ಅನಿಲ ಆರಾಧನ

Author : ಡಾ. ಧರಣೀದೇವಿ ಮಾಲಗತ್ತಿ

Pages 74

₹ 50.00
Year of Publication: 2002
Published by: ಸಂವಹನ
Address: 12/1ಎ, ಸಂಜೆ ಬಜಾರ್ ಹಿಂಭಾಗ, ಶಿವರಾಂ ಪೇಟೆ, ಮೈಸೂರು- 570001

Synopsys

‘ಅನಿಲ ಆರಾಧನ’ ಧರಣಿದೇವಿ ಮಾಲಗತ್ತಿ ಅವರ ಕಾವ್ಯ ಸಂಯೋಜನಾತ್ಮಕ ಕೃತಿ. ಈ ಕೃತಿಯ ಕುರಿತು ಧರಣಿದೇವಿ ಮಾಲಗತ್ತಿಯವರೇ ದೀರ್ಘ ವಿಶ್ಲೇಷಣಾತ್ಮಕ ಮಾತುಗಳನ್ನು ಬರೆದಿದ್ದಾರೆ. ಈ ದೀರ್ಘಕವಿತೆಯ ಅಂತಸ್ಸೂತ್ರವಾಗಿ ಮಾನವನ ಒಳತುಡಿತಗಳು, ಹುಡುಕಾಟ ಪರದಾಟಗಳು, ಅನಂತಯಾತ್ರೆಯ ಅನುಭವಗಳು ಅಡಕವಾಗಿವೆ. ಹಕ್ಕಿಗಳು ಕೈಗೊಳ್ಳುವ ಸುದೀರ್ಘ ಗಗನಗಮನ ಮನುಜನಲ್ಲಿ ವೈವಿಧ್ಯಮಯ ಭಾವತರಂಗಗಳನ್ನು ಎಬ್ಬಿಸುತ್ತದೆ. ಮಾನವ ಕತ್ತೆತ್ತಿ ನೋಡಿದಾಗ ನೀಲನಭದ ಬೆಳ್ಳಿ ಜರಿಯಂಚಿನಂತೆ ಹಾರಾಡುವ ಹಕ್ಕಿಗಳ ಸಾಲು ಅವನ ಅಂತರಂಗದ ಪ್ರವಾಸದ ಕಡೆ ಗಮನ ಸೆಳೆಯುತ್ತದೆ. ಈ ಸುಷುಪ್ತ ದೇಹವನ್ನು ಅಂತರಂಗದ ಸಮೇತ ಎಲ್ಲಿಗಾದರೂ ಒಯ್ಯಲೇಬೇಕು. ಯುಗಯುಗದ ಭಾರವನ್ನು ಕಳೆದುಕೊಳ್ಳದೆ ವಿಧಿಯಿಲ್ಲ. ಕಾಲವೇ ಹರಿಯುವಾಗ ನಾವೂ ಹರಿಯಲೇಬೇಕು. ಆಕಾಶದೂರಗಳನ್ನು ದಾಟುತ್ತಾ, ನಿರಂತರಾನ್ವೇಷಣೆಯಲ್ಲಿ ತೊಡಗುವ ಹಕ್ಕಿಗಳಂತೆ ಮಾನವನೂ ಅಂತರಂಗ ಬಹಿರಂಗಯಾತ್ರೆಗಳಲ್ಲಿ ಸದಾಕಾಲ ತೊಡಗಿರುತ್ತಾನೆ. ಶತಮಾನಗಳ ಗಾಯಗಳನ್ನು ಹೊತ್ತು, ಹೊಸಗೂಡನ್ನುಹುಡುಕುತ್ತಾ ಒಂದು ಮೂಕಭಾಷೆಯಲ್ಲಿ ಹಾಡುವ ಜೀವಿಗಳ ನಾಡಿಯ ಮಿಡಿತವನ್ನು ಹಿಡಿಯಬೇಕು. ಸಂಚಾರ ಸ್ವಪ್ನಗಳನ್ನು ಹೊತ್ತ ಜೀವಿಗಳ ಪಾದಗಳ ಕೆಳಗೆ ಹೊಸದಾರಿಗಳು ಸಾಲುಗಳಾಗಿ ತೆರೆದುಕೊಳ್ಳುತ್ತಿರುತ್ತವೆ ಎನ್ನುತ್ತಾರೆ ಲೇಖಕಿ ಧರಣಿದೇವಿ ಮಾಲಗತ್ತಿ. ಈ ಕಾವ್ಯ ಒಂದು ಸಂಯುಕ್ತ ಅಭಿವ್ಯಕ್ತಿಯಾಗಿ ಮೂಡಿಬರುವ ಹೊತ್ತಿನಲ್ಲೇ ಇದರ ಪ್ರಸ್ತುತತೆ ನಮ್ಮೆಲ್ಲರಿಗೂ ಮನದಟ್ಟಾಗಿದೆ. ಆಧುನಿಕ ಕನ್ನಡ ಕಾವ್ಯದ ಮಜಲುಗಳಾದ ನವೋದಯ, ನವ್ಯ, ದಲಿತ, ಬಂಡಾಯ, ಸ್ತ್ರೀವಾದಗಳ ಮೂಲಭೂತ ತತ್ವಗಳನ್ನು ಅರಗಿಸಿಕೊಂಡು ಭವಿಷ್ಯತ್ತಿನ ಕಡೆ ನೋಟಹರಿಸುವ ಅಪೂರ್ವ ಸಮ್ಮಿಲನ ಇದರಲ್ಲಿ ಕಂಡುಬರುವುದೊಂದು ಸೋಜಿಗ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books