ಮೌನ

Author : ಧೀರಜ್ ಗೌಡ

Pages 104

₹ 100.00




Year of Publication: 2020
Published by: ನಿತ್ಯ ಹರಿಧ್ವರ್ಣ ಪ್ರಕಾಶನ
Address: ಕಲ್ಪವೃಕ್ಷ ನಿಲಯ, ಹೊಸಕೇರಿ ರಸ್ತೆ, ಜೆ.ಪಿ. ನಗರ ಪೋಸ್ಟ್, ಸೂರನಗದ್ದೆ, ಸಾಗರ-577401
Phone: 9538325915

Synopsys

ಮೌನ ಜಾಗದಿಂದ ಮೌನ ಜಾಗಕ್ಕೆ ಎಂಬ ಉಪಶೀರ್ಷಿಕೆಯಡಿ ಕವಿ ಧೀರಜ್ ಗೌಡ ಅವರು ಬರೆದ ಕವನ ಸಂಕಲನ-ಮೌನ. ಸ್ವತಃ ಲೇಖಕರು ಮುನ್ನುಡಿಯಲ್ಲಿ ‘ಏನು ಮೌನ ಅಂದ್ರೆ?, ಮೌನ ಅಂದ್ರೆ ಏನೂ ಇಲ್ಲ ಅಂತ. ಅಲ್ಲ;“ಎಲ್ಲ ಇದೆ ಅಂತ’ ಇಲ್ಲ ‘ಎಲ್ಲಾ ಇದ್ರೂ ಏನೂ ಇಲ್ಲ ಅಂತ’ ಅಲ್ಲ ~ಏನೂ ಇಲ್ಲ ಅಂದ್ರೂ ಎಲ್ಲ ಇದೆ ಅಂತ’ ಅಲ್ಲ; ಹಿಂಗಾಗಿ, ತಲೆ ಕೆಡುತ್ತೆ ಅಲ್ವ. ಅಂತಾ ಸಮಯದಲ್ಲಿ, ಖಾಲಿ ಜಾಗದ ಖಾಲಿ ಕಾಗದ ನನ್ನ ಸಹಾಯಕ್ಕೆ ಬಂತು. ಮೌನದ ಪರಿಶೋಧನೆ ಮಾಡೋದಕ್ಕೆ ಒಳ್ಳೆ ಜಾಗ ಅನ್ನಿಸ್ತು. ಮೌನ ಜಾಗದಲ್ಲಿ ಪ್ರವಾಸ ಮಾಡೋದಕ್ಕೆ ಶುರು ಮಾಡಿದೆ. ಮೌ ಜಾಗದಲ್ಲೇ ಪ್ರಯೋಗಾನು ಮಾಡ್ತಿದ್ದೆ.’ ಎಂದು ತಾವು ರಚಿಸಿದ ಹಾಗೂ ಸಾಹಿತ್ಯ ರಚನೆಗೆ ಪ್ರೇರಣೆಯಾದ ಪರಿ ಕುರಿತು ಹೇಳಿಕೊಂಡಿದ್ದಾರೆ. ಬುದ್ಧನನ್ನು ವರ್ತಮಾನದ ಅಸ್ತ್ರವನ್ನಾಗಿ, ಬುದ್ಧನ ವ್ಯಕ್ತಿತ್ವವನ್ನೇ ತಮ್ಮ ಕವನಗಳಲ್ಲಿ ಕೇಂದ್ರೀಕರಿಸಿಕೊಂಡಿದ್ದು, ಅವರ ಧರ್ಮ-ಸಿದ್ಧಾಂತಗಳಲ್ಲ’ ಎಂದೂ ಅವರು ಕೃತಿಯ ಸ್ವರೂಪವನ್ನು ತೋರಿದ್ದಾರೆ.

About the Author

ಧೀರಜ್ ಗೌಡ

ಲೇಖಕ ಧೀರಜ್ ಗೌಡ ಅವರು ಸಾಗರದವರು. ಬಿ.ಇ. ಪದವೀಧರರು. ಬೆಂಗಳೂರಿನಲ್ಲಿ ಇನ್ ಫೋಸಿಸ್ ನಲ್ಲಿ ಎ ...

READ MORE

Related Books