ಕಪ್ಪೆಚಿಪ್ಪಿನೊಳಗಿನ ಮುತ್ತು

Author : ಭುವನೇಶ್ವರಿ.ರು.ಅಂಗಡಿ

₹ 100.00
Year of Publication: 2023
Published by: ಅಂಭು ಪ್ರಕಾಶನ
Address: ಅಂಭು ಪ್ರಕಾಶನ ನಾಯಕನೂರ ತಾ-ನವಲಗುಂದ ಜಿ-ಧಾರವಾಡ-582208
Phone: 9945095539

Synopsys

'ಕಪ್ಪೆಚಿಪ್ಪಿನೊಳಗಿನ ಮುತ್ತು' ಭುವನೇಶ್ವರಿ ರು. ಅಂಗಡಿ ಅವರ ಕವನ ಸಂಕಲನ. ಮುತ್ತು ಹೇಗೆ ಕಪ್ಪೆಚಿಪ್ಪಿನೊಳಗೆ ಅಡಗಿರುತ್ತದೆಯೋ ಹಾಗೆಯೇ ಎಲೆಮರೆ ಕಾಯಿಯಂತಿದ್ದ ಕವಿಯತ್ರಿಯರು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುತ್ತಿದ್ದಾರೆ. ಕವನ ಸಂಕಲನದ ಅಡಿ ಬರಹದಂತೆ ಅವರ ಕವನಗಳಲ್ಲಿ ಕನಸುಗಳ ಬೆನ್ನು ಹತ್ತಿ ಹೊರಟಂತೆ ಭಾಸವಾಗುತ್ತದೆ. ಅಲ್ಲದೇ ನೂರು ಕವಿತೆಗಳನ್ನು ಒಳಗೊಂಡ "ಕಪ್ಪೆಚಿಪ್ಪಿನೊಳಗಿನ ಮುತ್ತು" ಎಂಬ ತಮ್ಮ ಚೊಚ್ಚಲ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದು, ಕವಿತೆ ಎನ್ನುವುದು ಬರಿ ಮನಸ್ಸಿಗೆ ಬಂದದ್ದನ್ನು ಗೀಚುವುದಲ್ಲ, ಹೃದಯಾಂತರಾಳದ ಭಾವನೆಗಳನ್ನು ಹೊರ ಹಾಕುವುದು ಎಂಬುದನ್ನು ತಮ್ಮ ಕವಿತೆಗಳ ಮೂಲಕ ಸಾದರಪಡಿಸಿದ್ದಾರೆ. ಕವಿಯತ್ರಿಯ ನೆಚ್ಚಿನ ಶಿಕ್ಷಕಿಯರಾದ ಶ್ರೀಮತಿ ಹೇಮಾ. ಭೀ. ಮೆಣಸಗಿಯವರ ಆಶೀರ್ವಾದದ ಶುಭಹಾರೈಕೆಯ ಮುನ್ನುಡಿಯಿಂದ ಮೊದಲ್ಗೊಂಡು ಶ್ರೀ ಆರ್. ಎಸ್. ಬುರುಡಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶುಭಾಶಯ ನುಡಿ ಹಾಗೂ ಕರವೀರಪ್ರಭು ಕ್ಯಾಲಕೊಂಡರವರ ಬೆನ್ನುಡಿಯೊಂದಿಗೆ ಕವನಸಂಕಲನ ಮೂಡಿ ಬಂದಿದೆ.

About the Author

ಭುವನೇಶ್ವರಿ.ರು.ಅಂಗಡಿ

ಭುವನೇಶ್ವರಿ ರು. ಅಂಗಡಿ ಅವರು ವೃತ್ತಿಯಲ್ಲಿ ಕ್ರಿಯಾಶೀಲ ಶಿಕ್ಷಕಿ. ಪ್ರವೃತ್ತಿಯಲ್ಲಿ ಸಾಹಿತಿಯಾಗಿದ್ದಾರೆ. ಕಥೆ, ಕವನ, ಹನಿಗವನ, ಹೈಕು, ಟಂಕಾ, ಲೇಖನಗಳನ್ನು ಬರೆಯುವಲ್ಲಿ ಯಶಸ್ವಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕೃತಿಗಳು: ಕಪ್ಪೆಚಿಪ್ಪಿನೊಳಗಿನ ಮುತ್ತು ...

READ MORE

Related Books