ನೆಲದ ಇಬ್ಬನಿ

Author : ಲಕ್ಷ್ಮೀನಾರಾಯಣ ವಿ.

Pages 128

₹ 125.00




Year of Publication: 2023
Published by: ಸನ್‌ಸ್ಟಾರ್‌ ಪಬ್ಲಿಷರ್‌
Address: #4/1, ಕುಪ್ಪಸ್ವಾಮಿ ಬ್ಯುಲ್ಡಿಂಗ್‌, 19ನೇ ಕ್ರಾಸ್, ಕಬ್ಬನ್‌ಪೇಟೆ, ಬೆಂಗಳೂರು - 02
Phone: 8022224143

Synopsys

‘ನೆಲದ ಇಬ್ಬನಿ’ ಲಕ್ಷ್ಮೀ ನಾರಾಯಣ ವಿ. ಅವರ ರಚನೆಯ ಹನಿಗವನವಾಗಿದೆ. “ಹಣ್ಣಾದ ಬೀಜ ಮರವಾದರೆ ಮಣ್ಣಾದ ಮನುಜ ಗೋರಿಯಾದ” ಎಂಬ ಮಾರ್ಮಿಕ ಚುಟುಕುವಿನಿಂದ ಮುಕ್ತಾಯವಾಗುತ್ತದೆ. ಈ ಕೃತಿಯಲ್ಲಿ ಹಾಸ್ಯ, ಪ್ರೀತಿ, ವಿರಹ, ಸುತ್ತ ಮುತ್ತ ನಡೆಯಬಹುದಾದ ಘಟನೆಗಳೆಲ್ಲವನ್ನು ಕವಿಗಳಾದ ಲಕ್ಷ್ಮೀ ನಾರಾಯಣ್‌ರವರು ಹಿಡಿದಿಟ್ಟಿದ್ದಾರೆ. ಒಂದಕ್ಕೊಂದು ವಿಶೇಷವಾಗಿ ಪೂರಕವಾಗಿ ಓದಿಸಿಕೊಂಡು ಹೋಗುತ್ತವೆ. ಕೆಲವೊಂದು ಮತ್ತೆ ಮತ್ತೆ ಓದಲೇಬೇಕೆನ್ನಿಸುವಷ್ಟು ಗಮನ ಸೆಳೆಯುತ್ತವೆ. ಲೇಖಕರ ಚುಟುಕುಗಳಲ್ಲಿ ನವರಸಗಳೆಲ್ಲವೂ ತುಂಬಿರುವುದರಲ್ಲಿ ಸಂದೇಹವಿಲ್ಲ.

About the Author

ಲಕ್ಷ್ಮೀನಾರಾಯಣ ವಿ.

ಲಕ್ಷ್ಮೀನಾರಾಯಣ ವಿ. ಅವರು ವೆಂಕಟಯ್ಯ ಮತ್ತು ಜಯಮ್ಮ ಎಂ.ಎನ್. ಅವರ ಮಗನಾಗಿ ಹುಲಿಯೂರುದುರ್ಗ ಹೋಬಳಿಯ ಶೃಂಗಾರಸಾಗರದಲ್ಲಿ ಜನಿಸಿದರು. ಹುಲಿಯೂರುದುರ್ಗದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿ, ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪಿ.ಯು.ಸಿ. ಯನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಕನ್ನಡ ಎಂ.ಎ. ಮಾಡಿ ನಂತರ ಕೆ.ಎಲ್.ಇ. ವಿದ್ಯಾಸಂಸ್ಥೆಯಲ್ಲಿ ಬಿ.ಇಡಿ. ಮಾಡಿದ್ದಾರೆ. ಬೆಂಗಳೂರಿನ ಇಂಡೋ ಏಷಿಯನ್ ಅಕಾಡೆಮಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ಪ್ರಾರಂಭಿಸಿ, ಪ್ರಸ್ತುತ ಅರಿಹಂತ್‌ ಪಿಯು ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯಾಭಿಮಾನಿಯಾಗಿರುವ ಅವರು ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ. ಚಿತ್ರಕಲೆಯಲ್ಲಿ ಪ್ರಾವೀಣ್ಯತೆಯ ...

READ MORE

Related Books