ಅವರವರ ಸಾವು

Author : ಕೆ.ಪಿ. ಮೃತ್ಯುಂಜಯ

Pages 115

₹ 75.00




Year of Publication: 2004
Published by: ಅಮರ್ಥ್ಯ ಪ್ರಕಾಶನ
Address: 25/2, ಅಫೀಶಿಯಲ್ ಕ್ವಾಟ್ರಸ್, ಸುಭಾಷ್ ನಗರ, ಮಂಡ್ಯ- 571401

Synopsys

‘ಅವರವರ ಸಾವು’ ಕವಿ ಕೆ.ಪಿ. ಮೃತ್ಯುಂಜಯ ಅವರ ಕವಿತೆಗಳ ಸಂಕಲನ. ಇಡೀ ವ್ಯಕ್ತಿತ್ವವನ್ನೇ ಬುಡಮಟ್ಟ ಅಲ್ಲಾಡಿಸುವ ಸಾವಿನ ಗೂಢವೂ ಗಾಢವೂ ಆದ ಅನುಭವವನ್ನು ಮೈಮನಗಳಲ್ಲಿ ತುಂಬಿಕೊಂಡು ಧ್ಯಾನಸ್ಥರಾದ ಕವಿ. ಕೆ.ಪಿ. ಮೃತ್ಯುಂಜಯ ಅವರು ಆ ಅನುಭವದ ರೂಪ, ವಿನ್ಯಾಸಗಳನ್ನೂ, ಪರಿಣಾಮಗಳ ವಿವಿಧ ಸ್ವರೂಪಗಳನ್ನು ಶೋಧಿಸುತ್ತಾ, ತಕ್ಕಪದಗಳಲ್ಲಿ ಆರ್ತತೆಯಿಂದ ಹಿಡಿದಿಡುವ ಪ್ರಯತ್ನವನ್ನು ತಮ್ಮ ಕವಿತೆಗಳ ಮೂಲಕ ಮಾಡಿದ್ದಾರೆ. ಇಲ್ಲಿಯ ಕವಿತೆಗಳು ವಿಭಿನ್ನ ಭಾವಗಳ ಅನೇಕ ಎಳೆಗಳು ಮೇಳೈಸಿಕೊಂಡಿದ್ದು, ಇನ್ನಷ್ಟು ಅದು ಓದುಗರ ಅನುಭವವೂ ಆಗುವ ರೀತಿಯಲ್ಲಿ ಕಾವ್ಯರೂಪವನ್ನು ಪಡೆದಿರುವುದು ಗಮನಾರ್ಹ.

About the Author

ಕೆ.ಪಿ. ಮೃತ್ಯುಂಜಯ

ಕೆ.ಪಿ. ಮೃತ್ಯುಂಜಯ ಅವರು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಡಿ.ಕಲ್ಕೆರೆಯವರು. ತಂದೆ - ಪುಟ್ಟಬಸವಾಚಾರ್ ಕೆ. ತಾಯಿ- ಗಂಗಮ್ಮ. ಕನ್ನಡ ಉಪನ್ಯಾಸಕರಾಗಿದ್ದಾರೆ. ಒಂದು ಅನುರಾಗಕ್ಕಾಗಿ ಎಷ್ಟೆಲ್ಲಾ, ಮರ್ತ್ಯ ಮೀರದ ಮಾತು, ಎಲೆ ಎಸೆದ ಮರ, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ದ ನಿನ್ನಲಿ ಒಂದು ಅವರ ಪ್ರಕಟಿತ ಕವನಸಂಕಲನಗಳು. ಇವರ ಮೊದಲ ಕವನಸಂಕಲನಕ್ಕೆ 1994ರಲ್ಲಿ ಕಾಂತಾವರ ಕನ್ನಡ ಸಂಘದ ಮುದ್ದಣ್ಣ ಕಾವ್ಯ ಪುರಸ್ಕಾರ, ಎರಡನೇ ಕವನಸಂಕಲನಕ್ಕೆ ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ, ಮೂರನೇ ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ನಾಲ್ಕನೇ  ...

READ MORE

Related Books