ಶೋಭನಾ ಕವಿತೆಗಳು

Author : ಮೋಹನ ಕುರುಡಗಿ

Pages 86

₹ 40.00




Year of Publication: 2000
Published by: ಗೀತಾಂಜಲಿ ಪ್ರಕಾಶನ
Address: ತೋಟಗಂಟಿ, ಕೋಡಿಕೊಪ್ಪ ಅಂಚೆ, ಗದಗ ಜಿಲ್ಲೆ

Synopsys

`ಶೋಭನಾ' ಮೋಹನ ಕುರುಡಗಿ ಅವರ ಕವನಸಂಕಲನವಾಗಿದೆ. ಈ ಸಂಕಲನದಲ್ಲಿ ಕೆಲವೊಂದು ಕಿರು ಕವಿತೆಗಳಿವೆ. ಜೀವನದ ಒಂದು ಘಟ್ಟದಲ್ಲಿ ಪ್ರೀತಿ-ಪ್ರೇಮ ಎಂದು ಕನವರಿಸಿ ಹಾತೊರೆಯುವ ಮಾನವ ಸಹಜ ಭಾವನೆಗಳು ಹಾಡುಗಳಾಗಿ ರೂಪುಗೊಂಡಿವೆ. ಹರೆಯದ ಆಸೆ-ಆಕಾಂಕ್ಷೆಗಳಿಗೆ ಹಕ್ಕಿಗಳಂತೆ ಮೇರೆಯೇ ಇಲ್ಲದ ಆಕಾಶವನ್ನೊಮ್ಮೆ ಸುತ್ತುವ ಬಯಕೆ. ಸ್ವಚ್ಛಂದ ಬದುಕೊಂದನ್ನು ಆರಿಸಿಕೊಳ್ಳಲು ತವಕಿಸುವ ಮನುಷ್ಯನ ಮನಸೊಂದು ಇಲ್ಲಿ ಸ್ಟೇಚ್ಛೆಯಿಂದ ವಿಹರಿಸುತ್ತ ಅಲೆದಾಡುತ್ತಿದೆ.

About the Author

ಮೋಹನ ಕುರುಡಗಿ - 13 February 2004)

ಲೇಖಕ ಮೋಹನ ಕುರುಡಗಿ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ತೋಟಗಂಟಿ (ಜನನ: 1950) ಗ್ರಾಮದವರು. ಗದಗ ಜಿಲ್ಲೆಯ ನರೇಗಲ್ ನಲ್ಲಿ ಪದವಿ ಹಾಗೂ ಧಾರವಾಡದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ವೃತ್ತಿಯಿಂದ ಸಮಾಜ ಕಲ್ಯಾಣ ವಿಸ್ತರಣಾಧಿಕಾರಿ ಗಳಾಗಿದ್ದರು. ಬುಡಕಟ್ಟು ಜನಾಂಗದ ಮೊದಲ ಕವಿ ಎಂದೇ ಗುರುತಿಸಲ್ಪಟ್ಟಿದ್ದಾರೆ. ಬಂಡಾಯ ಪ್ರಜ್ಞೆ ಹಾಗೂ ಸಾಮಾಜಿಕ ಎಚ್ಚರಿಕೆಗಳು ಇವರ ಕಾವ್ಯ ಹಾಗೂ ಬರಹಗಳ ಮೂಲ ಅಂಶಗಳಾಗಿವೆ. ದಾಂಡೇಲಿ, ಯಲ್ಲಾಪುರ, ಹಳಿಯಾಳ ಹಾಗೂ ಜೊಯಿಡಾ ಪ್ರದೇಶಗಳಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಸರವನ್ನುಸೃಷ್ಟಿಸಿ ಉದಯಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸಿದ್ದರು.  ಕೃತಿಗಳು: ಮತ್ಸ್ಯಗಂಧಿ ಮತ್ತಿತರ ಪದ್ಯಗಳು, ನಗ್ನಸತ್ಯ, ಅಕ್ಷರ ಕಾವ್ಯ, ಶೋಭನಾ, ಮೃಗತೃಷ್ಟ ...

READ MORE

Related Books