ಕೊರೊನಾ ಕವಿತೆಗಳು

Author : ಮೂಡ್ನಾಕೂಡು ಚಿನ್ನಸ್ವಾಮಿ

Pages 64

₹ 50.00
Year of Publication: 2020
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ.1, ಮಿಲ್ಕ್ ನರಸಿಂಹಯ್ಯ ಲೇಔಟ್, ಎನ್.ಆರ್.ಐ ಇನ್ಸ್ಟಿಟ್ಯೂಟ್ ಹತ್ತಿರ, ಪಾಪರೆಡ್ಡಿಪಾಳ್ಯ, ಬೆಂಗಳೂರು- 560072
Phone: 9740066842

Synopsys

‘ಕೊರೊನಾ ಕವಿತೆಗಳು’ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಕವನ ಸಂಕಲನ. 2019ರಲ್ಲಿ ಕಾಣಿಸಿಕೊಂಡ ಕೊವಿಡ್ 19 ಎಂಬ ಸಾಂಕ್ರಾಮಿಕ ರೋಗ ಇಡೀ ವಿಶ್ವ ತಲ್ಲಣಿಸುವಂತೆ ಮಾಡಿತ್ತು. ಈ ವೇಳೆಯ ತಮ್ಮ ಅನುಭವಗಳಿಗೆ ಕವಿತೆಯ ರೂಪ ನೀಡಿದ್ದ ಚಿನ್ನಸ್ವಾಮಿಯವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ಅವುಗಳನ್ನು ಹಂಚಿಕೊಳ್ಳುತ್ತಿದ್ದರು. ಅದರೊಂದಿಗೆ 2019-2020 ನೇ ವರ್ಷದ ಸಂಕಷ್ಟಗಳ ಕುರಿತು ಅವರು ಬರೆದ ಅನುಭವಾತ್ಮಕ ಕವಿತೆಗಳ ಸಂಕಲನ ಕೊರೊನ ಕವಿತೆಗಳು.

ಈ ಕೃತಿಗೆ ಬೆನ್ನುಡಿ ಬರೆದ ಡಾ. ಎಚ್.ಎಸ್. ಅನುಪಮಾ ‘ಬದುಕುಳಿಯಲು ನಾವೇನು ಮಾಡುತ್ತೇವೆನ್ನುವುದಕ್ಕೂ ಒಂದು ಮಿತಿಯಿದೆ. ಅದನ್ನು ಮರೆತ ನಮಗೆ ಬುದ್ಧಿ ಕಲಿಸಲು ಪ್ರಕೃತಿ ಕೋವಿಡ್ ವೈರಸ್ ಅನ್ನು ಒಡ್ಡಿದೆ. ಭೂಮಿ ಮೇಲಿನ ಗಿಡ, ಮರ, ಪ್ರಾಣಿ, ನದಿ, ಗುಡ್ಡ, ಬಂಡೆ, ಮಣ್ಣು, ಗಾಳಿ ಎಲ್ಲವೂ ನಮ್ಮ ಉಪಭೋಗಕ್ಕಾಗಿಯೇ ಎಂದುಕೊಂಡ ಮನುಷ್ಯ ದುರಾಸೆಗಳ ಫಲಿತ ಕೊರೊನಾ. ಆಗುತ್ತಿರುವ ಎಲ್ಲಕ್ಕೂ ನಾವೇ ನೇರ ಹೊಣೆಗಾರರು’ ಎನ್ನುತ್ತಾರೆ.

ಇಲ್ಲಿಯ ಕವಿತೆಗಳಲ್ಲಿ ಬಾಧಿತರು, ಶಂಕಿತರು, ನೆಲೆ-ಉದ್ಯೋಗ-ನಂಟು ಕಳೆದುಕೊಂಡವರು, ವಂಚಿತರೇ ಮೊದಲಾದ ಅಸಹಾಯಕ ಜೀವಗಳ ಬವಣೆಗಳನ್ನು ಚಿತ್ರಿಸಿದ್ದಾರೆ. ‘ಕೊರೊನಾ ಎಂದರೆ ಕೈ, ಬಾಯಿ, ಕಚ್ಚೆಗಳನ್ನು ಶುದ್ಧವಾಗಿಟ್ಟುಕೊಳ್ಳುವುದು’ ಎಂದು ಎಚ್ಚರಿಸುತ್ತಾರೆ. ಕನ್ನಡ ನೆಲದಲ್ಲಿ ಕುಳಿತೇ ಅಮೆರಿಕದ ಕರಿಯ ಜೀವದೊಂದಿಗೂ ನಂಟು ಸಾಧಿಸುತ್ತಾರೆ. ‘ರಕ್ತ ಅಂಟಿ ಮುಟ್ಟಾದ ರಸ್ತೆಗಳು’ ಎನ್ನುವ ಒಂದೇಸಾಲು ಮಿಲಿಯಗಟ್ಟಲೆ ವಲಸೆ ಕಾರ್ಮಿಕರ ಬವಣೆಯನ್ನು ವರ್ಣಿಸುವಷ್ಟು ಅರ್ಥವಿಸ್ತಾರ ಪಡೆದಿದೆ. ‘ಆ ತಾಯಿಯ ಜೀವದ ಹಂಸೆ ಹಾರಿ ಹೋಗಿತ್ತು’ ಎಂಬ ಸಾಲು ಬದುಕಿನ ದಾರುಣತೆಗೆ ಕಣ್ಣನ್ನು ತೇವಗೊಳಿಸುತ್ತದೆ ಎಂಬುದು ಅನುಪಮಾ ಅವರ ಅಭಿಪ್ರಾಯ.

About the Author

ಮೂಡ್ನಾಕೂಡು ಚಿನ್ನಸ್ವಾಮಿ
(22 September 1954)

ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸತ್ವಪೂರ್ಣ ದನಿಯಾಗಿರುವ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮೂಲತಃ ಗಡಿನಾಡಾದ ಚಾಮರಾಜನಗರದವರು. ಎಂ.ಕಾಂ. ಎಂ.ಎ(ಕನ್ನಡ), ಡಿ.ಲಿಟ್. ಪದವೀಧರರಾದ ಅವರು ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರಲ್ಲದೆ, ನಿರ್ದೇಶಕರು(ಹಣಕಾಸು) ಹಾಗೂ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಮಾರ್ಚ್ 2012ರಲ್ಲಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಏಪ್ರಿಲ್ 2015 ರಿಂದ ಮಾರ್ಚ್ 2017 ರವರೆಗೆ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2016-17 ರ ಸಾಲಿಗೆ ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ...

READ MORE

Related Books