ಗೆಲ್ಲುತ್ತವೆ. ಪ್ರೀತಿ-ಪ್ರೇಮ-ನೋವು-ವಿರಹ, ಪ್ರೀತಿಯ ಹಿಂದಿನ ಅಸಹಾಯಕತೆ, ಸೋಗಲಾಡಿತನ, ತಳಮಳ, ಸಂಕಟ, ವಂಚನೆ, ದ್ವಂದ್ವ, ತವಕ-ತಲ್ಲಣ, ಮಾನವೀಯತೆ ಹೀಗೆ ವ್ಯವಸ್ಥೆಯ ವಿಭಿನ್ನ ಮುಖಗಳನ್ನು ಕವನಗಳ ಮೂಲಕ ಅನಾವರಣಗೊಳಿಸಿದ್ದಾರೆ. ಪರಂಪರೆಯನ್ನು ತುಂಬಾ ಶ್ರದ್ಧೆಯಿಂದ ಪೂಜಿಸುವ ಕವಿಗಳ ಮನೋವೃತ್ತಿಯೂ ಕವನಗಳಲ್ಲಿ ಕಾಣುತ್ತೇವೆ’ ಎಂದು ಪ್ರಶಂಸಿಸಿದ್ದಾರೆ.  

 

About the Author

ಸಿ.ಎಸ್. ಆನಂದ

ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು:  ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...

READ MORE

Related Books