ಹೊಸಗನ್ನಡ ಕವಿತೆ

Author : ಜಿ. ಎಚ್. ನಾಯಕ

Pages 544

₹ 500.00
Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಕನ್ನಡದ ಪ್ರಸಿದ್ಧ ವಿಮರ್ಶಕರಲ್ಲಿ ಒಬ್ಬರಾದ ಜಿ.ಎಚ್‌. ನಾಯಕ ಹೊಸಗನ್ನಡ ಕವಿತೆಗಳ ಪ್ರಾತಿನಿಧಿಕ ಎನ್ನಬಹುದಾದ ಕವಿತೆಗಳನ್ನು ಸಂಪಾದಿಸಿ ನೀಡಿದ್ದಾರೆ. ಹೊಸಗನ್ನಡ ಕವಿತೆ ಮುಟ್ಟಿದ ಅತ್ಯುನ್ನತ ನೆಲೆಯನ್ನು ಸಮರ್ಥವಾಗಿ ಪ್ರತಿನಿಧಿಸುವಂತಿರುವ ಕವಿತೆಗಳು ಮತ್ತು ಕಾವ್ಯಭಾಗಗಳು ಇಲ್ಲಿವೆ. ಒಂದಿಡೀ ಶತಮಾನ ಕನ್ನಡ ಕಾವ್ಯ ಪಯಣಿಸಿದ ಹಾದಿಯಲ್ಲಿ ಕೃತಿ ಓದುಗನನ್ನು ನಡೆಸುತ್ತದೆ. 

ಇದನ್ನು ಅವಲೋಕಿಸುವವರಿಗೆ ಹೊಸಗನ್ನಡ ಕಾವ್ಯದ ವಿವಿಧ ಮಜಲುಗಳ ಪರಿಚಯ ಆಗುವುದರ ಜೊತೆಗೆ ಅದರ ಭಾಷಾ ಸಂಪತ್ತು, ವಿಲಾಸದ ದರ್ಶನವಾಗುತ್ತದೆ. ಹೊಸಗನ್ನಡ ಕಾವ್ಯದ ಇತಿಹಾಸ ಅಧ್ಯಯನ ಮಾಡುವವರು ಓದಲೇಬೇಕಾದ ಕೃತಿ ಇದು. 

About the Author

ಜಿ. ಎಚ್. ನಾಯಕ
(18 September 1935 - 26 May 2023)

’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...

READ MORE

Conversation

Related Books