ಯಾರ ಹಂಗಿಲ್ಲ ಬೀಸುವ ಗಾಳಿಗೆ

Author : ಸತ್ಯಮಂಗಲ ಮಹಾದೇವ

Pages 104

₹ 80.00
Year of Publication: 2015
Published by: ಸಿವಿಜಿ ಬುಕ್ಸ್

Synopsys

ಸತ್ಯಮಂಗಲ ಮಹಾದೇವ ಅವರು ಭರವಸೆ ಮೂಡಿಸಿರುವ ಕವಿಗಳಲ್ಲಿ ಒಬ್ಬರು. ಇದು ಅವರ ಮೂರನೆಯ ಸಂಕಲನ. ಈ ಸಂಕಲನದ ಬೆನ್ನುಡಿಯಲ್ಲಿ  ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮಹಾದೇವ ಅವರ ಕವಿತೆಗಳ ಬಗ್ಗೆ  ’ನಮ್ಮ ಕವಿ ಸತ್ಯಮಂಗಲ ಮಹದೇವ ಅತ್ತ 'ವಾಕ್' ಮತ್ತು ಇತ್ತ ಕಾವ್ಯದ 'ಅರ್ಥ' ಎರಡನ್ನೂ ಕೂಡಿಸಿಕೊಳ್ಳುವ ಅಪಾಯವನ್ನು ಕಾವ್ಯಭಾಷೆಯ ಮೂಲಕ ಸಾಧಿಸಿಕೊಳ್ಳುತ್ತಿದ್ದಾರೆ. ಅವರು ಕೇವಲ ಅರ್ಥದ ಪಲಿಯನ್ನು ನೆಮ್ಮಿದವರಲ್ಲ ಇಂಥ ಕಾವ್ಯರಚನೆ ಯಾವತ್ತೂ ಬಿಕ್ಕಟ್ಟಿಗೆ ಒಳಗಾಗುತ್ತದೆ. ಈ ಮಾತು ಕಾಕತಾಳೀಯವಾದರೂ ಸತ್ಯಸ್ಯ ಸತ್ಯ ಕಥನ, ಮಾತಿನ ಮಹತ್ತು ಕಾವ್ಯದಲ್ಲಿ ಅಣುಕ್ಷಣ ಚರ್ಚೆಯಾಗುತ್ತದೆಂಬುದಕ್ಕೆ ಇಲ್ಲಿರುವ ಹಲವು ಕವಿತೆಗಳು ಸಾಕ್ಷಿಯನ್ನು ನುಡಿಯುತ್ತವೆ. ನಮ್ಮ ಕಾಲದ ಕಾವ್ಯದ ಓದಿನ ವಿಸ್ತರಣಿಗೆ ನೆರವಾದ ಕವಿ ಮಹದೇವ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

 

About the Author

ಸತ್ಯಮಂಗಲ ಮಹಾದೇವ
(12 June 1983)

ಕವಿ, ಲೇಖಕ ಸತ್ಯಮಂಗಲ ಮಹಾದೇವ ಅವರು ಮೂಲತ: ತುಮಕೂರು ಜಿಲ್ಲೆಯ ಜಯ ಸತ್ಯಮಂಗಲ ಗ್ರಾಮದ ದಲಿತ ಕುಟುಂಬದಲ್ಲಿ 1983ರಲ್ಲಿ ಜೂನ್ 12ರಂದು ಜನಿಸಿದರು. ತಂದೆ ರಾಜಣ್ಣ ಮತ್ತು ತಾಯಿ ಜಯಮ್ಮ. ಪದವಿ ವಿದ್ಯಾರ್ಥಿಯಾಗಿರುವಾಗಲೇ 2003ರಲ್ಲಿ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಏರ್ಪಡಿಸಿದ ಆಂತರಕಾಲೇಜು ಕವನ ಸ್ಪರ್ಧೆಯಲ್ಲಿ "ಡಾ. ದ.ರಾ ಬೇಂದ್ರೆ ಸ್ಮೃತಿ ಪ್ರಶಸ್ತಿ" ಹಾಗೂ 2015 ನೇ ಸಾಲಿನ 'ಸಂಚಯ ಸಾಹಿತ್ಯ ಪ್ರಶಸ್ತಿ' ಪಡೆದುಕೊಂಡ ಪ್ರತಿಭಾನ್ವಿತ ಕವಿ. 2005ರಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ 'ಭಾವತೀರದ ಹಾದಿಯಲ್ಲಿ' ನಂತರ 2011ರಲ್ಲಿ 'ಹೆಜ್ಜೆ ಮೂಡಿದ ಮೇಲೆ' ಎಂಬ ಎರಡು ಕವನ ಸಂಕಲನಗಳಿಂದ ಗಮನ ...

READ MORE

Conversation

Awards & Recognitions

Related Books