ಪುನರ್ವಸು

Author : ಬಿ.ಎನ್. ಮಾಂತೇಶ ಕುಮಾರ್



Year of Publication: 2021

Synopsys

ಬಿ.ಎನ್. ಮಾಂತೇಶ ಕುಮಾರ್ ಅವರ ’ ಪುನರ್ವಸು’ ಕೃತಿಯು ಕವನಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಸಂಪತ್ ಬೆಟ್ಟಗೆರೆ ಅವರು, ಹೊಸಗನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಕಾಲಘಟ್ಟಗಳೆಂದು ಗುರುತಿಸಲಾಗಿರುವ ನವೋದಯ, ಪ್ರಗತಿಶೀಲ, ನವ್ಯ, ನವೋತ್ತರದ ದಲಿತ ಹಾಗೂ ಬಂಡಾಯ ಕಾಲಘಟ್ಟಗಳ ಸಂವೇದನೆಯ ಭಾವ, ಬಂಧ, ರಚನಾಕ್ರಮಗಳಲ್ಲಿ ವಿವಿಧ ಸ್ವರೂಪದ ವಿನ್ಯಾಸಕಂಡ ಕನ್ನಡ ಕಾವ್ಯಜಗತ್ತು ತನ್ನದೇ ಆದಂತಹ ವೈಶಿಷ್ಟತೆಗಳೊಂದಿಗೆ ವಿಶ್ವಮಾನ್ಯವಾಗಿರುವುದು ಈಗ ಇತಿಹಾಸವಾಗಿದೆ. ಇಲ್ಲಿ ಕವಿ ಇದೆಲ್ಲಾವನ್ನು ತನ್ನ ಕವನದಲ್ಲಿ ವಿವರಿಸುತ್ತಾನೆ. ತನ್ನ ಸಂಗಾತಿಯನ್ನು ಜೀವದುಸಿರಂತೆ ಪರಿಭಾವಿಸಿಕೊಳ್ಳುವ ಕವಿಗೆ ’ಪುನರ್ವಸು’ ಎಂಬ ನಕ್ಷತ್ರವೊಂದರ ಸಹಜ ಗುಣವೆಂದು ಭಾವಿಸಿಕೊಂಡು ಬಂದಿರುವ ಶಾಂತಿ ಸ್ವಭಾವದ ಸಾಂಪ್ರದಾಯಿಕ ನಂಬಿಕೆಯ ಮೇಲೆ ಅತೀಪ್ರೀತಿ ಎನಿಸುತ್ತದೆ. ಮುದುವರೆದಂತೆ ”ನನ್ನುಸಿರ ಕಣಗಳೆಷ್ಟು ನಿರಾಳವೋ/ ನೀನು ಅಷ್ಟೆ ಸರಳವೂ/ ಮುಗಿಲ ಹಂದರ ಮಿಗಿಲು ವಿರಳಳು/ ನಾನು ಅದಕೆ ಮರುಳನು” ಎಂದು ’ ಅಮರವಾಗಿಸೆ’ ಎಂಬ ಕವನದಲ್ಲಿ ಇದೇ ಭಾವಂತರಂಗ ಬಿಚ್ಚಿಕೊಂಡು ಮುನ್ನಡೆಯುತ್ತದೆ. ಹೀಗೆ ಈ ಕವಿಯು ತನ್ನಂತರಂಗದ ಭಾವನೆಗಳನ್ನೆಲ್ಲ ತನ್ನಾಕೆಯ ಮುಂದೆ ಹರವಿಕೊಂಡು ಇದರಲ್ಲಿ ಜೊಳ್ಳೆಷ್ಟು, ಗಟ್ಟಿ ಯಾವುದೆಂದು ಕೇಳುವಂತೆ ಇಲ್ಲಿನ ಕವನಗಳ ದರ್ಶನ ನಮಗೆ ಕಂಡು ಬರುತ್ತದೆ ಎಂದಿದ್ದಾರೆ.

About the Author

ಬಿ.ಎನ್. ಮಾಂತೇಶ ಕುಮಾರ್

ಲೇಖಕ ಬಿ.ಎನ್. ಮಾಂತೇಶ ಕುಮಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲ್ಲೂಕಿನ ಬಂಜೇನಹಳ್ಳಿ ಗ್ರಾಮದವರು. ಕವನ ಬರೆಯುವುದು ಹಾಗೂ ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಪುನರ್ವಸು, ಅನುರಣನ(ಅಪ್ರಕಟಿತ ಕವನ ಸಂಕಲನ) ...

READ MORE

Related Books