ಪಯಣ (ಕವನ ಸಂಕಲನ)

Author : ವಿ.ಕೃ. ಗೋಕಾಕ (ವಿನಾಯಕ)

Pages 108




Year of Publication: 1978
Published by: ಸುರುಚಿ ಪ್ರಕಾಶನ
Address: ಮೈಸೂರು

Synopsys

ಕವಿ ವಿ.ಕೃ. ಗೋಕಾಕರ ಕವನ ಸಂಕಲನ-ಪಯಣ. 52 ಕವನಗಳು ಒಳಗೊಂಡಿವೆ. ಕವಿ ಹೇಳುವಂತೆ ‘ಸುಮಾರು ಹತ್ತು ವರ್ಷಗಳಲ್ಲಿ ಬರೆದ ಕವನಗಳಲ್ಲಿ ಕೆಲವೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಕವನಗಳನ್ನು ಬರೆದ ವರ್ಷ-ತಿಂಗಳುಗಳನ್ನು ಸೂಚಿಸುವುದಕ್ಕೂ ಕಾರಣವಿದೆ. ಕೆಲವು ಕವಿತೆಗಳ ಸಂದರ್ಭವು ಈ ರೀತಿಯಾಗಿಯೂ ಹೊಳೆಯಬಹುದು. ಅಲ್ಲದೇ, ಹೊಸಗನ್ನಡದ ಕಾವ್ಯಶೈಲಿಯು ಈಗ ಸಿದ್ಧವಾಗುತ್ತಲಿದೆ. ಇಂದಿನ ಕವಿಗಳೆಲ್ಲ ಸೇರಿ ಅದಕ್ಕೆ ರೂಪ ಕೊಡುತ್ತಲಿದ್ದಾರೆ. ಹೀಗಿರುವಾಗ, ಒಬ್ಬರ ಶೈಲಿಯ ವರ್ಚಸ್ಸು ಇನ್ನೊಬ್ಬ ಶೈಲಿಯ ಮೇಲೆ ಕಂಡುಬರುವಂತೆ ಸಹಜಸಿದ್ಧ ಸಾಮ್ಯಗಳು ಸಹ ಅಲ್ಲಲ್ಲಿ ಸಿಕ್ಕಬಹುದು. ಇದೆಲ್ಲದರ ನಿಷ್ಕರ್ಷೆಯಾಗಲೆಂದು ಹೇಗೆ ಮಾಡಿದೆ. ಕವನಗಳನ್ನು ಇಲ್ಲಿ ಹಿಂದು-ಮುಂದಾಗಿರಿಸಿದ ರೀತಿಯು ಬರೀ ಕಣ್ಣುಮುಚ್ಚಾಟವಲ್ಲ. ಕವನಗಳಂತೆ ಅವುಗಳನ್ನು ಹೆಣೆಯುವ ಹವಣಿಕೆಯಲ್ಲಿಯೂ ಮನೋವೃತ್ತಿ ಯನ್ನು ಬಿಂಬಿಸುವ ಸಾಮರ್ಥ್ಯವಿದೆ. ಅದನ್ನು ಉಪಯೋಗಿಸಲು ಪ್ರಯತ್ನ ಮಾಡಿದ್ದೇನೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕೃತಿಯನ್ನು ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಾಶನವು 1937ರಲ್ಲಿ ಪ್ರಕಟಿಸಿತ್ತು ಆಗ ಪುಟ : 140, ಬೆಲೆ: 00:12 ರೂ.ಗಳಿತ್ತು. 

 

 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books