ಕೆ.ಪಿ. ಸುರೇಶ ಪದ್ಯಗಳು

Author : ಕೆ.ಪಿ. ಸುರೇಶ್

Pages 68

₹ 65.00




Published by: ಒನ್ ವೀಲರ್ ಪ್ರಕಾಶನ
Address: ಮಣಿಪಾಲ (ಉಡುಪಿ ಜಿಲ್ಲೆ)

Synopsys

‘ಕೆ.ಪಿ. ಸುರೇಶ ಪದ್ಯಗಳು ’ ಕೃತಿಯು ಕೆ.ಪಿ ಸುರೇಶ್ ಅವರ ಕವನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ತುಣುಕುಗಳು ಹೀಗಿವೆ : ಗೆಲ್ಲಲ್ಲಿ ಕೂತ ಮಿಂಚುಳ್ಳಿ ಪ್ರಾರ್ಥನೆ ಮಾಡುತ್ತಿರುತ್ತದೆ, ಅದರ ಪ್ರಾರ್ಥನೆ ನನಗೆ ಗೊತ್ತು ಕೆರೆ ಬತ್ತಬಾರದು, ಮನುಷ್ಯರು ಮೀನು ತಿನ್ನಬಾರದು. ಶ್ರೀ ಬಾವಲಿ ಹಗಲಿಡೀ ತಲೆ ಕೆಳಗಾಗಿ ನೇತಿರುತ್ತದೆ. ನಾವೂ ಅದರಂತೇ, ಗೆಲ್ಲಲ್ಲಿ ತಲೆಕೆಳಗಾಗಿ ನೇತರೆ ಹುಲ್ಲು, ಗಿಡ, ನಾಯಿ ಎಲ್ಲ ಬೇರೆ ತರ ಕಾಣಿಸೀತು. ಇನ್ನೂ ಎತ್ತರದಲ್ಲಿ ನೇತರೆ, ಮನುಷ್ಯರೂ ಬೇರೆ ತರ ಕಂಡಾರು ಹೀಗೆ ಶೀರ್ಷಿಕೆ ಇಲ್ಲದೇ ಬರೆಯಲಾದ ಕೆ.ಪಿ.ಸುರೇಶ್ ಕವಿತೆಗಳದು ಒಂದು ವಿಭಿನ್ನ ಪ್ರಯತ್ನ. ಇಲ್ಲಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳಲು ಕವಿ ಪಶು, ಪಕ್ಷಿ, ಕ್ರಿಮಿ, ಕೀಟಗಳ ಮಾರ್ಗ ಬಳಸಿದ್ದಾರೆ. ಕಪಿ, ಗುಬ್ಬಚ್ಚಿ, ನವಿಲು, ಕೆಂಬೂತ, ಕೊಕ್ಕರೆಗಳನ್ನು, ನಾಯಿ, ಬೆಕ್ಕುಗಳನ್ನು ನಮಗೆ ವಿಭಿನ್ನವಾಗಿ ಹೊಳೆಯಿಸುತ್ತಾರೆ ಕವಿ. ಗುಬ್ಬಚ್ಚಿಗಳ ಮೇಲೆ ಬರೆದ ಕವಿತೆ ಜಾಗತೀಕರಣದ ಮೇಲಿನ ಅದ್ಭುತ ವ್ಯಾಖ್ಯಾನದಂತೆ ಕಾಣುತ್ತದೆ.

 

About the Author

ಕೆ.ಪಿ. ಸುರೇಶ್

ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಸುಸ್ಥಿರ/ಸಾವಯವ ಕೃಷಿ,  ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...

READ MORE

Related Books