ಶಾರದ ಯಾಮಿನಿ

Author : ಪು.ತಿ.ನ. (ಪು.ತಿ. ನರಸಿಂಹಾಚಾರ್ )

Pages 65
Year of Publication: 1944
Published by: ಕಾವ್ಯಾಲಯ ಪ್ರಕಾಶನ
Address: ಮೈಸೂರು

Synopsys

ಕವಿ ಪು.ತಿ. ನರಸಿಂಹಾಚಾರ್ ಅವರ ಕವನ ಸಂಗ್ರಹ-ಶಾರದ ಯಾಮಿನಿ. ಇಲ್ಲಿಯ ಬಹುತೇಕ ಕವನಗಳು ಪ್ರಬುದ್ಧ ಕರ್ಣಾಟಕ, ವಿಚಾರ ವಾಹಿನಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮರ್ತ್ಯದೇಗುಲದಲ್ಲಿ ಅಪ್ಸರೆಯರ ಪೂಜೆ, ದೀನಗಿಂತ ದೇವ ಬಡವ, ಒಂದು ಜೊನ್ನದ ಇರುಳು, ಶಾರದ ಯಾಮಿನಿ, ಮುನಿದ ಭಾರತವನ್ನು ಕುರಿತು, ಕರಿ ಮುಗಿಲಿನ ಹಾಡು, ಬಾ ಕನ್ನಡ ನಾಡಿನ ವಾಣಿ ಹೀಗೆ ಒಟ್ಟು 25 ಕವನಗಳು ಇಲ್ಲಿ ಸಂಕಲನಗೊಂಡಿವೆ. ಲೋಕದ ತೀವ್ರ ಅನುಭವಗಳೆಲ್ಲವನ್ನು ಕವಿ ಹೃದಯವು ಇಲ್ಲಿ ಕಾವ್ಯವಾಗಿಸಿದೆ.

About the Author

ಪು.ತಿ.ನ. (ಪು.ತಿ. ನರಸಿಂಹಾಚಾರ್ )
(17 March 1905 - 13 October 1998)

ಪುತಿನ ಎಂದು ಚಿರಪರಿಚಿತರಾಗಿದ್ದ ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಕನ್ನಡ ನವೋದಯ ಕವಿಗಳಲ್ಲಿ ಪ್ರಮುಖರು. ಮೇಲುಕೋಟೆಯಲ್ಲಿ 1905ರ ಮಾರ್ಚ್ 17ರಂದು ಜನಿಸಿದರು. ತಂದೆ ತಿರುನಾರಾಯಣ ಅಯ್ಯಂಗಾರ್, ತಾಯಿ ಶಾಂತಮ್ಮ.  ಬಾಲ್ಯದ ವಿದ್ಯಾಭ್ಯಾಸವನ್ನು ಮೇಲುಕೋಟೆ ಮತ್ತು ಮೈಸೂರಿನಲ್ಲಿ ಮುಗಿಸಿದ ನಂತರ ಬಿ.ಎ. ಪದವಿಯನ್ನು ಗಳಿಸಿದ ಮೇಲೆ ಗೋರಕ್ಷಕ ಸಮಿತಿಯಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿದರು. ಅನಂತರ ಸೈನ್ಯದ ಮುಖ್ಯಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಅದೇ ಕಚೇರಿಯಲ್ಲಿ 1938ರಲ್ಲಿ ವ್ಯವಸ್ಥಾಪಕರಾಗಿಯೂ 1945ರಲ್ಲಿ ಅಧೀಕ್ಷಕರಾಗಿಯೂ ಕೆಲಸ ಮಾಡಿದ್ದ ಅವರು ಅನಂತರ 1952ರಲ್ಲಿ ಶಾಸನ ಸಭಾ ಕಚೇರಿಯ ಸಂಪಾದಕರೂ ಆಗಿದ್ದರು. ಕನ್ನಡ ವಿಶ್ವಕೋಶದ ಕಚೇರಿಯಲ್ಲಿ ಭಾಷಾಂತರಕಾರ ...

READ MORE

Related Books