ನಿಷೇಧಕ್ಕೊಳಪಟ್ಟ ಒಂದು ನೋಟು

Author : ವಿಲ್ಸನ್ ಕಟೀಲ್

Pages 88

₹ 120.00




Year of Publication: 2018
Published by: ಸಂಗಾತ ಪುಸ್ತಕ
Address: ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

‘ನಿಷೇಧಕ್ಕೊಳಪಟ್ಟ ಒಂದು ನೋಟು’ ವಿಲ್ಸನ್ ಕಟೀಲ್ ಅವರ ಕವನ ಸಂಕಲನ. ಕವಿ ಆರಿಫ್ ರಾಜಾ ಮುನ್ನುಡಿ ಬರೆದು ‘ ಜೀವಪರವಾದ ಆಲೋಚನೆಗಳೊಂದಿಗೆ ಸ್ಪಷ್ಟವಾಗಿ ಅನುಭವವನ್ನು ಮಂಡಿಸುವ ವಿಲ್ಸನ್ ಕಟೀಲ್ ಅವರು ಹೊಸ ತಲೆಮಾರಿನ ಕೊಂಕಣಿ ಕವಿ. ಕನ್ನಡದ ಕವಿಯೂ ಹೌದು. ಕಾವ್ಯಾನುಭವವನ್ನು ಫ್ಯಾಂಟಸಿಯೊಂದಿಗೆ ಬೆರೆಸಿ ಕವಿತೆ ಮಾಡುತ್ತಾರೆ. ಹರಿತ ಶೈಲಿ, ತಾಜಾತನ ಇಲ್ಲಿನ ಕವಿತೆಗಳಲ್ಲಿ ಮುಟ್ಟಿ ಅನುಭವಿಸಬಹುದಾದ ಸಾಮಾನ್ಯ ಗುಣಗಳು. ಕಾವ್ಯದ ಜೀವಂತಿಕೆ ಹಾಗಂದರೇನೆಂದು ತಿಳಿಯ ಬಯಸುವವರು ಇವರ ರಚನೆಗಳನ್ನೊಮ್ಮೆ ಓದಿ ನೋಡಬೇಕು. ಒಣ ಶಬ್ಧ, ವಾಕ್ಯ, ವಿವರಗಳಲ್ಲಿ ಸೊಕ್ಕಿ ಹೋಗಿರುವ ಕವಿ-ಓದುಗರಿಗೆ ಮುಕ್ತಿ ನೀಡಬಲ್ಲ ನಮ್ಮ ಕೆಲವೇ ಕೆಲವು ಸಮಕಾಲೀನರಲ್ಲಿ ವಿಲ್ಸನ್ ಕಟೀಲ್ ಒಬ್ಬರು. ಅದೇ ಹಳೆಯ ಮಾತಿನಲ್ಲಿ ಹೇಳುವುದಾದರೆ, ಆಕೃತಿಯಲ್ಲಿ ಹಳಬನಾಗಿ ಆಶಯದಲ್ಲಿ ಹೊಸಬನಾಗಿರುವ ಇವತ್ತಿನ ಕವಿ ಎದುರಿಸುವ ಬಿಕ್ಕಟ್ಟು ಭಾವದ್ದಲ್ಲ. ಅ-ಭಾವದ್ದು, ಕಾವ್ಯದ ಶರೀರದಲ್ಲೇ ಅಂತರ್ಗತವಾಗಿರುವ ಕಥನದ ಆಕರ್ಷಣೆ ವಿಲ್ಸನ್ ಕಟೀಲ್ ಕವಿತೆಗಳ ಯಶಸ್ಸಿನ ಗುಟ್ಟು ’ ಎಂದು ಪ್ರಶಂಸಿಸಿದ್ದಾರೆ.

About the Author

ವಿಲ್ಸನ್ ಕಟೀಲ್
(31 August 1980)

ಕವಿ ವಿಲ್ಸನ್ ಕಟೀಲ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಅವರ ಮೂಲ ಹೆಸರು ರೋಶನ್ ಸಿಕ್ವೇರಾ. ‘ಕಾರಣಾಂತರ ಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಿತರಾದ ವಿಲ್ಸನ್, ತಮಿಳು ಹಾಡುಗಳಿಂದ ಸ್ಫೂರ್ತಿಗೊಂಡು ಕಾವ್ಯ ರಚನೆಯಲ್ಲಿ ತೊಡಗಿಕೊಂಡೆ’ ಎನ್ನುತ್ತಾರೆ.  ಅವರ ಮಾತೃಭಾಷೆ ಕೊಂಕಣಿ. ಮೊದಲಿನಿಂದಲೂ ಕತೆ, ಕವಿತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ಕೊಂಕಣಿಯಲ್ಲಿ ಅವರು ದೀಕ್ ಆನಿ ಪೀಕ್ ಹಾಗೂ  ಪಾವ್ಳೆ, ಎನ್ ಕೌಂಟರ್ ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ದೂರದರ್ಶನ, ಆಕಾಶವಾಣಿ, ದಸರಾ ಕವಿಗೋಷ್ಠಿ, ಕೇಂದ್ರ ಸಾಹಿತ್ಯ ಅಕಾಡೆಮಿ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ಮೂರು ಬಾರಿ ಅತ್ಯುತ್ತಮ ಗೀತ ...

READ MORE

Related Books