ಜಗುಲಿ

Author : ಎ. ಮಂಜುಳಾ

Pages 100

₹ 80.00
Year of Publication: 2020
Published by: ಆದಿತ್ಯ ಪ್ರಕಾಶನ
Address: ಮಾಲೂರು, ಕೋಲಾರ ಜಿಲ್ಲೆ-563130
Phone: 7624965135

Synopsys

ಕವಯತ್ರಿ ಎ. ಮಂಜುಳಾ ಅವರ ಕವನ ಸಂಕಲನ-ಜಗುಲಿ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಮಾಲೂರಿನ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ ‘ಜೀವನ ಪ್ರೀತಿ ಇವರ ಕಾವ್ಯಗಳಲ್ಲಿ ಅಂತರ್ಗತವಾಗಿದೆ. ಜಾತಿಯ ಮೂಲವನ್ನು ಪ್ರಶ್ನಿಸುತ್ತಾರೆ. ಡಾ. ಬಾಬಾಸಾಹೇಬರ ವಿಚಾರಗಳು ಈ ಅನಿಷ್ಟಗಳವನ್ನು ತೊಲಗಿಸುವ ಅಸ್ತ್ರಗಳಾಗಿವೆ ಎಂದು ಆಶಿಸುತ್ತವೆ' ಎಂದು ಪ್ರಶಂಸಿಸಿದ್ದಾರೆ.

ಕೃತಿಗೆ ಬೆನ್ನುಡಿ ಬರೆದ ಲೇಖಕಿ ಮಮತಾ ಅರಸೀಕೆರೆ ‘ಒಟ್ಟು 60 ಕವನಗಳಿರುವ ಈ ಸಂಕಲನದಲ್ಲಿ ರೂಪಕಗಳನ್ನು ಬಳಸುವ ಸಾಧ್ಯತೆಗಳನ್ನಷ್ಟೇ ಕವಿತೆಗಳಲ್ಲಿ ತರದೇ ತಮಗನ್ನಿಸುವ ಆಶಯಗಳನ್ನು ಕವಿತೆಗಳಲ್ಲಿ ತರಲು ಯತ್ನಿಸಿದ್ದರಿಂದ ಎಚ್ಚರಿಕೆ, ಅರಿವು ಸಾಮಾಜಿಕ ಕಳಕಳಿಗಳನ್ನು ಕಾಣಬಹುದು’ ಎಂದು  ಅಭಿಪ್ರಾಯಪಟ್ಟಿದ್ದಾರೆ.

About the Author

ಎ. ಮಂಜುಳಾ

ಲೇಖಕಿ ಎ. ಮಂಜುಳಾ ಅವರು ಮೂಲತಃ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಚಿಕ್ಕ ಇಗ್ಗಲೂರು ಗ್ರಾಮದವರು. ಕುಡಿಯನೂರು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ. ಇವರು ಜಗುಲಿ ಎಂಬ ಕವನ ಸಂಕಲನ ರಚಿಸಿದ್ದಾರೆ.  ...

READ MORE

Related Books