ಬೇಚಾರ ಶಹರು

Author : ಗೋಪಾಲ ತ್ರಾಸಿ

Pages 88

₹ 100.00
Published by: ಇರುವೆ ಪ್ರಕಾಶನ
Address: ಮಂಗಳೂರು
Phone: 9930262088

Synopsys

ಗೋಪಾಲ ತ್ರಾಸಿಯವರ ಮೂರನೇ ಸಂಕಲನ 'ಬೇಚಾರ ಶಹರು'. ಮುಂಬೈಯಲ್ಲಿ ನೆಲೆಸಿರುವ ಗೋಪಾಲ್ ಅವರ ಕವಿತೆಗಳ ಹಿನ್ನೆಲೆಯನ್ನು ತೆರೆದಿಡುವಲ್ಲಿ ಕೃತಿಯ ಹೆಸರು ನೆರವಾಗುತ್ತದೆ. ಸುಮಾರು 50 ಕವಿತೆಗಳನ್ನೊಳಗೊಂಡ ಈ ಕೃತಿಯಲ್ಲಿ ಕಡಲು ಮತ್ತು ಶಹರಗಳ ನಡುವೆ ತುಯ್ದಾಡುವ ಕವಿ ಮನಸ್ಸಿನ ತುಮುಲಗಳನ್ನು ಕಾಣಬಹುದು. ವೈಚಾರಿಕತೆಯ ಹಿನ್ನೆಲೆಯಿರುವ ಕಾರಣದಿಂದ ತ್ರಾಸಿಯವರ ಹಲವು ಕವಿತೆಗಳು ವ್ಯಂಗ್ಯ, ವಿಡಂಬನೆ, ರಾಜಕೀಯಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತದೆ. ಹಲವು ಕವಿತೆಗಳು ವರ್ತಮಾನದ ಜಂಜಡಗಳ ಜೊತೆಗೆ ಮುಖಾಮುಖಿಯಾಗುತ್ತವೆ. ಇಲ್ಲಿರುವ ಹೆಚ್ಚಿನ ಕವಿತೆಗಳು ಕಿರಿದಾಗಿವೆ. ಆದರೆ ಅದು ನಮ್ಮಲ್ಲಿ ಸ್ಫೋಟಿಸುವ ಭಾವ ನಿರಂತರವಾದುದು. ಅದಕ್ಕೆ ಗಡಿಗಳಿಲ್ಲ. ಗೋಪಾಲ್ ಹುಟ್ಟಿರುವುದೂ ಕಡಲ ಕರೆಯಲ್ಲಿ. ಹಾಗೆಯೇ ಈಗ ಬದುಕು ಕಟ್ಟಿಕೊಂಡಿರುವುದೂ ಕಡಲ ಕರೆಯಲ್ಲೇ. ಆದರೆ ಅದರ ತೆರೆಗಳ ಅಬ್ಬರಗಳಲ್ಲಿ ವ್ಯತ್ಯಾಸವಿದೆ. ಊರು ಮತ್ತು ಶಹರವನ್ನು ಕವಿತೆ ಹಿಡಿದಿಡುವ ಸಂದರ್ಭದಲ್ಲಿ ಕಡಲು ಹಲವು ಬಾರಿ ರೂಪಕವಾಗಿ ಕಾಣಿಸಿಕೊಳ್ಳುತ್ತದೆ. ಕಡಲ ಕರೆಯ ಚಿಪ್ಪುಗಳು ಕವನ ಈ ನಿಟ್ಟಿನಲ್ಲಿ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಅಗಾಧ ಮೌನ ನಮ್ಮನ್ನು ಮತ್ತೆ ಮತ್ತೆ ಕಾಡುವಂತಿದೆ.

Related Books