ಮೌನ ಮಾತಿನ ಸದ್ದು

Author : ಚಂದ್ರಶೇಖರ ತಾಳ್ಯ

Pages 122

₹ 100.00




Year of Publication: 2017
Published by: ಎನ್. ಕೆ. ಪ್ರಕಾಶನ
Address: #239/63, ಕಾಳೇಗೌಡ ಬಡಾವಣೆ, ರಾಜರಾಜೇಶ್ವರಿನಗರ, ಬೆಂಗಳೂರು- 560098
Phone: 9845628699

Synopsys

‘ಮೌನ ಮಾತಿನ ಸದ್ದು’ ಲೇಖಕ, ಕವಿ ಚಂದ್ರಶೇಖರ ತಾಳ್ಯ ಅವರ ಕವನ ಸಂಕಲನ. ಮೌನ ಮಾತಿನ ಸದ್ದುಗಳನ್ನು ಹಿಡಿಯುವ ಪ್ರಯತ್ನವನ್ನು ಇಲ್ಲಿಯ ಕವಿತೆಗಳು ಮಾಡುತ್ತವೆ. ಕಾವ್ಯವೆಂಬ ನಿರಂತರ ಕಾಯಕದಲ್ಲಿ ತೊಡಗಿ ಅದು ನೀಡಿದ ಸಂಕಟ, ಬಿಡುಗಡೆಯ ಭಾವ, ಲೋಕದೊಂದಿಗೆ ನೀಡಿದ ಸಂವಾದದ ಸಾಧ್ಯತೆಗಾಗಿ ಧನ್ಯತೆಯ ಭಾವವೊಂದು ಇಲ್ಲಿಯ ಕವಿತೆಗಳಲ್ಲಿ ವ್ಯಕ್ತವಾಗುತ್ತದೆ ಎನ್ನುತ್ತಾರೆ ಲೇಖಕಿ ಎಚ್.ಎಲ್. ಪುಷ್ಪ. ಕರ್ನಾಟಕ ಸಾಹಿತ್ಯ ಪರಿಷತ್ತಿನ 2017ನೇ ಸಾಲಿನ ಪುಸ್ತಕ ಬಹುಮಾನ ಪಡೆದ ಈ ಕವನ ಸಂಕಲನ,

About the Author

ಚಂದ್ರಶೇಖರ ತಾಳ್ಯ

ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು. ತತ್ವಶಾಸ್ತ್ರ-ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು. ನವ್ಯೋತ್ತರ ಸಾಹಿತ್ಯದ ಕಾವ್ಯ ಕಟ್ಟೋಣಕ್ಕೆ ಮಾದರಿಯಂತಹ ಕಾವ್ಯ ರಚನೆ ತಾಳ್ಯರ ವಿಶೇಷತೆ. ನನ್ನ ಕಣ್ಣಗಲಕ್ಕೆ, ಸಿಂಧೂ ನದಿಯ ದಂಡೆಯ ಮೇಲೆ, ಎಲ್ಲಿ ನವಿಲು ಹೇಳಿರೇ, ಸುಡುವ ಭೂಮಿ, ಕಾವಳದ ಸಂಜೆಯಲ್ಲಿ, ಮೌನಮಾತಿನ ಸದ್ದು ತಾಳ್ಯರ ಕವನ ಸಂಕಲನಗಳು. ಪ್ರಭು ಅಲ್ಲಮ, ನೆಲವ ಹುಡುಕಿ ಗದ್ಯ, ಅಲ್ಲಮ ನಾಟಕ, ...

READ MORE

Related Books