ನನ್ನ ನಲ್ಲ

Author : ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)

Pages 99
Year of Publication: 1933
Published by: ಕರ್ನಾಟಕ ಸಾಹಿತ್ಯ ಮಂದಿರ
Address: ಧಾರವಾಡ

Synopsys

ಕವಿ ಮಧುರಚೆನ್ನ ಅವರ ಕವನ ಸಂಕಲನ-ನನ್ನ ನಲ್ಲ. ವರಕವಿ ದ.ರಾ.ಬೇಂದ್ರೆ ಕೃತಿಯ ಮುನ್ನುಡಿಯಲ್ಲಿ ’ಮಧುರಚೆನ್ನರ ಕೃತಿಯಲ್ಲಿ ವ್ಯಂಜನ ಶಕ್ತಿಯು ವಿಫುಲವಾಗಿದೆ. ಇವರ ಭಾವಾವೇಶವು ರಸಿಕರನ್ನು ಅಂತರ್ಮುಖರನ್ನಾಗಿ ಮಾಡುವುದು. ನನ್ನ ನಲ್ಲ ಕವಿತೆಯಲ್ಲಿ ಇವರ ಅಧ್ಯಾತ್ಮಿಕ ಪುನರ್ಜನ್ಮ ವಾಗಿದ್ದರೆ, ದೇವತಾಪೃಥವೀ ಕವನವು ಶಿರೋರತ್ನವಾಗಿದೆ. ಕವನದ ಬಂಧ ಒಂದಕ್ಕಿಂತ ಒಂದು ಚೆಂದ ಎಂದು ಶ್ಲಾಘಿಸಿದ್ದಾರೆ. ಮಾತ್ರವಲ್ಲ; ‘ತನ್ನ ಮನದ ಮಾತನ್ನು ಇನ್ನೊಂದು ಮನದಲ್ಲಿ ಇಳಿಸುವ ಸೃಷ್ಟಿಕ್ರಮದಲ್ಲಿಯೇ ಮಾತು ಮುತ್ತಿಟ್ಟಂತಾಗುವುದಾದರೂ ಮನಕ್ಕೆ ಮನವು ಕೂಡುವ ಮುನ್ನ ಮುತ್ತೂ ಕೂಡ ಮಾತಿಗೆ ಕೀಳಾಗುವುದು. ಇನ್ನೊಂದು ಮನವನ್ನು ಮುಟ್ಟಬೇಕೆಂಬ ಉರ್ಮಿಯು ಕವಿಯಲ್ಲಿ ಬೇಕು’ ಎಂದು ನೇರವಾಗಿ ಮಧುರಚೆನ್ನರ ಕವಿತೆಗಳನ್ನು ವಿಶ್ಲೇಷಿಸಿ, ಇಂತಹ ಗುಣ ಮಧುರಚೆನ್ನರ ಕವಿತೆಗಳಲ್ಲಿದೆ ಎಂದು ಸಂತೋಷಿಸಿದ್ದಾರೆ.

ಸಂಕಲನದಲ್ಲಿ ನನ್ನ ನಲ್ಲ, ಶಾರದೆಗೆ, ಧ್ರುವ, ರೋಹಿಣಿ, ಕೆಸರೊಳಗಿನ ಕಮಲ, ಸುಖ-ದುಃಖ , ಮಧುರಗೀತ ಸೇರಿದಂತೆ ಒಟ್ಟು 15 ದೀರ್ಘ ಕವನಗಳಿವೆ.

About the Author

ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)
(31 July 1903 - 15 August 1952)

ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು  ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...

READ MORE

Related Books