ಖಾಲಿ ಹಾಳೆ: ಬರೆದುಕೊಳ್ಳುವ ಬದುಕು

Author : ಸುಮಂಗಳ ಮೂರ್ತಿ

Pages 116

₹ 120.00




Year of Publication: 2019
Published by: ದೇವಿಶ್ರೀ
Address: ಮಾರುತಿ ಎಕ್ಸಟೆನ್ಷನ್, ಮಾಲೂರು, ಕೋಲಾರ ಜಿಲ್ಲೆ.
Phone: 9980552289

Synopsys

ಸುಮಂಗಳ ಮೂರ್ತಿ ಅವರ ಕವನ ಸಂಕಲನ "ಖಾಲಿ ಹಾಳೆ, ಬರೆದುಕೊಳ್ಳುವ ಬದುಕು". ’ಬದುಕು ಒಂದು ಖಾಲಿ ಹಾಳೆ ಇದ್ದಂತೆ. ಅದನ್ನು ನಾವು ಹೇಗೆ ಬರೆಯುತ್ತೇವೊ ಹಾಗೆ ನಮ್ಮ ಬದುಕು ರೂಪುಗೊಳ್ಳುತ್ತದೆ. ಪ್ರತಿಯೊಬ್ಬರ ಜೀವನದ ಸುಂದರತೆ ಅವರೇ ರೂಪಿಸಿಕೊಳ್ಳಬೇಕಾಗುತ್ತದೆ. ಮುಖ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಹೆಚ್ಚು ಆಕರ್ಷಿಸುತ್ತದೆ’ ಎನ್ನುವ ಸುಮಂಗಳ, ತಮ್ಮ ಕವನ ಸಂಕಲನದ ಮೂಲಕ ಜೀವನ ಕುರಿತ ಕವಿತೆಗಳನ್ನು ರೂಪಿಸಿದ್ದಾರೆ.

ಜಯಂತ ಕಾಯ್ಕಿಣಿ, ಮುನ್ನುಡಿಯಲ್ಲಿ ಬರೆಯುತ್ತಾ ’ಈ ಕವನ ಸಂಕಲನದಲ್ಲಿ ಲೇಖಕಿ ತನ್ನ ಮನಸ್ಸಿನ ಭಾವನೆಗಳನ್ನು ಹೊರಚಿಮ್ಮುತ್ತಾ ಪ್ರತಿಯೊಂದು ಜೀವಿಯ ಮನದಾಳದ ಯೋಚನಾ ಲಹರಿಯನ್ನು ಬಿಂಬಿಸಿದ್ದಾರೆ. ರವಿಯ ಕಿರಣವು ಭುವಿಗೆ ಬೆಳಕು ಚೆಲ್ಲುವ ಹಾಗೆ ಪ್ರತಿಯೊಬ್ಬರ ಬಾಳಲ್ಲೂ ಬೆಳಕು ಚೆಲ್ಲಬೇಕೆಂಬ ಆಸೆ ಲೇಖಕಿಯದ್ದು. ಮಾನವನ, ಪಕ್ಷಿಗಳ, ಅಂತರಂಗದ ತರಂಗವನ್ನು ಹೊರಗೆಡವಿದ್ದಾರೆ. ಬದುಕಿನ ಚಿತ್ತಾರ ಚೆಲ್ಲಬೇಕೆಂಬ ಭಾವನೆಗಳು ಕವನಗಳಲ್ಲಿ ವ್ಯಕ್ತವಾಗುತ್ತವೆ. ಮನುಜರು ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕೆಂಬುದನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ. ತಾಯಿ ಕನ್ನಡಾಂಬೆಯನ್ನು ನೆನೆಯುತ್ತಾ ಬದುಕಿನ ಸುಂದರತೆಯನ್ನು ಬಿಂಬಿಸಿದ್ದಾರೆ. ಅಮ್ಮ ಪ್ರತಿಯೊಬ್ಬರಿಗೂ ಮೊದಲ ದೇವರು ಎಂಬ ವಾಸ್ತವತೆಯನ್ನು ಎತ್ತಿಹಿಡಿದಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಸುಮಂಗಳ ಮೂರ್ತಿ

ಕೋಲಾರ ಜಿಲ್ಲೆಯ ಮಾಲೂರಿನವರಾದ ಸುಮಂಗಳ ಮೂರ್ತಿ, ಇಂಗ್ಲಿಷ್ ಭಾಷಾ ಶಿಕ್ಷಕಿ. ಕನ್ನಡ-ಇಂಗ್ಲಿಷ್ ನಿಘಂಟು ರಚಿಸಿದ್ದಾರೆ. "ಖಾಲಿ ಹಾಳೆ-ಬರೆದುಕೊಳ್ಳುವ ಬದುಕು" ಇವರ ಚೊಚ್ಚಲ ಕವನ ಸಂಕಲನ. ...

READ MORE

Related Books