ಮಾಗಿಪರ್ವ

Author : ಎಚ್.ಎಸ್. ಶಿವಪ್ರಕಾಶ್

Pages 40

₹ 40.00
Year of Publication: 2009
Published by: ಕಥನ ಪ್ರಕಾಶನ
Address: #15, ಕಥನ, 7ನೇ ಬಿ ಅಡ್ಡರಸ್ತೆ, ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು- 5600720
Phone: 080- 2321818/9448334622

Synopsys

‘ಮಾಗಿ ಪರ್ವ’ ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶರ ಹಾಯ್ಕುಗಳ ಸಂಕಲನ.  ಎಚ್. ಎಸ್. ಶಿವಪ್ರಕಾಶ ಹೊಸ ತಲೆಮಾರಿನ ಕನ್ನಡ ಕವಿತೆಗಳಿಗೆ ನವೀನ ನುಡಿಗಟ್ಟು, ಛಂದಸ್ಸು ಮತ್ತು ಅರ್ಥಲೋಕವನ್ನು ತಂದು ನೀಡಿದ ಅತ್ಯಂತ ಮಹತ್ವದ ಕವಿ. ಅನಿರೀಕ್ಷಿತ ಹಾಗೂ ದುರ್ಗಮ ಪಯಣ ಕೈಗೊಳ್ಳುವುದು ಮತ್ತು ತಾವೇ ಸೃಷ್ಟಿಸಿದ ಕಾವ್ಯದ ದಾರಿಗಳನ್ನು ತೊರೆದು, ಮಾದರಿಗಳನ್ನು ಒಡೆದು ಮತ್ತೆ ಹೊಸ ಹಾದಿಗಳನ್ನು ಹುಡುಕಿ ಹೋಗುವುದು ಅವರ ಕಾವ್ಯದ ವಿಶಿಷ್ಟ ಲಕ್ಷಣ. 

ಶಿವಪ್ರಕಾಶರ ಮೊದಲ ಸಂಕಲನ ಮಿಲರೇಪದ್ದು ಒಂದು ದಾರಿಯಾದರೆ ಆನಂತರ ಬಂದ ಸಮಗಾರ ಭೀಮವ್ವನ ಬೆವರ ವಾಸನೆಯನ್ನು ಸೂಸುವ ಮಳೆಬಿದ್ದ ನೆಲದಲ್ಲಿ ಸಂಕಲನದ್ದೇ ಇನ್ನೊಂದು ದಾರಿ. ಅಣುಕ್ಷಣ ಚರಿತೆ. ಸೂರ್ಯಜಲ, ಮಳೆಯ ಮಂಟಪ, ಮತ್ತೆ ಮತ್ತೆ, ಮಬ್ಬಿನ ಹಾಗೆ ಕಣಿವೆಯಾಸಿ ಕವಿತಾಗುಚ್ಛಗಳು ಮೇಲಿನ ಮಾತನ್ನು ಪುಷ್ಟೀಕರಿಸುತ್ತ ಬಂದಿವೆ. 

ತಮ್ಮೊಳಗಿನ ಕವಿಯ ನಿರಂತರ ಅಸಮಾಧಾನ, ಚಡಪಡಿಕೆಯ ಶಮನಕ್ಕಾಗಿಯೇ ಹುಟ್ಟಿದಂತಿರುವ ಶಿವಪ್ರಕಾಶರ ಕವಿತೆಗಳು ಪರಂಪರೆಯಿಂದ ಎಲ್ಲವನ್ನೂ ಪಡೆದು ತನ್ನದೇ ಹೊಸ ಕಣ್ಣೋಟವನ್ನು ಕಲಿಯುವುದು ಹೇಗೆ ಎಂಬುದಕ್ಕೆ ರೂಪಕಗಳಾಗಿವೆ. ಕಾವ್ಯವೇ ಜೀವನ ಮಾದರಿ ಎಂಬ ತಾದ್ಯಾತ್ಮವನ್ನು ಅವರ ಕವಿತೆಗಳು ತೆರದಿಡುತ್ತವೆ. ಈ ಬಗೆಯ ಕಾವ್ಯಸಂಭ್ರಮ  ಸೃಷ್ಟಿಸುವಲ್ಲಿ ಅವರಿಗೆ ಅವರೇ ಮಾದರಿಯಾಗಿದ್ದಾರೆ. 

‘ಮುಪ್ಪಾದ ಕೈಯಿಂದ

ಮುಟ್ಟಿದಾಗ ನಿನ್ನ ಎಳೆ ಗುಲಾಬಿ ಕೆನ್ನೆಗಳನ್ನು

ತೊಟ್ಟೆ ಕಳೆದ ಚೈತ್ರಗಳನ್ನು 

ಧನ್ಯವಾದಗಳು 

ನಿನ್ನ ಮಿದು ಅಪ್ಪುಗೆ ಶಮನಗೊಳಿಸಿತು

ಬೂದಿಯಡಿ ಕೆಂಡಗಳನ್ನು’

ಎಂದು ಇಲ್ಲಿನ ಒಂದು ಹಾಯ್ಕು ನುಡಿಯುತ್ತದೆ. ಇದು ಶಿವಪ್ರಕಾಶರ  ಕವಿತೆಗಳ ಮಟ್ಟಿಗೂ ನಿಜದ ಮಾತೇ ಆಗಿದೆ. 

About the Author

ಎಚ್.ಎಸ್. ಶಿವಪ್ರಕಾಶ್
(15 June 1954)

ಕವಿ, ಸಾಹಿತಿ, ಲೇಖಕ ಎಚ್.ಎಸ್.ಶಿವಪ್ರಕಾಶ್ ಬೆಂಗಳೂರಿನಲ್ಲಿ 15-06-1954ರಂದು ಜನಿಸಿದರು. ತಂದೆ ಪ್ರಸಿದ್ಧ ಸಾಹಿತಿಗಳು ಮತ್ತು ಕನ್ನಡ ಪರಿಷತ್ತಿನ ಅಧ್ಯಕ್ಷರು ಆಗಿದ್ದ ಶಿವಮೂರ್ತಿ ಶಾಸ್ತ್ರಿಗಳು.  ನವದೆಹಲಿಯ ಜೆ.ಎನ್.ಯು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಈಸ್ತೆಟಿಕ್ಸ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ, ನಾಟಕ, ಅನುವಾದ ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಶಿವಪ್ರಕಾಶರು ತಮ್ಮ ನಾಟಕ ಮಹಾಚೈತ್ರೆ ರಚನೆಯಿಂದಾಗಿ ಸಾರ್ವಜನಿಕ ವಿರೋಧ ಎದುರಿಸುವಂತಾಯಿತು. ಅವರ ಪ್ರಮುಖ ನಾಟಕಗಳು- ಮಹಾಚೈತ್ರ, ಸುಲ್ತಾನ್ ಟಿಪ್ಪು, ಮಂಟೇಸ್ವಾಮಿ, ಮಾದರಿ ಮಾದಯ್ಯ, ಮದುವೆ ಹೆಣ್ಣು. ಶಿವಪ್ರಕಾಶರ ಕವನ ಸಂಕಲನಗಳು- ಮಳೆ ಬಿದ್ದ ...

READ MORE

Related Books