ಸುಖಿಗೀತ

Author : ಗೀತಾ ಶ್ರೀಧರ ಯಾಳಗಿ

Pages 72

₹ 80.00
Year of Publication: 2018
Published by: ಚೇತನ್ ಪ್ರಕಾಶನ
Address: # 03, ಹನಮಂತ ದೇಸಾಯಿ ಮಹಡಿ, ರಮೇಶ್ ಭವನ್ ನಾಗಶೆಟ್ಟಿಕೊಪ್ಪ ಹಿಂದೆ, ಹುಬ್ಬಳ್ಳಿ- 580023
Phone: 90362162266

Synopsys

ಗೀತಾ ಶ್ರೀಧರ ಯಾಳಗಿ ಅವರ ಕವನಸಂಕಲನ ‘ಸುಖಿಗೀತ’. ಈ ಸಂಕಲನದಲ್ಲಿನ ಶರ್ಮಿಳೆಯ ನೋವು, ಹೆತ್ತ ಮಗುವಿಗೆ ತುತ್ತನಿಕ್ಕಲಾಗದ ತಾಯಿಯ ಅಸಹಾಯಕತೆ, ಭೀಕರ ಬರದ ಚಿತ್ರಣ ಹೀಗೆ ಒಂದೊಂದೇ ಕವನಗಳನ್ನು ಓದುತ್ತಾ ಹೋದಂತೆಲ್ಲಾ ಓದುಗನನ್ನು ತನ್ನ ಅಕ್ಷರ ಮಾಯೆಯಲ್ಲಿ, ಭಾವನಾತ್ಮಕವಾಗಿ ಬಂಧಿಸಿಡುತ್ತದೆ.

About the Author

ಗೀತಾ ಶ್ರೀಧರ ಯಾಳಗಿ
(25 March 1979)

ಗೀತಾ ಶ್ರೀಧರ ಯಾಳಗಿ ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದವರು. 1979ರ ಮಾರ್ಚ್ 25 ರಂದು ಜನನ. ಗಜೇಂದ್ರಗಡದ ಎಸ್.ಎಂ.ಭೂಮರಡ್ಡಿ ಕಾಲೇಜಿನಿಂದ ಬಿಎ ಪದವಿ ಪಡೆದರು.  ಪ್ರವೃತ್ತಿಯಿಂದ ಕವಯತ್ರಿ, ಇವರ ಕಾವ್ಯ ಕಸೂತಿಗೆ ಸದಭಿರುಚಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘ ಧಾರವಾಡ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದಕ್ಕಿದೆ. ಕರ್ನಾಟಕ, ಮುಂಬೈ ಸೇರಿದಂತೆ ಅನೇಕ ಹೊರರಾಜ್ಯಗಳಲ್ಲಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಾದೇಶಿಕ ವಿವಿಧ ಸಂಘ-ಸಂಸ್ಥೆಗಳಿಂದ ಸಾಹಿತ್ಯ ಕೃಷಿ ನಿಮಿತ್ಯ ಗೌರವಗಳು ಸಂದಿವೆ. ಅವರ ಕವನ ಸಂಕಲನ ಸುಖಿಗೀತ ಪ್ರಕಟಗೊಂಡಿದೆ. ಓದು, ಬರವಣಿಗೆ, ಪ್ರವಾಸ, ಹೊಲಿಗೆ, ...

READ MORE

Related Books